عَن أُمِّ الدَّرْدَاءِ وَ أَبِي الدَّرداءِ رَضيَ اللهُ عنهما أَنَّ النَّبِيَّ صَلَّى اللهُ عَلَيْهِ وَسَلَّمَ كَانَ يَقُولُ:
«دَعْوَةُ الْمَرْءِ الْمُسْلِمِ لِأَخِيهِ بِظَهْرِ الْغَيْبِ مُسْتَجَابَةٌ، عِنْدَ رَأْسِهِ مَلَكٌ مُوَكَّلٌ كُلَّمَا دَعَا لِأَخِيهِ بِخَيْرٍ، قَالَ الْمَلَكُ الْمُوَكَّلُ بِهِ: آمِينَ وَلَكَ بِمِثْلٍ».
[صحيح] - [رواه مسلم] - [صحيح مسلم: 2733]
المزيــد ...
ಉಮ್ಮು ದರ್ದಾಅ್ ಮತ್ತು ಅಬೂ ದರ್ದಾಅ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು:
"ಒಬ್ಬ ಮುಸ್ಲಿಂ ವ್ಯಕ್ತಿಯು ತನ್ನ ಸಹೋದರನಿಗಾಗಿ ಅವನ ಅನುಪಸ್ಥಿತಿಯಲ್ಲಿ ಮಾಡುವ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ. ಅವನ ತಲೆಯ ಬಳಿ ಹೊಣೆ ವಹಿಸಿಕೊಡಲಾದ ಒಬ್ಬ ದೇವದೂತರು ಇರುತ್ತಾರೆ. ಪ್ರತಿ ಬಾರಿ ಅವನು ತನ್ನ ಸಹೋದರನಿಗಾಗಿ ಒಳಿತನ್ನು ಪ್ರಾರ್ಥಿಸಿದಾಗ, ಹೊಣೆ ವಹಿಸಿಕೊಡಲಾದ ದೇವದೂತರು ಹೇಳುತ್ತಾರೆ: 'ಆಮೀನ್ (ಅಲ್ಲಾಹನೇ, ಈ ಪ್ರಾರ್ಥನೆಯನ್ನು ಸ್ವೀಕರಿಸು), ಮತ್ತು ನಿನಗೂ ಅಂತಹದ್ದೇ ಇರಲಿ' ".
[صحيح] - [رواه مسلم] - [صحيح مسلم - 2733]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ಮುಸ್ಲಿಂ ತನ್ನ ಮುಸ್ಲಿಂ ಸಹೋದರನ ಅನುಪಸ್ಥಿತಿಯಲ್ಲಿ ಅವನಿಗಾಗಿ ಮಾಡುವ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ. ಏಕೆಂದರೆ ಅದು ನಿಷ್ಕಳಂಕತೆಯಲ್ಲಿ (ಇಖ್ಲಾಸ್) ಹೆಚ್ಚು ಪರಿಣಾಮಕಾರಿಯಾಗಿದೆ. ಪ್ರಾರ್ಥಿಸುವವನ ತಲೆಯ ಬಳಿ ಹೊಣೆ ವಹಿಸಿಕೊಡಲಾದ ಒಬ್ಬ ದೇವದೂತರು ಇರುತ್ತಾರೆ. ಪ್ರತಿ ಬಾರಿ ಅವನು ತನ್ನ ಸಹೋದರನಿಗಾಗಿ ಒಳಿತನ್ನು ಪ್ರಾರ್ಥಿಸಿದಾಗ, ಹೊಣೆ ವಹಿಸಿಕೊಡಲಾದ ದೇವದೂತರು ಹೇಳುತ್ತಾರೆ: ಆಮೀನ್, ಮತ್ತು ನೀನು ಪ್ರಾರ್ಥಿಸಿದ್ದು ನಿನಗೂ ಇರಲಿ.