عَنْ مُصْعَبِ بْنِ سَعْدٍ قَالَ: رَأَى سَعْدٌ رَضِيَ اللَّهُ عَنْهُ أَنَّ لَهُ فَضْلًا عَلَى مَنْ دُونَهُ، فَقَالَ النَّبِيُّ صَلَّى اللهُ عَلَيْهِ وَسَلَّمَ:
«هَلْ تُنْصَرُونَ وَتُرْزَقُونَ إِلَّا بِضُعَفَائِكُمْ».
[صحيح] - [رواه البخاري] - [صحيح البخاري: 2896]
المزيــد ...
ಮುಸ್'ಅಬ್ ಬಿನ್ ಸಅದ್ ರಿಂದ ವರದಿ: ಅವರು ಹೇಳಿದರು: ತನ್ನ ಕೆಳಗಿರುವವರಿಗಿಂತ (ಅಂದರೆ ದುರ್ಬಲರು ಅಥವಾ ಬಡವರಿಗಿಂತ) ತನಗೆ ಹೆಚ್ಚು ಶ್ರೇಷ್ಠತೆಯಿದೆ ಎಂದು ಸಅದ್ ಭಾವಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮಗೆ ವಿಜಯ ಮತ್ತು ಜೀವನೋಪಾಯವು ನಿಮ್ಮಲ್ಲಿರುವ ದುರ್ಬಲರ ಕಾರಣದಿಂದಲ್ಲದೆ (ಬೇರೆ ಕಾರಣದಿಂದ) ದೊರೆಯುತ್ತದೆಯೇ?"
[صحيح] - [رواه البخاري] - [صحيح البخاري - 2896]
ಸಅದ್ ಬಿನ್ ಅಬೂ ವಖ್ಖಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮ್ಮ ಶೌರ್ಯ ಇತ್ಯಾದಿಗಳ ಕಾರಣದಿಂದಾಗಿ ತಮಗಿಂತ ಕೆಳಗಿರುವ ದುರ್ಬಲರಿಗಿಂತ ತಮಗೆ ಶ್ರೇಷ್ಠತೆಯಿದೆ ಎಂದು ಭಾವಿಸಿದರು! ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿಮಗೆ ವಿಜಯ ಮತ್ತು ಜೀವನೋಪಾಯವು ನಿಮ್ಮಲ್ಲಿರುವ ದುರ್ಬಲರಿಂದಲ್ಲದೆ ದೊರೆಯುತ್ತದೆಯೇ? (ಅಂದರೆ, ಅವರ ಕಾರಣದಿಂದಲೇ ದೊರೆಯುತ್ತದೆ) – ಅವರ ಪ್ರಾರ್ಥನೆಗಳು, ಅವರ ನಮಾಝ್‌ಗಳು ಮತ್ತು ಅವರ ನಿಷ್ಕಳಂಕತೆಯ ಕಾರಣದಿಂದ. ಏಕೆಂದರೆ ಅವರು ಸಾಮಾನ್ಯವಾಗಿ ಪ್ರಾರ್ಥನೆಯಲ್ಲಿ ಹೆಚ್ಚು ನಿಷ್ಕಳಂಕರಾಗಿರುತ್ತಾರೆ, ಮತ್ತು ತಮ್ಮ ಹೃದಯಗಳು ಈ ಪ್ರಪಂಚದ ಅಲಂಕಾರಗಳಿಗೆ ಅಂಟಿಕೊಂಡಿಲ್ಲದಿರುವುದರಿಂದ ಆರಾಧನೆಯಲ್ಲಿ ಹೆಚ್ಚು ವಿನಮ್ರತೆ (ಖುಶೂಅ್) ಯುಳ್ಳವರಾಗಿರುತ್ತಾರೆ.