عَنْ جَابِرِ بْنِ عَبْدِ اللَّهِ رَضِيَ اللَّهُ عَنْهُمَا أَنَّهُ سَمِعَ رَسُولَ اللَّهِ صَلَّى اللهُ عَلَيْهِ وَسَلَّمَ، يَقُولُ عَامَ الفَتْحِ وَهُوَ بِمَكَّةَ:
«إِنَّ اللَّهَ وَرَسُولَهُ حَرَّمَ بَيْعَ الخَمْرِ، وَالمَيْتَةِ وَالخِنْزِيرِ وَالأَصْنَامِ»، فَقِيلَ: يَا رَسُولَ اللَّهِ، أَرَأَيْتَ شُحُومَ المَيْتَةِ، فَإِنَّهَا يُطْلَى بِهَا السُّفُنُ، وَيُدْهَنُ بِهَا الجُلُودُ، وَيَسْتَصْبِحُ بِهَا النَّاسُ؟ فَقَالَ: «لاَ، هُوَ حَرَامٌ»، ثُمَّ قَالَ رَسُولُ اللَّهِ صَلَّى اللهُ عَلَيْهِ وَسَلَّمَ عِنْدَ ذَلِكَ: «قَاتَلَ اللَّهُ اليَهُودَ إِنَّ اللَّهَ لَمَّا حَرَّمَ شُحُومَهَا جَمَلُوهُ، ثُمَّ بَاعُوهُ، فَأَكَلُوا ثَمَنَهُ».
[صحيح] - [متفق عليه] - [صحيح البخاري: 2236]
المزيــد ...
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾ ವಿಜಯದ ವರ್ಷ ಮಕ್ಕಾದಲ್ಲಿದ್ದಾಗ ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ:
"ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಮದ್ಯ, ಸತ್ತ ಪ್ರಾಣಿ, ಹಂದಿ ಮಾಂಸ ಮತ್ತು ವಿಗ್ರಹಗಳ ಮಾರಾಟವನ್ನು ನಿಷೇಧಿಸಿದ್ದಾರೆ." ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸತ್ತ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಲಾಗಿದೆಯೇ? ಏಕೆಂದರೆ, ಇದನ್ನು ಹಡಗುಗಳಿಗೆ ಲೇಪಿಸಲು ಮತ್ತು ತೊಗಲನ್ನು ಹದಗೊಳಿಸಲು ಬಳಸಲಾಗುತ್ತದೆ. ಜನರು ಇದನ್ನು ದೀಪ ಉರಿಸಲು ಕೂಡ ಬಳಸುತ್ತಾರೆ." ಅವರು ಹೇಳಿದರು: "ಇಲ್ಲ. ಅದು ನಿಷೇಧಿಸಲಾಗಿದೆ." ನಂತರ ಇದಕ್ಕೆ ಸಂಬಂಧಿಸಿ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಹೂದಿಗಳನ್ನು ನಾಶಗೊಳಿಸಲಿ. ಅಲ್ಲಾಹು ಅವರಿಗೆ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಿದಾಗ, ಅವರು ಅದನ್ನು ಕರಗಿಸಿ, ಅದರ ಎಣ್ಣೆಯನ್ನು ಮಾರಾಟ ಮಾಡಿದರು ಮತ್ತು ಅದರ ಹಣವನ್ನು ತಿಂದು ತೇಗಿದರು."
[صحيح] - [متفق عليه] - [صحيح البخاري - 2236]
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾ ವಿಜಯದ ವರ್ಷ ಮಕ್ಕಾದಲ್ಲಿದ್ದಾಗ ಹೀಗೆ ಹೇಳುವುದನ್ನು ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಮದ್ಯ, ಸತ್ತ ಪ್ರಾಣಿ, ಹಂದಿ ಮಾಂಸ ಮತ್ತು ವಿಗ್ರಹಗಳ ಮಾರಾಟವನ್ನು ನಿಷೇಧಿಸಿದ್ದಾರೆ." ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಸತ್ತ ಪ್ರಾಣಿಗಳ ಕೊಬ್ಬನ್ನು ಮಾರಾಟ ಮಾಡಬಹುದೇ? ಏಕೆಂದರೆ, ಹಡಗುಗಳಿಗೆ ಲೇಪಿಸಲು, ತೊಗಲನ್ನು ಹದಗೊಳಿಸಲು ಮತ್ತು ಜನರು ದೀಪ ಉರಿಸಲು ಇದನ್ನು ಬಳಸುತ್ತಾರೆ." ಆಗ ಅವರು ಹೇಳಿದರು: "ಇಲ್ಲ, ಅದರ ಮಾರಾಟವನ್ನು ನಿಷೇಧಿಸಲಾಗಿದೆ." ನಂತರ ಇದಕ್ಕೆ ಸಂಬಂಧಿಸಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಹೂದಿಗಳನ್ನು ನಾಶಗೊಳಿಸಲಿ ಮತ್ತು ಶಪಿಸಲಿ. ಅಲ್ಲಾಹು ಅವರಿಗೆ ಜಾನುವಾರುಗಳ ಕೊಬ್ಬನ್ನು ನಿಷೇಧಿಸಿದಾಗ, ಅವರು ಅದನ್ನು ಕರಗಿಸಿದರು. ನಂತರ ಅದರ ಎಣ್ಣೆಯನ್ನು ಮಾರಾಟ ಮಾಡಿ ಅದರ ಹಣವನ್ನು ತಿಂದು ತೇಗಿದರು."