+ -

عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«صِنْفَانِ مِنْ أَهْلِ النَّارِ لَمْ أَرَهُمَا، قَوْمٌ مَعَهُمْ سِيَاطٌ كَأَذْنَابِ الْبَقَرِ يَضْرِبُونَ بِهَا النَّاسَ، وَنِسَاءٌ كَاسِيَاتٌ عَارِيَاتٌ مُمِيلَاتٌ مَائِلَاتٌ، رُؤُوسُهُنَّ كَأَسْنِمَةِ الْبُخْتِ الْمَائِلَةِ، لَا يَدْخُلْنَ الْجَنَّةَ، وَلَا يَجِدْنَ رِيحَهَا، وَإِنَّ رِيحَهَا لَيُوجَدُ مِنْ مَسِيرَةِ كَذَا وَكَذَا».

[صحيح] - [رواه مسلم] - [صحيح مسلم: 2128]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಎರಡು ವಿಧಗಳ ಜನರು ನರಕವಾಸಿಗಳಾಗಿದ್ದಾರೆ. ಆದರೆ ನಾನು ಅವರನ್ನು ಕಂಡಿಲ್ಲ. ದನದ ಬಾಲದಂತಹ ಚಾಟಿಯನ್ನು ಹಿಡಿದುಕೊಂಡು, ಅದರಿಂದ ಜನರಿಗೆ ಥಳಿಸುವವರು. ಬಟ್ಟೆ ಧರಿಸಿದ್ದರೂ ನಗ್ನರಾಗಿರುವ ಮತ್ತು (ಜನರನ್ನು ಕೆಡುಕಿನ ಕಡೆಗೆ) ವಾಲಿಸುವ ಹಾಗೂ ಸ್ವಯಂ ಅದರೆಡೆಗೆ ವಾಲುವ ಸ್ತ್ರೀಯರು. ಅವರ ತಲೆಗಳು ವಾಲಿಕೊಂಡಿರುವ ಒಂಟೆಗಳ ಗೂನುಗಳಂತಿವೆ. ಅವರು ಸ್ವರ್ಗವನ್ನು ಪ್ರವೇಶಿಸುವುದಿಲ್ಲ ಮತ್ತು ಅದರ ಪರಿಮಳವನ್ನೂ ಅನುಭವಿಸುವುದಿಲ್ಲ. ನಿಶ್ಚಯವಾಗಿಯೂ ಅದರ ಪರಿಮಳವನ್ನು ಇಂತಿಷ್ಟು ದೂರದಿಂದಲೇ ಅನುಭವಿಸಬಹುದು."

[صحيح] - [رواه مسلم] - [صحيح مسلم - 2128]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನರಕವಾಸಿಗಳಾದ ಎರಡು ವಿಧ ಜನರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಪ್ರವಾದಿ ಅವರನ್ನು ಕಂಡಿಲ್ಲ ಮತ್ತು ಅವರು ಪ್ರವಾದಿಯ ಕಾಲದಲ್ಲಿ ಇರಲಿಲ್ಲ. ಬದಲಿಗೆ, ಅವರು ಅವರ ಕಾಲಾನಂತರ ಬರುವವರಾಗಿದ್ದಾರೆ.
ಮೊದಲನೆಯ ವಿಧ: ದನದ ಉದ್ದ ಬಾಲದಂತಿರುವ ಚಾಟಿಯನ್ನು ಹಿಡಿದುಕೊಂಡಿರುವ ಜನರು. ಅವರು ಅದರಿಂದ ಜನರಿಗೆ ಥಳಿಸುತ್ತಾರೆ. ವಾಸ್ತವವಾಗಿ, ಅವರು ನಿಯಮಪಾಲಕರು ಮತ್ತು ನಿರಂಕುಶಮತಿ ದೊರೆಗಳ ಸಹಾಯಕರಾಗಿದ್ದು, ಅನ್ಯಾಯವಾಗಿ ಜನರಿಗೆ ಥಳಿಸುವವರಾಗಿದ್ದಾರೆ.
ಎರಡನೆಯ ವಿಧ: ಮಹಿಳೆಯರ ಸಹಜ ಪ್ರವೃತ್ತಿಯಾದ ಸಭ್ಯತೆ ಮತ್ತು ಸಂಕೋಚದ ಬಟ್ಟೆಯನ್ನು ಕಳಚಿಕೊಂಡು ಓಡಾಡುವ ಸ್ತ್ರೀಯರು.
ಅವರ ಒಂದು ಲಕ್ಷಣ ಏನೆಂದರೆ, ಅವರು ವಾಸ್ತವದಲ್ಲಿ ಬಟ್ಟೆ ಧರಿಸಿದ್ದರೂ ಅರ್ಥದಲ್ಲಿ ನಗ್ನರಾಗಿದ್ದಾರೆ. ಏಕೆಂದರೆ, ಅವರು ತ್ವಚೆಯನ್ನು ಬಹಿರಂಗಪಡಿಸುವ ತೆಳು ವಸ್ತ್ರವನ್ನು ಧರಿಸುತ್ತಾರೆ ಮತ್ತು ತಮ್ಮ ಸೌಂದರ್ಯವನ್ನು ತೋರಿಸಲು ದೇಹದ ಕೆಲವು ಭಾಗಗಳನ್ನು ಮುಚ್ಚಿ ಕೆಲವು ಭಾಗಗಳನ್ನು ಪ್ರದರ್ಶಿಸುತ್ತಾರೆ. ಅವರು ತಮ್ಮ ಬಟ್ಟೆಗಳಿಂದ ಮತ್ತು ವಯ್ಯಾರದಿಂದ ಗಂಡಸರ ಹೃದಯಗಳು ತಮ್ಮೆಡೆಗೆ ವಾಲುವಂತೆ ಮಾಡುತ್ತಾರೆ ಮತ್ತು ತಮ್ಮ ಹೆಗಲುಗಳನ್ನು ಬಾಗಿಸುತ್ತಾರೆ. ಅವರು ಇತರರನ್ನು ಓರೆ ಮತ್ತು ವಕ್ರದಾರಿಗೆ ವಾಲುವಂತೆ ಮಾಡುವುದಲ್ಲದೆ, ಸ್ವಯಂ ಅವರೂ ಅದರಲ್ಲಿ ಬೀಳುತ್ತಾರೆ. ಅವರ ಇನ್ನೊಂದು ಲಕ್ಷಣ ಏನೆಂದರೆ, ಅವರ ತಲೆಗಳು ವಾಲಿಕೊಂಡಿರುವ ಒಂಟೆಯ ಗೂನಿನಂತೆ ಇರುತ್ತವೆ. ಏಕೆಂದರೆ, ಅವರು ತಮ್ಮ ತಲೆಯ ಗಾತ್ರವನ್ನು ಹಿಗ್ಗಿಸುತ್ತಾರೆ ಮತ್ತು ರುಮಾಲು ಮುಂತಾದವುಗಳನ್ನು ಕಟ್ಟಿ ದೊಡ್ಡದಾಗಿ ಕಾಣುವಂತೆ ಮಾಡುತ್ತಾರೆ. ಅವರ ತಲೆಗಳ ಮೇಲೆ ಕೂದಲು ಮತ್ತು ಜಡೆಗಳು ಎತ್ತರವಾಗಿರುವುದರಿಂದ ಅದನ್ನು ಒಂಟೆಯ ಗೂನುಗಳಿಗೆ ಹೋಲಿಸಲಾಗಿದೆ. ಒಂಟೆಯ ಗೂನು ಒಂದು ಕಡೆಗೆ ವಾಲಿಕೊಂಡಿರುವಂತೆ, ಅವರು ಕೂದಲನ್ನು ಭಾಗ ಮಾಡಿ ತಲೆಯ ಒಂದು ಕಡೆಗೆ ವಾಲಿಕೊಂಡಿರುವಂತೆ ನೇಯುತ್ತಾರೆ. ಯಾರ ಲಕ್ಷಣಗಳು ಹೀಗಿರುತ್ತವೋ ಅವರಿಗೆ ಈ ಉಗ್ರ ಎಚ್ಚರಿಕೆ ಅನ್ವಯಿಸುತ್ತದೆ. ಅಂದರೆ, ಅವರು ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಅದರ ಪರಿಮಳವನ್ನು ಅನುಭವಿಸುವುದಿಲ್ಲ ಮತ್ತು ಅದರ ಹತ್ತಿರಕ್ಕೂ ತಲುಪುವುದಿಲ್ಲ. ವಾಸ್ತವದಲ್ಲಿ, ಸ್ವರ್ಗದ ಗಾಳಿಯನ್ನು ಬಹಳ ದೂರದಿಂದಲೇ ಅನುಭವಿಸಬಹುದಾಗಿದೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الأورومو الولوف
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಯಾವುದೇ ತಪ್ಪು ಮಾಡದ ಮತ್ತು ಯಾವುದೇ ಪಾಪವೆಸಗದ ಜನರಿಗೆ ಥಳಿಸುವುದು ಮತ್ತು ತೊಂದರೆ ಕೊಡುವುದು ನಿಷಿದ್ಧವಾಗಿದೆ.
  2. ದಬ್ಬಾಳಿಕೆ ಮಾಡುವವರಿಗೆ ಅವರ ದಬ್ಬಾಳಿಕೆಗೆ ಸಹಾಯ ಮಾಡುವುದು ನಿಷಿದ್ಧವಾಗಿದೆ.
  3. ಸೌಂದರ್ಯ ಪ್ರದರ್ಶನ ಮಾಡುವ ಮತ್ತು ಖಾಸಗಿ ಭಾಗಗಳು ಹಾಗೂ ದೇಹವು ಕಾಣುವ ರೀತಿಯಲ್ಲಿ ಬಿಗಿಯಾದ ಪಾರದರ್ಶಕ ಬಟ್ಟೆಯನ್ನು ಧರಿಸುವ ಮಹಿಳೆಯರಿಗೆ ಎಚ್ಚರಿಕೆ ನೀಡಲಾಗಿದೆ.
  4. ಅಲ್ಲಾಹನ ಆಜ್ಞೆಗಳಿಗೆ ನಿಷ್ಠರಾಗಿರಲು ಮತ್ತು ಅವನ ಕೋಪಕ್ಕೆ ಕಾರಣವಾಗುವ ಹಾಗೂ ಪರಲೋಕದಲ್ಲಿ ವೇದನಾಜನಕ ಶಾಶ್ವತ ಶಿಕ್ಷೆಗೆ ಅರ್ಹವಾಗುವ ಸಂಗತಿಗಳಿಂದ ದೂರವಾಗಲು ಮುಸ್ಲಿಂ ಮಹಿಳೆಯನ್ನು ಒತ್ತಾಯಿಸಲಾಗಿದೆ.
  5. ಈ ಹದೀಸ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿತ್ವದ ಚಿಹ್ನೆಗಳಲ್ಲಿ ಒಂದಾಗಿದೆ. ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅದೃಶ್ಯ ವಿಷಯಗಳ ಬಗ್ಗೆ ತಿಳಿಸಿದ್ದಾರೆ ಮತ್ತು ಅವು ಅವರು ತಿಳಿಸಿದಂತೆಯೇ ಜರುಗಿವೆ.
ಇನ್ನಷ್ಟು