عَنْ أَنَسٍ رضي الله عنه قَالَ:
جَاءَ رَجُلٌ إِلَى النَّبِيِّ صَلَّى اللهُ عَلَيْهِ وَسَلَّمَ فَقَالَ: يَا رَسُولَ اللهِ، مَا تَرَكْتُ حَاجَّةً وَلَا دَاجَّةً إِلَّا قَدْ أَتَيْتُ، قَالَ: «أَلَيْسَ تَشْهَدُ أَنْ لَا إِلَهَ إِلَّا اللهُ وَأَنَّ مُحَمَّدًا رَسُولُ اللهِ؟» ثَلَاثَ مَرَّاتٍ. قَالَ: نَعَمْ، قَالَ: «فَإِنَّ ذَلِكَ يَأْتِي عَلَى ذَلِكَ».
[صحيح] - [رواه أبو يعلى والطبراني والضياء المقدسي] - [الأحاديث المختارة للضياء المقدسي: 1773]
المزيــد ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಚಿಕ್ಕ ಮತ್ತು ದೊಡ್ಡ ಯಾವುದೇ ಪಾಪಗಳನ್ನು ಮಾಡದೆ ಬಿಟ್ಟಿಲ್ಲ." ಅವರು ಕೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನೀನು ಸಾಕ್ಷಿ ವಹಿಸುವುದಿಲ್ಲವೇ?" ಅವರು ಇದನ್ನು ಮೂರು ಬಾರಿ ಕೇಳಿದರು. ಆ ವ್ಯಕ್ತಿ ಹೌದು ಎಂದು ಉತ್ತರಿಸಿದರು. ಅವರು ಹೇಳಿದರು: "ನಿಶ್ಚಯವಾಗಿಯೂ ಇದು ಅದರ ಮೇಲೆ ಬರುತ್ತದೆ."
[صحيح] - [رواه أبو يعلى والطبراني والضياء المقدسي] - [الأحاديث المختارة للضياء المقدسي - 1773]
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಎಲ್ಲಾ ಪಾಪಗಳನ್ನು ಮತ್ತು ದೋಷಗಳನ್ನು ಮಾಡಿದ್ದೇನೆ. ಚಿಕ್ಕ ಮತ್ತು ದೊಡ್ಡ ಪಾಪಗಳಲ್ಲಿ ಯಾವುದನ್ನು ನಾನು ಮಾಡದೆ ಬಿಟ್ಟಿಲ್ಲ. ನನಗೆ ಕ್ಷಮೆ ಸಿಗಬಹುದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುತ್ತಾರೆ: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನೀನು ಸಾಕ್ಷಿ ವಹಿಸುವುದಿಲ್ಲವೇ?" ಅವರು ಇದನ್ನು ಮೂರು ಬಾರಿ ಕೇಳಿದರು. ಆಗ ಆ ವ್ಯಕ್ತಿ: "ಹೌದು, ನಾನು ಸಾಕ್ಷಿ ವಹಿಸುತ್ತೇನೆ" ಎಂದು ಉತ್ತರಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸಾಕ್ಷಿ ವಚನಗಳ ಶ್ರೇಷ್ಠತೆಯನ್ನು ಮತ್ತು ಅದು ಪಾಪಗಳನ್ನು ಪರಿಹರಿಸುತ್ತದೆ ಎಂದು ತಿಳಿಸಿದರು. ಹಾಗೆಯೇ ಪಶ್ಚಾತಾಪವು ಅದರ ಮುಂಚಿನ ಪಾಪಗಳನ್ನು ಅಳಿಸುತ್ತದೆ ಎಂದರು.