عَن أُمِّ سَلَمَةَ أُمِّ المُؤْمِنينَ زَوْجِ النَّبِيِّ صَلَّى اللهُ عَلَيْهِ وَسَلَّمَ رضي الله عنها قَالت: قَالَ رَسُولُ اللهِ صَلَّى اللهُ عَلَيْهِ وَسَلَّمَ:
«مَنْ كَانَ لَهُ ذِبْحٌ يَذْبَحُهُ فَإِذَا أُهِلَّ هِلَالُ ذِي الْحِجَّةِ، فَلَا يَأْخُذَنَّ مِنْ شَعْرِهِ، وَلَا مِنْ أَظْفَارِهِ شَيْئًا حَتَّى يُضَحِّيَ».
[صحيح] - [رواه مسلم] - [صحيح مسلم: 1977]
المزيــد ...
ಸತ್ಯವಿಶ್ವಾಸಿಗಳ ಮಾತೆ ಮತ್ತು ಪ್ರವಾದಿಪತ್ನಿಯಾದ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರಾದರೂ ಬಲಿಕೊಡಲು (ಕುರ್ಬಾನಿ ಮಾಡಲು) ಪ್ರಾಣಿಯನ್ನು ಹೊಂದಿದ್ದರೆ ಮತ್ತು ದುಲ್-ಹಿಜ್ಜಾ ತಿಂಗಳ ಚಂದ್ರನು ಕಾಣಿಸಿಕೊಂಡರೆ, ಅವನು ಬಲಿ ಕೊಡುವವರೆಗೆ (ಕುರ್ಬಾನಿ ಮಾಡುವವರೆಗೆ) ತನ್ನ ಕೂದಲು ಅಥವಾ ಉಗುರುಗಳಿಂದ ಏನನ್ನೂ ಕತ್ತರಿಸಬಾರದು."
[صحيح] - [رواه مسلم] - [صحيح مسلم - 1977]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುವುದೇನೆಂದರೆ, ಬಲಿ ಕೊಡಲು (ಕುರ್ಬಾನಿ ಮಾಡಲು) ಬಯಸುವವರು ದುಲ್-ಹಿಜ್ಜಾ ತಿಂಗಳ ಚಂದ್ರನು ಕಾಣಿಸಿಕೊಂಡರೆ, ನಂತರ ಬಲಿ ಕೊಡುವವರೆಗೆ ತಮ್ಮ ತಲೆ, ಕಂಕುಳು, ಮೀಸೆ ಅಥವಾ ಇತರ ಭಾಗಗಳ ಕೂದಲು ಅಥವಾ ಕೈ-ಕಾಲುಗಳ ಉಗುರುಗಳಿಂದ ಏನನ್ನೂ ಕತ್ತರಿಸಬಾರದು.