عن أبي هريرة رضي الله عنه أن رسول الله صلى الله عليه وسلم قال:
«مَنْ قَالَ: سُبْحَانَ اللهِ وَبِحَمْدِهِ، فِي يَوْمٍ مِائَةَ مَرَّةٍ، حُطَّتْ خَطَايَاهُ وَإِنْ كَانَتْ مِثْلَ زَبَدِ الْبَحْرِ».
[صحيح] - [متفق عليه] - [صحيح البخاري: 6405]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ದಿನಕ್ಕೆ ನೂರು ಬಾರಿ ‘ಸುಬ್‌ಹಾನಲ್ಲಾಹಿ ವಬಿಹಮ್ದಿಹೀ’ ಎಂದು ಹೇಳುತ್ತಾರೋ, ಅವರ ಪಾಪಗಳು ಸಮುದ್ರದ ನೊರೆಯಷ್ಟೇ ಇದ್ದರೂ ಸಹ ಅಳಿಸಿಹೋಗುತ್ತವೆ."
[صحيح] - [متفق عليه] - [صحيح البخاري - 6405]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ದಿನಕ್ಕೆ ನೂರು ಬಾರಿ ‘ಸುಬ್‌ಹಾನಲ್ಲಾಹಿ ವಬಿಹಮ್ದಿಹೀ’ ಎಂದು ಹೇಳುತ್ತಾರೋ, ಅವರ ಪಾಪಗಳನ್ನು - ಅವು ಅಲೆಗಳು ಮತ್ತು ಬಿರುಗಾಳಿಗಳು ಉಂಟಾಗುವಾಗ ಸಮುದ್ರದ ನೀರಿನ ಮೇಲೆ ಕಾಣಿಸಿಕೊಳ್ಳುವ ಬಿಳಿ ನೊರೆಯಷ್ಟಿದ್ದರೂ ಸಹ - ಅಳಿಸಲಾಗುತ್ತದೆ ಮತ್ತು ಕ್ಷಮಿಸಲಾಗುತ್ತದೆ.