عن أبي أيوب رضي الله عنه عن النبي صلى الله عليه وسلم قال:
«مَنْ قَالَ: لَا إِلَهَ إِلَّا اللهُ وَحْدَهُ لَا شَرِيكَ لَهُ، لَهُ الْمُلْكُ وَلَهُ الْحَمْدُ وَهُوَ عَلَى كُلِّ شَيْءٍ قَدِيرٌ، عَشْرَ مِرَارٍ كَانَ كَمَنْ أَعْتَقَ أَرْبَعَةَ أَنْفُسٍ مِنْ وَلَدِ إِسْمَاعِيلَ».
[صحيح] - [متفق عليه] - [صحيح مسلم: 2693]
المزيــد ...
ಅಬೂ ಅಯ್ಯೂಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಹತ್ತು ಬಾರಿ — ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ) ಎಂದು ಹೇಳುತ್ತಾನೋ, ಅವನು ಇಸ್ಮಾಯೀಲರ ಸಂತಾನದಲ್ಲಿ ಸೇರಿದ ನಾಲ್ಕು ಗುಲಾಮರನ್ನು ವಿಮೋಚನೆಗೊಳಿಸಿದವನಂತೆ ಆಗುತ್ತಾನೆ."
[صحيح] - [متفق عليه] - [صحيح مسلم - 2693]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಹತ್ತು ಬಾರಿ — ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್ ಎಂದು ಹೇಳುತ್ತಾನೋ, (ಇದರ ಅರ್ಥ: ಅಲ್ಲಾಹನನ್ನು ಹೊರತುಪಡಿಸಿ ಬೇರೆ ಯಾರೂ ಆರಾಧನೆಗೆ ಅರ್ಹರಲ್ಲ, ಅವನು ಏಕೈಕನು ಮತ್ತು ಅವನಿಗೆ ಯಾವುದೇ ಸಹಭಾಗಿಗಳಿಲ್ಲ; ಅವನು ಸಂಪೂರ್ಣ ಪ್ರಪಂಚದ ಒಡೆಯನಾಗಿದ್ದಾನೆ, ಪ್ರೀತಿ ಮತ್ತು ಮಹಿಮೆಯೊಂದಿಗೆ ಎಲ್ಲಾ ರೀತಿಯ ಪ್ರಶಂಸೆಗಳಿಗೆ ಅವನು ಮಾತ್ರ ಅರ್ಹನಾಗಿದ್ದಾನೆ, ಅವನು ಶಕ್ತಿಶಾಲಿಯಾಗಿದ್ದು ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ). ದಿನದಲ್ಲಿ ಹತ್ತು ಬಾರಿ ಈ ದಿಕ್ರ್ ಪಠಿಸುವವನು ಇಬ್ರಾಹೀಮರ ಮಗನಾದ ಇಸ್ಮಾಯೀಲರ (ಅವರಿಬ್ಬರ ಮೇಲೂ ಶಾಂತಿಯಿರಲಿ) ಸಂತಾನದಿಂದ ನಾಲ್ಕು ಗುಲಾಮರನ್ನು ಸ್ವತಂತ್ರಗೊಳಿಸಿದ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಇಲ್ಲಿ ಇಸ್ಮಾಯೀಲರ (ಅವರ ಮೇಲೆ ಶಾಂತಿಯಿರಲಿ) ಸಂತಾನವನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದೇಕೆಂದರೆ, ಅವರು ಇತರರಿಗಿಂತ ಶ್ರೇಷ್ಠರಾಗಿದ್ದಾರೆ.