عَنْ أَبِي هُرَيْرَةَ رضي الله عنه قَالَ:
كُنَّا مَعَ رَسُولِ اللهِ صَلَّى اللهُ عَلَيْهِ وَسَلَّمَ، إِذْ سَمِعَ وَجْبَةً، فَقَالَ النَّبِيُّ صَلَّى اللهُ عَلَيْهِ وَسَلَّمَ: «تَدْرُونَ مَا هَذَا؟» قَالَ: قُلْنَا: اللهُ وَرَسُولُهُ أَعْلَمُ، قَالَ: «هَذَا حَجَرٌ رُمِيَ بِهِ فِي النَّارِ مُنْذُ سَبْعِينَ خَرِيفًا، فَهُوَ يَهْوِي فِي النَّارِ الْآنَ حَتَّى انْتَهَى إِلَى قَعْرِهَا».
[صحيح] - [رواه مسلم] - [صحيح مسلم: 2844]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಮ್ಮೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಒಂದು ಸದ್ದು ಕೇಳಿಸಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಇದೇನೆಂದು ನಿಮಗೆ ತಿಳಿದಿದೆಯೇ?" ನಾವು ಹೇಳಿದೆವು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "ಅದು ಎಪ್ಪತ್ತು ವರ್ಷಗಳ ಹಿಂದೆ ನರಕಕ್ಕೆ ಎಸೆಯಲಾದ ಒಂದು ಕಲ್ಲು. ಅದು ನರಕದೊಳಗೆ ಬೀಳುತ್ತಾ ಇದೀಗ ಅದರ ತಳಭಾಗವನ್ನು ತಲುಪಿದೆ."
[صحيح] - [رواه مسلم] - [صحيح مسلم - 2844]
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕಾಶಕಾಯವು ಕೆಳಗೆ ಬಿದ್ದಂತಹ ಒಂದು ಕಳವಳಕಾರಿ ಸದ್ದನ್ನು ಕೇಳಿದರು. ಅವರು ತಮ್ಮ ಬಳಿಯಿದ್ದ ಸಂಗಡಿಗರೊಡನೆ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಆ ಸದ್ದಿನ ಬಗ್ಗೆ ಕೇಳಿದಾಗ, ಅವರು ಉತ್ತರಿಸಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು."
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಕೇಳಿದ ಈ ಸದ್ದು ಎಪ್ಪತ್ತು ವರ್ಷಗಳ ಹಿಂದೆ ನರಕದ ಮೇಲ್ಭಾಗದಿಂದ ಅದಕ್ಕೆ ಎಸೆಯಲಾದ ಒಂದು ಕಲ್ಲಾಗಿದೆ. ಅದು ನರಕದೊಳಗೆ ಬೀಳುತ್ತಾ, ಇದೀಗ ನೀವು ಅದರ ಸದ್ದು ಕೇಳುವಾಗ ನರಕದ ತಳಭಾಗವನ್ನು ತಲುಪಿದೆ."