عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«اثْنَتَانِ فِي النَّاسِ هُمَا بِهِمْ كُفْرٌ: الطَّعْنُ فِي النَّسَبِ، وَالنِّيَاحَةُ عَلَى الْمَيِّتِ».
[صحيح] - [رواه مسلم] - [صحيح مسلم: 67]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮನುಷ್ಯರಲ್ಲಿರುವ ಎರಡು ಗುಣಗಳು ಅವರಲ್ಲಿರುವ ಸತ್ಯನಿಷೇಧದ ಲಕ್ಷಣವಾಗಿವೆ. ವಂಶವನ್ನು ಟೀಕಿಸುವುದು ಮತ್ತು ಮೃತವ್ಯಕ್ತಿಗಾಗಿ ರೋದಿಸುವುದು."
[صحيح] - [رواه مسلم] - [صحيح مسلم - 67]
ಮನುಷ್ಯರಲ್ಲಿರುವ ಎರಡು ಸತ್ಯನಿಷೇಧದ ಕರ್ಮಗಳು ಮತ್ತು ಅಜ್ಞಾನಕಾಲದ ಗುಣಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಿದ್ದಾರೆ. ಅವು:
ಒಂದು: ಜನರ ವಂಶವನ್ನು ಟೀಕಿಸುವುದು, ಅವರನ್ನು ತುಚ್ಛವಾಗಿ ಕಾಣುವುದು ಮತ್ತು ಅವರ ಮುಂದೆ ಅಹಂಕಾರದಿಂದ ವರ್ತಿಸುವುದು.
ಎರಡು: ವಿಪತ್ತು ಬಾಧಿಸಿದಾಗ ಅಲ್ಲಾಹನ ವಿಧಿಯ ಬಗ್ಗೆ ಅತೃಪ್ತಿ ಸೂಚಿಸುತ್ತಾ ಗೋಗರೆದು ಅಳುವುದು ಅಥವಾ ದುಃಖ ತಾಳಲಾರದೆ ಬಟ್ಟೆಯನ್ನು ಹರಿಯುವುದು.