عَنْ أَبِي هُرَيْرَةَ رضي الله عنه قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«مَا مِنْ قَوْمٍ يَقُومُونَ مِنْ مَجْلِسٍ لَا يَذْكُرُونَ اللَّهَ فِيهِ إِلَّا قَامُوا عَنْ مِثْلِ جِيفَةِ حِمَارٍ، وَكَانَ لَهُمْ حَسْرَةً».
[صحيح] - [رواه أبو داود] - [سنن أبي داود: 4855]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಗುಂಪು ಜನರು ಒಂದು ಸಭೆಯಿಂದ ಎದ್ದು ಹೋಗುವಾಗ, ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ, ಅವರು ಕತ್ತೆಯ ಹೆಣದಂತಿರುವ (ಸ್ಥಳದಿಂದ) ಎದ್ದು ಹೋದಂತೆ ಆಗುತ್ತದೆ, ಮತ್ತು ಅದು ಅವರಿಗೆ ವಿಷಾದಕ್ಕೆ ಕಾರಣವಾಗುತ್ತದೆ."
[صحيح] - [رواه أبو داود] - [سنن أبي داود - 4855]
ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಯಾವುದೇ ಗುಂಪು ಜನರು ಒಂದು ಸಭೆಯಲ್ಲಿ ಕುಳಿತು, ನಂತರ ಅದರಿಂದ ಎದ್ದು ಹೋಗುವಾಗ ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ, ಅವರು ದುರ್ನಾತ ಬೀರುವ ಮತ್ತು ಹೊಲಸಾದ ಕತ್ತೆಯ ಹೆಣದ ಸುತ್ತ ಸೇರಿಕೊಂಡು ಅಲ್ಲಿಂದ ಎದ್ದು ಹೋದಂತೆ ಆಗುತ್ತದೆ. ಏಕೆಂದರೆ ಅವರು ಅಲ್ಲಾಹನ ಸ್ಮರಣೆಯನ್ನು ಬಿಟ್ಟು ಬೇರೆ ಮಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಭೆಯು ಅವರಿಗೆ ಪುನರುತ್ಥಾನ ದಿನದಂದು ವಿಷಾದ, ನಷ್ಟ ಮತ್ತು ಶಾಶ್ವತ ದುಃಖಕ್ಕೆ ಕಾರಣವಾಗುತ್ತದೆ.