ವರ್ಗ: Virtues and Manners .
+ -

عَنْ جَابِرِ بْنِ عَبْدِ اللهِ رضي الله عنهما أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«اتَّقُوا الظُّلْمَ، فَإِنَّ الظُّلْمَ ظُلُمَاتٌ يَوْمَ الْقِيَامَةِ، وَاتَّقُوا الشُّحَّ، فَإِنَّ الشُّحَّ أَهْلَكَ مَنْ كَانَ قَبْلَكُمْ، حَمَلَهُمْ عَلَى أَنْ سَفَكُوا دِمَاءَهُمْ وَاسْتَحَلُّوا مَحَارِمَهُمْ».

[صحيح] - [رواه مسلم] - [صحيح مسلم: 2578]
المزيــد ...

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ದಬ್ಬಾಳಿಕೆಯ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ, ನಿಶ್ಚಯವಾಗಿಯೂ ದಬ್ಬಾಳಿಕೆಯು ಪುನರುತ್ಥಾನ ದಿನದಂದು ಅಂಧಕಾರಗಳಾಗಿರುತ್ತವೆ. ಜಿಪುಣತನದ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ, ನಿಶ್ಚಯವಾಗಿಯೂ ಜಿಪುಣತನವು ನಿಮಗಿಂತ ಮೊದಲಿನವರನ್ನು ನಾಶ ಮಾಡಿದೆ. ಅದು ಅವರನ್ನು ಅವರ ರಕ್ತ ಹರಿಸುವಂತೆ ಮತ್ತು ಅವರಿಗೆ ನಿಷಿದ್ಧವಾದುದನ್ನು ಧರ್ಮಸಮ್ಮತವಾಗಿ ಪರಿಗಣಿಸುವಂತೆ ಪ್ರೇರೇಪಿಸಿದೆ."

[صحيح] - [رواه مسلم] - [صحيح مسلم - 2578]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ದಬ್ಬಾಳಿಕೆಯ ಬಗ್ಗೆ ಎಚ್ಚರಿಸಿದ್ದಾರೆ. ಜನರ ಮೇಲೆ ದಬ್ಬಾಳಿಕೆ ಮಾಡುವುದು, ಸ್ವಯಂ ದಬ್ಬಾಳಿಕೆ ಮಾಡುವುದು ಮತ್ತು ಅಲ್ಲಾಹನ ವಿಷಯದಲ್ಲಿ ದಬ್ಬಾಳಿಕೆ ಮಾಡುವುದು ಇದರಲ್ಲಿ ಒಳಪಡುತ್ತದೆ. ದಬ್ಬಾಳಿಕೆ ಎಂದರೆ, ಪ್ರತಿಯೊಬ್ಬರಿಗೂ ಅವರವರ ಹಕ್ಕನ್ನು ನಿರಾಕರಿಸುವುದು. ನಿಶ್ಚಯವಾಗಿಯೂ ದಬ್ಬಾಳಿಕೆಯು ಪುನರುತ್ಥಾನ ದಿನದಂದು ಅದನ್ನು ಎಸಗಿದವರಿಗೆ ಕಷ್ಟಗಳು ಮತ್ತು ಭಯಾನಕತೆಗಳನ್ನೊಳಗೊಂಡ ಅಂಧಕಾರಗಳಾಗಿರುತ್ತವೆ. ಅವರು ಜಿಪುಣತನವನ್ನು ಕೂಡ ನಿಷೇಧಿಸಿದರು. ಅಂದರೆ ತೀವ್ರ ರೂಪದಲ್ಲಿರುವ ಜಿಪುಣತನ ಮತ್ತು ದುರಾಸೆ. ಆರ್ಥಿಕ ಹಕ್ಕುಗಳನ್ನು ನೆರವೇರಿಸುವುದರಲ್ಲಿ ನಿರ್ಲಕ್ಷ್ಯ ತೋರುವುದು ಮತ್ತು ಲೌಕಿಕ ಲಾಭಗಳನ್ನು ಪಡೆಯಲು ಅತಿಯಾದ ಉತ್ಸಾಹ ತೋರುವುದು ಇದರಲ್ಲಿ ಒಳಪಡುತ್ತವೆ. ಈ ವಿಧದ ದಬ್ಬಾಳಿಕೆಯು ನಮಗಿಂತ ಮುಂಚಿನ ಸಮುದಾಯಗಳನ್ನು ನಾಶ ಮಾಡಿದೆ. ಅದು ಅವರಲ್ಲಿ ಕೆಲವರನ್ನು ಕೊಲೆ ಮಾಡಲು ಮತ್ತು ಅಲ್ಲಾಹು ನಿಷೇಧಿಸಿದವುಗಳನ್ನು ಧರ್ಮಸಮ್ಮತಗೊಳಿಸಲು ಅವರನ್ನು ಪ್ರೇರೇಪಿಸಿದೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಉದಾರವಾಗಿ ಖರ್ಚು ಮಾಡುವುದು ಮತ್ತು ಮುಸ್ಲಿಂ ಸಹೋದರರಿಗೆ ಸಾಂತ್ವನ ಹೇಳುವುದು ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಗೆ ಕಾರಣವಾಗುತ್ತದೆ.
  2. ಜಿಪುಣತನ ಮತ್ತು ಲೋಭವು ಮನುಷ್ಯನನ್ನು ಪಾಪ, ಅಶ್ಲೀಲತೆ ಮತ್ತು ದುಷ್ಕೃತ್ಯಗಳ ಕಡೆಗೆ ಒಯ್ಯುತ್ತದೆ.
  3. ಪೂರ್ವ ಸಮುದಾಯಗಳಿಂದ ಪಾಠ ಕಲಿಯಬೇಕಾದ ಮಹತ್ವವನ್ನು ತಿಳಿಸಲಾಗಿದೆ.
ಇನ್ನಷ್ಟು