ಹದೀಸ್‌ಗಳ ಪಟ್ಟಿ

ಅಬೂ ಅಮ್ರ್ (ಅಬೂ ಅಮ್ರ ಎಂದು ಕೂಡ ಕರೆಯಲಾಗುತ್ತದೆ) ಸುಫ್ಯಾನ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳುತ್ತಾರೆ:||ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಇಸ್ಲಾಮಿನ ಬಗ್ಗೆ, ನಿಮ್ಮ ಹೊರತು ಬೇರೆ ಯಾರಲ್ಲೂ ಕೇಳಬೇಕಾಗಿ ಬರದಂತಹ ಒಂದು ಮಾತನ್ನು ಹೇಳಿಕೊಡಿ." ಅವರು ಹೇಳಿದರು: "ನಾನು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇನೆ ಎಂದು ಹೇಳಿರಿ, ನಂತರ ದೃಢವಾಗಿ ನಿಲ್ಲಿರಿ ಒಂದು ವೇಳೆ ನಾನು ಕಡ್ಡಾಯಗೊಳಿಸಲ್ಪಟ್ಟ ನಮಾಝ್‌ಗಳನ್ನು ನಿರ್ವಹಿಸಿದರೆ, ರಮದಾನ್‌ನಲ್ಲಿ ಉಪವಾಸ ಆಚರಿಸಿದರೆ, ಹಲಾಲ್ ಅನ್ನು ಹಲಾಲ್ ಎಂದು (ಪರಿಗಣಿಸಿ) ಅನುಸರಿಸಿದರೆ, ಹರಾಮ್ ಅನ್ನು ಹರಾಮ್ ಎಂದು (ಪರಿಗಣಿಸಿ) ತ್ಯಜಿಸಿದರೆ ಶುದ್ಧಿಯು ಈಮಾನ್‌ನ (ವಿಶ್ವಾಸದ) ಅರ್ಧ ಭಾಗವಾಗಿದೆ. 'ಅಲ್‌ಹಮ್ದುಲಿಲ್ಲಾಹ್' (ಪುಣ್ಯದ) ತಕ್ಕಡಿಯನ್ನು ತುಂಬಿಸುತ್ತದೆ. 'ಸುಬ್‌ಹಾನಲ್ಲಾಹ್' ಮತ್ತು 'ಅಲ್‌ಹಮ್ದುಲಿಲ್ಲಾಹ್' ಅವೆರಡೂ ಆಕಾಶಗಳು ಮತ್ತು ಭೂಮಿಯ ನಡುವಿನ (ಅಂತರವನ್ನು ಪುಣ್ಯದಿಂದ) ತುಂಬಿಸುತ್ತವೆ ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:||"ಜನರ ಪ್ರತಿಯೊಂದು ಕೀಲು (ಮೂಳೆಯ ಸಂಧಿ) ಯ ಮೇಲೂ, ಸೂರ್ಯನು ಉದಯಿಸುವ ಪ್ರತಿಯೊಂದು ದಿನವೂ ಸದಕಾ (ದಾನ ಮಾಡುವುದು) ಕಡ್ಡಾಯವಾಗಿದೆ. ಇಬ್ಬರ ನಡುವೆ ನ್ಯಾಯ ತೀರ್ಮಾನ ಮಾಡುವುದು ಸದಕಾ ಆಗಿದೆ. ಒಬ್ಬ ವ್ಯಕ್ತಿಗೆ ಅವನ ಸವಾರಿಯ ವಿಷಯದಲ್ಲಿ ಸಹಾಯ ಮಾಡಿ, ಅವನನ್ನು ಅದರ ಮೇಲೆ ಹತ್ತಿಸುವುದು, ಅಥವಾ ಅವನ ಸರಕನ್ನು ಅದರ ಮೇಲೆ ಎತ್ತಿಡುವುದು ಸದಕಾ ಆಗಿದೆ. ಒಳ್ಳೆಯ ಮಾತು ಸದಕಾ ಆಗಿದೆ. ನೀನು ನಮಾಝ್‌ಗಾಗಿ ನಡೆಯುವ ಪ್ರತಿಯೊಂದು ಹೆಜ್ಜೆಯೂ ಸದಕಾ ಆಗಿದೆ. ದಾರಿಯಿಂದ ತೊಂದರೆಯ ವಸ್ತುವನ್ನು ತೆಗೆದುಹಾಕುವುದು ಸದಕಾ ಆಗಿದೆ ನಾನು ನಿಮಗೆ ಅಲ್ಲಾಹನನ್ನು ಭಯಪಡಲು, ಮತ್ತು (ನಿಮ್ಮ ನಾಯಕನಿಗೆ) ಕಿವಿಗೊಡಲು ಹಾಗೂ ವಿಧೇಯರಾಗಿರಲು ಉಪದೇಶಿಸುತ್ತೇನೆ. ಒಬ್ಬ ಗುಲಾಮನನ್ನು ನಿಮ್ಮ ಮೇಲೆ ನಾಯಕನಾಗಿ ನಿಯೋಜಿಸಲ್ಪಟ್ಟರೂ ಸಹ. ಏಕೆಂದರೆ, ಖಂಡಿತವಾಗಿಯೂ ನನ್ನ ನಂತರ ನಿಮ್ಮಲ್ಲಿ ಯಾರು ಬದುಕಿರುತ್ತಾರೋ, ಅವರು ಬಹಳಷ್ಟು ಭಿನ್ನಾಭಿಪ್ರಾಯಗಳನ್ನು ಕಾಣುವರು. ಆದ್ದರಿಂದ, ನೀವು ನನ್ನ ಸುನ್ನತ್ ಮತ್ತು ನನ್ನ ನಂತರ ಬರುವ ಸನ್ಮಾರ್ಗ ಪಡೆದ, ಸರಿಯಾಗಿ ಮಾರ್ಗದರ್ಶಿಸಲ್ಪಟ್ಟ ಖಲೀಫರ ಸುನ್ನತ್‌ಗೆ ಬದ್ಧರಾಗಿರಿ ಖಂಡಿತವಾಗಿಯೂ ನೀನು ಒಂದು ಮಹತ್ತರವಾದ ವಿಷಯದ ಬಗ್ಗೆ ಕೇಳಿದ್ದೀಯಾ. ಖಂಡಿತವಾಗಿಯೂ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭವಾಗಿದೆ ಯಾವುದೇ ಹಾನಿ ಅಥವಾ ಪ್ರತೀಕಾರದ ಹಾನಿ ಇರಬಾರದು ಖಂಡಿತವಾಗಿಯೂ ಅಲ್ಲಾಹು 'ಹಸನಾತ್' (ಪುಣ್ಯಗಳು/ಒಳಿತುಗಳು) ಮತ್ತು 'ಸಯ್ಯಿಆತ್' (ಪಾಪಗಳು/ಕೆಡುಕುಗಳು) ಗಳನ್ನು ಬರೆದಿದ್ದಾನೆ. ನಂತರ ಅದನ್ನು ಸ್ಪಷ್ಟಪಡಿಸಿದ್ದಾನೆ ಖಂಡಿತವಾಗಿಯೂ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: 'ಯಾರು ನನ್ನ 'ವಲೀ' (ಆಪ್ತಮಿತ್ರ) ನೊಂದಿಗೆ ದ್ವೇಷ ಸಾಧಿಸುತ್ತಾನೋ, ನಾನು ಅವನ ವಿರುದ್ಧ ಯುದ್ಧವನ್ನು ಘೋಷಿಸಿದ್ದೇನೆ. ನಾನು ನನ್ನ ದಾಸನ ಮೇಲೆ ಕಡ್ಡಾಯಗೊಳಿಸಿದ್ದಕ್ಕಿಂತ ಹೆಚ್ಚು ಪ್ರಿಯವಾದ ಬೇರೆ ಯಾವುದೇ ವಿಷಯದಿಂದ ನನ್ನ ದಾಸನು ನನ್ನ ಸಾಮೀಪ್ಯವನ್ನು ಪಡೆಯುವುದಿಲ್ಲ ನಿಮ್ಮಲ್ಲೊಬ್ಬನು, ಅವನ ಮನದ ಇಚ್ಛೆಯು ನಾನು ತಂದಿರುವುದನ್ನು (ಶರೀಅತ್‌) ಅನುಸರಿಸುವವರೆಗೆ (ಪೂರ್ಣ) ಸತ್ಯವಿಶ್ವಾಸಿಯಾಗುವುದಿಲ್ಲ ಪ್ರತಿಯೊಂದು ಅಮಲೇರಿಸುವ ವಸ್ತುವೂ ನಿಷಿದ್ಧವಾಗಿದೆ ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:||"ಒಂದು ವೇಳೆ ಜನರಿಗೆ ಅವರ ದಾವೆಗಳ (ಹೇಳಿಕೆಗಳ) ಆಧಾರದ ಮೇಲೆ (ಅವರು ಕೇಳಿದ್ದನ್ನು) ನೀಡಲಾಗುತ್ತಿದ್ದರೆ, ಖಂಡಿತವಾಗಿಯೂ ಕೆಲವರು ಇತರರ ಸಂಪತ್ತು ಮತ್ತು ರಕ್ತಕ್ಕಾಗಿ (ಅನ್ಯಾಯವಾಗಿ) ದಾವೆ ಮಾಡುತ್ತಿದ್ದರು. ಆದರೆ, ಪುರಾವೆಯು ದಾವೆ ಮಾಡುವವನ ಮೇಲಿದೆ, ಮತ್ತು ಪ್ರಮಾಣವು ನಿರಾಕರಿಸುವವನ ಮೇಲಿದೆ ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:||"ನಾಲ್ಕು (ಗುಣಲಕ್ಷಣಗಳು) ಯಾರಲ್ಲಿವೆಯೋ ಅವನು ಮುನಾಫಿಕ್ (ಕಪಟವಿಶ್ವಾಸಿ) ಆಗಿರುತ್ತಾನೆ. ಅವುಗಳಲ್ಲಿ ಒಂದು ಗುಣಲಕ್ಷಣವು ಯಾರಲ್ಲಿರುತ್ತದೆಯೋ, ಅವನು ಅದನ್ನು ಬಿಡುವವರೆಗೆ ಅವನಲ್ಲಿ 'ನಿಫಾಖ್' (ಕಪಟತನ) ದ ಒಂದು ಗುಣಲಕ್ಷಣವಿರುತ್ತದೆ: ಅವನು ಮಾತನಾಡಿದಾಗ ಸುಳ್ಳು ಹೇಳುತ್ತಾನೆ. ಅವನು ವಾಗ್ದಾನ ಮಾಡಿದಾಗ ಅದನ್ನು ಮುರಿಯುತ್ತಾನೆ. ಅವನು ಜಗಳವಾಡಿದಾಗ ಕೆಟ್ಟದಾಗಿ ವರ್ತಿಸುತ್ತಾನೆ. ಅವನು ಒಪ್ಪಂದ ಮಾಡಿಕೊಂಡಾಗ ದ್ರೋಹ ಬಗೆಯುತ್ತಾನೆ ಒಂದು ವೇಳೆ ನೀವು ಅಲ್ಲಾಹನಲ್ಲಿ ಭರವಸೆಯಿಡಬೇಕಾದ ರೀತಿಯಲ್ಲೇ ಭರವಸೆಯಿಟ್ಟಿದ್ದರೆ, ಅವನು ಹಕ್ಕಿಗಳಿಗೆ ಜೀವನೋಪಾಯವನ್ನು ನೀಡಿದಂತೆ, ನಿಮಗೂ ಜೀವನೋಪಾಯವನ್ನು ನೀಡುವನು. ಅವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೊರಡುತ್ತವೆ ಮತ್ತು ಸಂಜೆ ಹೊಟ್ಟೆ ತುಂಬಿಕೊಂಡು ಹಿಂತಿರುಗುತ್ತವೆ 'ಬಿರ್' (ಒಳಿತು/ಪುಣ್ಯ) ಎಂದರೆ ಉತ್ತಮ ನಡತೆ. 'ಇಸ್ಮ್' (ಪಾಪ) ಎಂದರೆ ಯಾವುದು ನಿನ್ನ ಮನಸ್ಸಿನಲ್ಲಿ ಸಂಶಯವನ್ನುಂಟುಮಾಡುತ್ತದೆಯೋ (ಅಥವಾ ಚುಚ್ಚುತ್ತದೆಯೋ), ಮತ್ತು ಜನರು ಅದರ ಬಗ್ಗೆ ತಿಳಿದುಕೊಳ್ಳುವುದನ್ನು ನೀನು ಇಷ್ಟಪಡುವುದಿಲ್ಲವೋ ಅದು ನಿನ್ನ ನಾಲಿಗೆಯು ಅಲ್ಲಾಹನ ಸ್ಮರಣೆಯಿಂದ ಸದಾ ಒದ್ದೆಯಾಗಿರಲಿ (ಹಸಿಯಾಗಿರಲಿ) ಖಂಡಿತವಾಗಿಯೂ ಅಲ್ಲಾಹು ನನಗಾಗಿ, ನನ್ನ ಸಮುದಾಯದ (ಜನರು ಮಾಡುವ) ಪ್ರಮಾದಗಳನ್ನು, ಮರೆವನ್ನು, ಮತ್ತು ಅವರು ಬಲವಂತದಿಂದ ಮಾಡಿರುವುದನ್ನು ಕ್ಷಮಿಸಿದ್ದಾನೆ
عربي ಆಂಗ್ಲ ಉರ್ದು
ಇಹಲೋಕದ ಬಗ್ಗೆ ವಿರಕ್ತರಾಗಿರಿ. ಆಗ ಅಲ್ಲಾಹು ನಿಮ್ಮನ್ನು ಪ್ರೀತಿಸುತ್ತಾನೆ. ಮತ್ತು ಜನರ ಬಳಿ ಇರುವುದರ ಬಗ್ಗೆ ವಿರಕ್ತರಾಗಿರಿ. ಆಗ ಜನರು ನಿಮ್ಮನ್ನು ಪ್ರೀತಿಸುತ್ತಾರೆ
عربي ಆಂಗ್ಲ ಉರ್ದು
ಜನ್ಮದಿಂದಾಗುವ ಸಂಬಂಧಗಳು ನಿಷಿದ್ಧಗೊಳಿಸುವುದನ್ನು ಸ್ತನಪಾನದಿಂದಾಗುವ ಸಂಬಂಧವೂ ನಿಷಿದ್ಧಗೊಳಿಸುತ್ತದೆ
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿಯ ಇಸ್ಲಾಂನ ಸೌಂದರ್ಯಗಳಲ್ಲಿ ಒಂದು ಏನೆಂದರೆ, ಅವನಿಗೆ ಸಂಬಂಧಿಸದ ವಿಷಯವನ್ನು ಅವನು ತ್ಯಜಿಸುವುದು
عربي ಆಂಗ್ಲ ಉರ್ದು
ನೀನು ಎಲ್ಲೇ ಇದ್ದರೂ ಅಲ್ಲಾಹನನ್ನು ಭಯಪಡು. ಕೆಟ್ಟ ಕಾರ್ಯವನ್ನು ಮಾಡಿದರೆ, ಅದರ ನಂತರ ಒಳ್ಳೆಯ ಕಾರ್ಯವನ್ನು ಮಾಡು, ಅದು ಅದನ್ನು ಅಳಿಸಿಹಾಕುತ್ತದೆ. ಮತ್ತು ಜನರೊಂದಿಗೆ ಉತ್ತಮ ನಡತೆಯಿಂದ ವರ್ತಿಸು
عربي ಆಂಗ್ಲ ಉರ್ದು
ಒಬ್ಬ ಮುಸ್ಲಿಂ ವ್ಯಕ್ತಿಯ ರಕ್ತವು (ಅವನ ಪ್ರಾಣ ತೆಗೆಯುವುದು) ಮೂರು (ಕಾರಣಗಳಲ್ಲಿ) ಒಂದರಿಂದ ಹೊರತು ಹಲಾಲ್ ಆಗುವುದಿಲ್ಲ
عربي ಆಂಗ್ಲ ಉರ್ದು
'ಫರಾಇದ್'ಗಳನ್ನು (ಆಸ್ತಿಯ ನಿಗದಿತ ಪಾಲುಗಳನ್ನು) ಅವುಗಳ ಹಕ್ಕುದಾರರಿಗೆ ತಲುಪಿಸಿರಿ. ನಂತರ ಏನು ಉಳಿಯುತ್ತದೆಯೋ, ಅದು ಅತ್ಯಂತ ಹತ್ತಿರದ ಪುರುಷ ಸಂಬಂಧಿಗೆ ಸೇರುತ್ತದೆ
عربي ಆಂಗ್ಲ ಉರ್ದು
ಆದಮರ ಮಗನು (ಮನುಷ್ಯನು) ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ತುಂಬಲಿಲ್ಲ. ಆದಮರ ಮಗನಿಗೆ ಅವನ ಬೆನ್ನು ನೇರವಾಗಿಡಲು ಕೆಲವು ತುತ್ತುಗಳು ಸಾಕಾಗುತ್ತವೆ. ಒಂದು ವೇಳೆ (ಹೆಚ್ಚು ತಿನ್ನುವುದು) ಅನಿವಾರ್ಯವಾದರೆ, (ಅವನ ಹೊಟ್ಟೆಯ) ಮೂರನೇ ಒಂದು ಭಾಗವು ಅವನ ಆಹಾರಕ್ಕಾಗಿ, ಮೂರನೇ ಒಂದು ಭಾಗವು ಅವನ ಪಾನೀಯಕ್ಕಾಗಿ, ಮತ್ತು ಮೂರನೇ ಒಂದು ಭಾಗವು ಅವನ ಉಸಿರಾಟಕ್ಕಾಗಿ (ಇರಲಿ)
عربي ಆಂಗ್ಲ ಉರ್ದು