عن عُقبة بن عامر الجُهني رضي الله عنه قال: قال رسولُ الله صلَّى الله عليه وسلم:
«الجاهِرُ بالقرآن كالجاهِرِ بالصَّدَقَةِ، والمُسِرُّ بالقرآن كالمُسِرِّ بالصَّدَقَة».
[صحيح] - [رواه أبو داود والترمذي والنسائي] - [سنن أبي داود: 1333]
المزيــد ...
ಉಕ್ಬ ಬಿನ್ ಆಮಿರ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಬಹಿರಂಗವಾಗಿ ಕುರ್‌ಆನ್ ಪಠಿಸುವವನು ಬಹಿರಂಗವಾಗಿ ದಾನ ಮಾಡುವವನಂತೆ. ರಹಸ್ಯವಾಗಿ ಕುರ್‌ಆನ್ ಪಠಿಸುವವನು ರಹಸ್ಯವಾಗಿ ದಾನಮಾಡುವವನಂತೆ."
[صحيح] - [رواه أبو داود والترمذي والنسائي] - [سنن أبي داود - 1333]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಎಲ್ಲರ ಮುಂದೆ ಬಹಿರಂಗವಾಗಿ ಕುರ್‌ಆನ್ ಪಠಿಸುವವನು ಎಲ್ಲರ ಮುಂದೆ ಬಹಿರಂಗವಾಗಿ ದಾನ ಮಾಡುವವನಿಗೆ ಸಮ. ಯಾರಿಗೂ ತಿಳಿಯದಂತೆ ರಹಸ್ಯವಾಗಿ ಕುರ್‌ಆನ್ ಪಠಿಸುವವನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ದಾನ ಮಾಡುವವನಿಗೆ ಸಮ.