عَنِ ابْنِ عَبَّاسٍ رضي الله عنهما قَالَ:
«بَيْنَمَا جِبْرِيلُ قَاعِدٌ عِنْدَ النَّبِيِّ صَلَّى اللهُ عَلَيْهِ وَسَلَّمَ سَمِعَ نَقِيضًا مِنْ فَوْقِهِ، فَرَفَعَ رَأْسَهُ، فَقَالَ: هَذَا بَابٌ مِنَ السَّمَاءِ فُتِحَ الْيَوْمَ لَمْ يُفْتَحْ قَطُّ إِلَّا الْيَوْمَ، فَنَزَلَ مِنْهُ مَلَكٌ، فَقَالَ: هَذَا مَلَكٌ نَزَلَ إِلَى الْأَرْضِ لَمْ يَنْزِلْ قَطُّ إِلَّا الْيَوْمَ، فَسَلَّمَ، وَقَالَ: أَبْشِرْ بِنُورَيْنِ أُوتِيتَهُمَا لَمْ يُؤْتَهُمَا نَبِيٌّ قَبْلَكَ: فَاتِحَةُ الْكِتَابِ، وَخَوَاتِيمُ سُورَةِ الْبَقَرَةِ، لَنْ تَقْرَأَ بِحَرْفٍ مِنْهُمَا إِلَّا أُعْطِيتَهُ».

[صحيح] - [رواه مسلم] - [صحيح مسلم: 806]
المزيــد ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಒಮ್ಮೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಕುಳಿತಿದ್ದರು. ಆಗ ಅವರು ಮೇಲಿನಿಂದ ಒಂದು ಶಬ್ದವನ್ನು ಕೇಳಿದರು. ಅವರು (ಜಿಬ್ರೀಲ್) ತಮ್ಮ ತಲೆಯನ್ನು ಎತ್ತಿ ಹೇಳಿದರು: 'ಇದು ಆಕಾಶದ ಒಂದು ಬಾಗಿಲು, ಇದನ್ನು ಇಂದು ತೆರೆಯಲಾಗಿದೆ. ಇಂದಿನ ಹೊರತು ಹಿಂದೆಂದೂ ಇದನ್ನು ತೆರೆಯಲಾಗಿರಲಿಲ್ಲ'. ಆಗ ಅದರಿಂದ ಒಬ್ಬ ದೇವದೂತರು ಇಳಿದು ಬಂದರು. ಅವರು (ಜಿಬ್ರೀಲ್) ಹೇಳಿದರು: 'ಇವರು ಒಬ್ಬ ದೇವದೂತರು, ಇವರು ಭೂಮಿಗೆ ಇಳಿದಿದ್ದಾರೆ. ಇಂದಿನ ಹೊರತು ಹಿಂದೆಂದೂ ಇವರು ಇಳಿದಿರಲಿಲ್ಲ'. ಅವರು (ದೇವದೂತರು) ಸಲಾಮ್ ಹೇಳಿ, ಹೇಳಿದರು: 'ಎರಡು ಬೆಳಕುಗಳ ಶುಭವಾರ್ತೆ ಸ್ವೀಕರಿಸಿರಿ, ಅವೆರಡೂ ನಿಮಗೆ ನೀಡಲ್ಪಟ್ಟಿವೆ, ನಿಮಗಿಂತ ಮೊದಲು ಯಾವುದೇ ಪ್ರವಾದಿಗೂ ಅವುಗಳನ್ನು ನೀಡಲಾಗಿರಲಿಲ್ಲ: (ಅವು ಯಾವುದೆಂದರೆ) ಫಾತಿಹತುಲ್ ಕಿತಾಬ್ (ಸೂರಃ ಅಲ್-ಫಾತಿಹಾ), ಮತ್ತು ಸೂರಃ ಅಲ್-ಬಖರಾದ ಕೊನೆಯ ವಚನಗಳು. ನೀವು ಅವೆರಡರಿಂದ ಒಂದು ಅಕ್ಷರವನ್ನು ಪಠಿಸಿದರೂ, ನಿಮಗೆ ಅದನ್ನು (ಅದರಲ್ಲಿರುವ ಕೋರಿಕೆಯನ್ನು) ನೀಡಲಾಗುವುದು' ".

[صحيح] - [رواه مسلم] - [صحيح مسلم - 806]

ವಿವರಣೆ

ದೇವದೂತರಾದ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಕುಳಿತಿದ್ದರು. ಆಗ ಅವರು ಆಕಾಶದಿಂದ, ಬಾಗಿಲು ತೆರೆದಾಗ ಬರುವ ಶಬ್ದದಂತೆ ಒಂದು ಶಬ್ದವನ್ನು ಕೇಳಿದರು. ಜಿಬ್ರೀಲ್ ತಮ್ಮ ತಲೆ ಮತ್ತು ದೃಷ್ಟಿಯನ್ನು ಆಕಾಶದ ಕಡೆಗೆ ಎತ್ತಿದರು. ನಂತರ ಅವರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು: ಇದು ಆಕಾಶದ ಒಂದು ಬಾಗಿಲು. ಇದನ್ನು ಇಂದು ತೆರೆಯಲಾಗಿದೆ. ಇಂದಿನ ಹೊರತು ಹಿಂದೆಂದೂ ಇದನ್ನು ತೆರೆಯಲಾಗಿರಲಿಲ್ಲ. ಆಗ ಅದರಿಂದ ಒಬ್ಬ ದೇವದೂತರು ಭೂಮಿಗೆ ಇಳಿದು ಬಂದರು, ಅವರು ಇಂದಿನ ಹೊರತು ಹಿಂದೆಂದೂ ಇಳಿದಿರಲಿಲ್ಲ. ಆ ದೇವದೂತರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಲಾಮ್ ಹೇಳಿ, ಅವರಿಗೆ ಹೇಳಿದರು: ಎರಡು ಬೆಳಕುಗಳ ಶುಭವಾರ್ತೆ ಸ್ವೀಕರಿಸಿರಿ. ಅವೆರಡೂ ನಿಮಗೆ ನೀಡಲ್ಪಟ್ಟಿವೆ. ನಿಮಗಿಂತ ಮೊದಲು ಯಾವುದೇ ಪ್ರವಾದಿಗೂ ಅವುಗಳನ್ನು ನೀಡಲಾಗಿರಲಿಲ್ಲ; ಅವೆರಡು: ಸೂರಃ ಅಲ್-ಫಾತಿಹಾ, ಮತ್ತು ಸೂರಃ ಅಲ್-ಬಖರಾದ ಕೊನೆಯ ಎರಡು ವಚನಗಳು. ನಂತರ ಆ ದೇವದೂತರು ಹೇಳಿದರು: ಯಾರೇ ಆಗಲಿ ಅವೆರಡರಿಂದ ಒಂದು ಅಕ್ಷರವನ್ನು ಪಠಿಸಿದರೂ, ಅಲ್ಲಾಹು ಅದರಲ್ಲಿರುವ ಒಳಿತು, ಪ್ರಾರ್ಥನೆ ಮತ್ತು ಕೋರಿಕೆಯನ್ನು ಅವನಿಗೆ ನೀಡದೇ ಇರಲಾರನು.

ಹದೀಸಿನ ಪ್ರಯೋಜನಗಳು

  1. ಸೂರಃ ಅಲ್-ಫಾತಿಹಾ ಮತ್ತು ಸೂರಃ ಅಲ್-ಬಖರಾದ ಕೊನೆಯ ವಚನಗಳ ಶ್ರೇಷ್ಠತೆ, ಮತ್ತು ಅವೆರಡನ್ನೂ ಪಠಿಸಲು ಹಾಗೂ ಅವುಗಳಲ್ಲಿರುವುದರಂತೆ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಾಗಿದೆ.
  2. ಆಕಾಶಕ್ಕೆ ಬಾಗಿಲುಗಳಿವೆ, ಅವುಗಳಿಂದ ದೈವಿಕ ಆದೇಶವು ಇಳಿಯುತ್ತದೆ, ಮತ್ತು ಅವು ಅಲ್ಲಾಹನ ಆದೇಶದಿಂದಲ್ಲದೆ ತೆರೆಯಲ್ಪಡುವುದಿಲ್ಲ ಎಂದು ತಿಳಿಸಲಾಗಿದೆ.
  3. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಬಳಿಯಿದ್ದ ಗೌರವವನ್ನು ವಿವರಿಸಲಾಗಿದೆ. ಹೇಗೆಂದರೆ, ಅವನು (ಅಲ್ಲಾಹು), ಈ ಎರಡು ಜ್ಯೋತಿಗಳನ್ನು ಅವರಿಗೆ ನೀಡುವ ಮೂಲಕ ಅವರಿಗಿಂತ ಹಿಂದಿನ ಪ್ರವಾದಿಗಳಿಗೆ ನೀಡದ ಗೌರವವನ್ನು ಅವರಿಗೆ ನೀಡಿದನು.
  4. ಅಲ್ಲಾಹನ ಕಡೆಗೆ ಆಹ್ವಾನ (ದಅವತ್) ನೀಡುವ ವಿಧಾನಗಳಲ್ಲಿ ಒಂದು ಏನೆಂದರೆ, ಒಳಿತಿನ ಶುಭವಾರ್ತೆ ನೀಡುವುದು.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು