عَنِ ابْنِ مَسْعُودٍ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«سَتَكُونُ أَثَرَةٌ وَأُمُورٌ تُنْكِرُونَهَا» قَالُوا: يَا رَسُولَ اللَّهِ فَمَا تَأْمُرُنَا؟ قَالَ: «تُؤَدُّونَ الحَقَّ الَّذِي عَلَيْكُمْ، وَتَسْأَلُونَ اللَّهَ الَّذِي لَكُمْ».
[صحيح] - [متفق عليه] - [صحيح البخاري: 3603]
المزيــد ...
ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಆದ್ಯತೆಗಳು ಮತ್ತು ನೀವು ಒಪ್ಪಿಕೊಳ್ಳದಂತಹ ವಿಷಯಗಳು ಇರುತ್ತವೆ." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಾವು ನಮಗೆ ಏನು ಆದೇಶಿಸುತ್ತೀರಿ?" ಅವರು ಉತ್ತರಿಸಿದರು: "ಅವರ ಹಕ್ಕುಗಳನ್ನು ನೆರವೇರಿಸಿರಿ ಮತ್ತು ನಿಮ್ಮ ಹಕ್ಕನ್ನು ಅಲ್ಲಾಹನಲ್ಲಿ ಬೇಡಿಕೊಳ್ಳಿ."
[صحيح] - [متفق عليه] - [صحيح البخاري - 3603]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಮುಸಲ್ಮಾನರ ಮೇಲೆ ಕೆಲವರು ಆಡಳಿತ ವಹಿಸುವರು. ಅವರು ಮುಸಲ್ಮಾನರ ಸಂಪತ್ತು ಹಾಗೂ ಇತರ ಲೌಕಿಕ ವಿಷಯಗಳಿಗೆ ಆದ್ಯತೆ ನೀಡುವರು. ಅವರು ಅದರೊಡನೆ ಮನಬಂದಂತೆ ವ್ಯವಹರಿಸುವರು ಮತ್ತು ಮುಸಲ್ಮಾನರಿಗೆ ಅವರ ಹಕ್ಕುಗಳನ್ನು ನಿರಾಕರಿಸುವರು. ಅವರಿಂದ ನೀವು ಒಪ್ಪಿಕೊಳ್ಳದಂತಹ ಕೆಲವು ಧಾರ್ಮಿಕ ಕಾರ್ಯಗಳು ಕೂಡ ಉಂಟಾಗುವುವು. ಆಗ ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂತೃಪ್ತನಾಗಲಿ) ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದೇನೆಂದರೆ, ಅವರು ನಿಮ್ಮ ಸಂಪತ್ತಿನಲ್ಲಿ ಮನಬಂದಂತೆ ವ್ಯವಹರಿಸುವುದನ್ನು ಕಂಡು ನೀವು ಕಡ್ಡಾಯವಾಗಿ ಮಾಡಬೇಕಾದ ಕರ್ತವ್ಯಗಳನ್ನು, ಅಂದರೆ ಅವರ ಮಾತನ್ನು ಕೇಳುವುದು ಮತ್ತು ಅನುಸರಿಸುವುದನ್ನು ನೀವು ಬಿಟ್ಟುಬಿಡಬೇಡಿ. ಬದಲಿಗೆ, ನೀವು ತಾಳ್ಮೆಯಿಂದಿರಿ, ಅವರ ಮಾತನ್ನು ಕೇಳಿರಿ ಮತ್ತು ಅನುಸರಿಸಿರಿ. ಅಧಿಕಾರದ ವಿಷಯದಲ್ಲಿ ಅವರೊಡನೆ ಜಗಳವಾಡಲು ಹೋಗಬೇಡಿ. ನಿಮ್ಮ ಹಕ್ಕುಗಳನ್ನು ಅಲ್ಲಾಹನೊಂದಿಗೆ ಬೇಡಿಕೊಳ್ಳಿ. ಅದೇ ರೀತಿ, ಅವರನ್ನು ಸರಿ ಮಾಡಲು ಮತ್ತು ಅವರ ಕೆಡುಕು-ಅನ್ಯಾಯಗಳಿಂದ ನಿಮ್ಮನ್ನು ರಕ್ಷಿಸಲು ಅಲ್ಲಾಹನೊಂದಿಗೆ ಬೇಡಿಕೊಳ್ಳಿ.