عَن سَهْلِ بْنِ حُنَيْفٍ رضي الله عنه أَنَّ النَّبِيَّ صَلَّى اللهُ عَلَيْهِ وَسَلَّمَ قَالَ:
«مَنْ سَأَلَ اللهَ الشَّهَادَةَ بِصِدْقٍ بَلَّغَهُ اللهُ مَنَازِلَ الشُّهَدَاءِ، وَإِنْ مَاتَ عَلَى فِرَاشِهِ».
[صحيح] - [رواه مسلم] - [صحيح مسلم: 1909]
المزيــد ...
ಸಹಲ್ ಬಿನ್ ಹನೀಫ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಅಲ್ಲಾಹನೊಡನೆ ಪ್ರಾಮಾಣಿಕವಾಗಿ ಹುತಾತ್ಮತೆಯನ್ನು ಬೇಡುತ್ತಾನೋ ಅವನನ್ನು ಅಲ್ಲಾಹು ಹುತಾತ್ಮರ ಸ್ಥಾನಗಳಿಗೆ ತಲುಪಿಸುತ್ತಾನೆ. ಅವನು ತನ್ನ ಹಾಸಿಗೆಯಲ್ಲಿ ಪ್ರಾಣ ಬಿಟ್ಟರೂ ಸಹ."
[صحيح] - [رواه مسلم] - [صحيح مسلم - 1909]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಅಲ್ಲಾಹನ ಮಾರ್ಗದಲ್ಲಿ ಹುತಾತ್ಮನಾಗಲು ಮತ್ತು ಹತನಾಗಲು ಬೇಡುತ್ತಾನೋ, ಅವನು ಸತ್ಯವಂತನಾಗಿದ್ದು ತನ್ನ ಸಂಕಲ್ಪವನ್ನು ಅಲ್ಲಾಹನಿಗಾಗಿ ನಿಷ್ಕಳಂಕಗೊಳಿಸಿದ್ದರೆ, ಅಲ್ಲಾಹು ಅವನ ಪ್ರಾಮಾಣಿಕ ಸಂಕಲ್ಪಕ್ಕೆ ತಕ್ಕಂತೆ ಅವನಿಗೆ ಹುತಾತ್ಮರ ಪದವಿಯನ್ನು ನೀಡುವನು. ಅವನು ಧರ್ಮಯುದ್ಧದಲ್ಲಿ ಪಾಲ್ಗೊಳ್ಳದೆ ತನ್ನ ಹಾಸಿಗೆಯಲ್ಲೇ ಪ್ರಾಣ ಬಿಟ್ಟರೂ ಸಹ.