عَنِ ابْنِ عُمَرَ رضي الله عنهما عَنِ النَّبِيِّ صَلَّى اللهُ عَلَيْهِ وَسَلَّمَ، قَالَ:
«مَثَلُ الْمُنَافِقِ، كَمَثَلِ الشَّاةِ الْعَائِرَةِ بَيْنَ الْغَنَمَيْنِ تَعِيرُ إِلَى هَذِهِ مَرَّةً وَإِلَى هَذِهِ مَرَّةً».
[صحيح] - [رواه مسلم] - [صحيح مسلم: 2784]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕಪಟ ವಿಶ್ವಾಸಿಯ ಉದಾಹರಣೆಯು ಎರಡು ಕುರಿಮಂದೆಯ ನಡುವೆಯಿರುವ ಒಂದು ಕುರಿಯಂತಿದೆ. ಅದು ಒಮ್ಮೆ ಈ ಮಂದೆಗೂ ಇನ್ನೊಮ್ಮೆ ಈ ಮಂದೆಗೂ ಚಲಿಸುತ್ತದೆ."
[صحيح] - [رواه مسلم] - [صحيح مسلم - 2784]
ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಪಟ ವಿಶ್ವಾಸಿಯ ಬಗ್ಗೆ ವಿವರಿಸುತ್ತಾರೆ. ಅಂದರೆ, ಅವರ ಉದಾಹರಣೆಯು ಎರಡು ಕುರಿಮಂದೆಗಳಲ್ಲಿ ಯಾವುದನ್ನು ಹಿಂಬಾಲಿಸಬೇಕು ಎಂಬುದನ್ನು ತಿಳಿಯದೆ ಅತಂತ್ರ ಸ್ಥಿತಿಯಲ್ಲಿರುವ ಒಂದು ಕುರಿಯಂತಿದೆ ಅದು ಒಮ್ಮೆ ಈ ಮಂದೆಗೂ ಇನ್ನೊಮ್ಮೆ ಆ ಮಂದೆಗೂ ಹೋಗುತ್ತದೆ. ಅವರು ಸತ್ಯವಿಶ್ವಾಸ ಮತ್ತು ಸತ್ಯನಿಷೇಧದ ನಡುವೆ ಗಲಿಬಿಲಿಯಲ್ಲಿರುತ್ತಾರೆ. ಅವರು ಬಾಹ್ಯವಾಗಿ ಮತ್ತು ಆಂತರಿಕವಾಗಿ ಸತ್ಯವಿಶ್ವಾಸಿಗಳೊಂದಿಗೂ ಇರುವುದಿಲ್ಲ ಮತ್ತು ಸತ್ಯನಿಷೇಧಿಗಳೊಂದಿಗೂ ಇರುವುದಿಲ್ಲ. ಬದಲಿಗೆ ಅವರು ಬಾಹ್ಯವಾಗಿ ಸತ್ಯ ವಿಶ್ವಾಸಿಗಳೊಂದಿಗೆ ಇದ್ದರೂ ಅವರ ಆಂತರ್ಯವು ಸಂಶಯ ಮತ್ತು ಹಿಂಜರಿಕೆಯಲ್ಲಿರುತ್ತದೆ. ಅವರು ಕೆಲವೊಮ್ಮೆ ಅವರೊಡನೆ ಸೇರಿದರೆ, ಕೆಲವೊಮ್ಮೆ ಇವರೊಡನೆ ಸೇರುತ್ತಾರೆ.