عَنْ أَبِي هُرَيْرَةَ رَضِيَ اللَّهُ عَنْهُ أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«نَارُكُمْ جُزْءٌ مِنْ سَبْعِينَ جُزْءًا مِنْ نَارِ جَهَنَّمَ»، قِيلَ: يَا رَسُولَ اللَّهِ، إِنْ كَانَتْ لَكَافِيَةً. قَالَ: «فُضِّلَتْ عَلَيْهِنَّ بِتِسْعَةٍ وَسِتِّينَ جُزْءًا كُلُّهُنَّ مِثْلُ حَرِّهَا».
[صحيح] - [متفق عليه] - [صحيح البخاري: 3265]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ಉರಿಸುವ ಬೆಂಕಿ ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ." ಆಗ ಒಬ್ಬರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಈ ಬೆಂಕಿಯೇ ಸಾಕಷ್ಟು ಬಿಸಿಯಾಗಿದೆ." ಅವರು ಹೇಳಿದರು: "ಈ ಬೆಂಕಿಗೆ ಅರುವತ್ತೊಂಬತ್ತು ಭಾಗಗಳನ್ನು ಸೇರಿಸಲಾಗುತ್ತದೆ. ಪ್ರತಿಯೊಂದು ಭಾಗವೂ ಅದರಷ್ಟೇ ಉರಿಯನ್ನು ಹೊಂದಿದೆ."
[صحيح] - [متفق عليه] - [صحيح البخاري - 3265]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಇಹಲೋಕದ ಬೆಂಕಿಯು ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ. ಅಂದರೆ, ಪರಲೋಕದ ಬೆಂಕಿಯು ಇಹಲೋಕದ ಬೆಂಕಿಗಿಂತ ಅರುವತ್ತೊಂಬತ್ತು ಪಟ್ಟು ಹೆಚ್ಚು ಉರಿಯುವ ಶಕ್ತಿಯನ್ನು ಹೊಂದಿದೆ. ಪ್ರತಿಯೊಂದು ಭಾಗವೂ ಇಹಲೋಕದ ಬೆಂಕಿಯಷ್ಟೇ ಉರಿಯನ್ನು ಹೊಂದಿದೆ. ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನರಕವಾಸಿಗಳನ್ನು ಶಿಕ್ಷಿಸಲು ಇಹಲೋಕದ ಬೆಂಕಿ ಸಾಕಷ್ಟು ಉರಿಯನ್ನು ಹೊಂದಿದೆಯಲ್ಲವೇ!" ಆಗ ಅವರು ಹೇಳಿದರು: "ಪರಲೋಕದ ಬೆಂಕಿಗೆ ಇಹಲೋಕದ ಬೆಂಕಿಗಿಂತ ಅರುವತ್ತೊಂಬತ್ತು ಭಾಗ ಹೆಚ್ಚು ಉರಿಯನ್ನು ನೀಡಲಾಗಿದೆ. ಪ್ರತಿಯೊಂದು ಭಾಗವೂ ಇಹಲೋಕದ ಬೆಂಕಿಯಷ್ಟೇ ಉರಿಯನ್ನು ಹೊಂದಿವೆ."