ವರ್ಗ:
+ -

عَنْ أُمِّ المُؤْمِنِينَ أُمِّ عَبْدِ اللَّهِ عَائِشَةَ رَضِيَ اللَّهُ عَنْهَا، قَالَتْ: قَالَ: رَسُولُ اللَّهِ صَلَّى اللَّهُ عَلَيْهِ وَسَلَّم:
«مَنْ أَحْدَثَ فِي أَمْرِنَا هَذَا مَا لَيْسَ مِنْهُ فَهُوَ رَدٌّ». وَفِي رِوَايَةٍ لِمُسْلِمٍ: «مَنْ عَمِلَ عَمَلًا لَيْسَ عَلَيْهِ أَمْرُنَا فَهُوَ رَدٌّ».

[صحيح] - [رواه البخاري ومسلم] - [الأربعون النووية: 5]
المزيــد ...

ಸತ್ಯವಿಶ್ವಾಸಿಗಳ ಮಾತೆ, ಉಮ್ಮು ಅಬ್ದುಲ್ಲಾ, ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ನಮ್ಮ ಈ ವಿಷಯದಲ್ಲಿ (ಧರ್ಮದಲ್ಲಿ) ಅದರಲ್ಲಿಲ್ಲದನ್ನು ಹೊಸದಾಗಿ ಸೇರಿಸುತ್ತಾನೋ (ಆವಿಷ್ಕರಿಸುತ್ತಾನೋ), ಅದು ತಿರಸ್ಕೃತವಾಗಿದೆ."

[صحيح] - [رواه البخاري ومسلم] - [الأربعون النووية - 5]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಧರ್ಮದಲ್ಲಿ ಹೊಸದಾದ ಒಂದು ಕಾರ್ಯವನ್ನು ಯಾರಾದರೂ ಆವಿಷ್ಕರಿಸಿದರೆ, ಅಥವಾ ಕುರ್‌ಆನ್ ಮತ್ತು ಸುನ್ನತ್‌ನಲ್ಲಿ ಆಧಾರವಿಲ್ಲದ ಒಂದು ಕಾರ್ಯವನ್ನು ಮಾಡಿದರೆ, ಅದು ತಿರಸ್ಕೃತವಾಗಿದೆ. ಅಲ್ಲಾಹು ಅದನ್ನು ಸ್ವೀಕರಿಸುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ಆರಾಧನಾ ಕರ್ಮಗಳು ಕುರ್‌ಆನ್ ಮತ್ತು ಸುನ್ನತ್‌ನ ಮೇಲೆ ಆಧಾರಿತವಾಗಿವೆ. ನಾವು ಅಲ್ಲಾಹನನ್ನು ಅವನು ಕಲಿಸಿಕೊಟ್ಟ ರೀತಿಯಲ್ಲಿ ಆರಾಧಿಸುತ್ತೇವೆಯೇ ಹೊರತು ನೂತನ ಆವಿಷ್ಕಾರಗಳ ಮೂಲಕ ಆರಾಧಿಸುವುದಿಲ್ಲ.
  2. ಧರ್ಮವು ವೈಯುಕ್ತಿಕ ಅಭಿಪ್ರಾಯ ಮತ್ತು ಆದ್ಯತೆಗಳ ಮೇಲೆ ಆಧಾರಿತವಾಗಿಲ್ಲ, ಬದಲಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಣೆಯ ಮೇಲೆ ಆಧಾರಿತವಾಗಿದೆ.
  3. ಈ ಹದೀಸ್ ಧರ್ಮದ ಸಂಪೂರ್ಣತೆಯನ್ನು ಸೂಚಿಸುತ್ತದೆ.
  4. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಥವಾ ಅವರ ಸಹಚರರ ಕಾಲದಲ್ಲಿ ಅಸ್ತಿತ್ವದಲ್ಲಿಲ್ಲದ, ಧರ್ಮದಲ್ಲಿ ಹೊಸದಾಗಿ ಪ್ರಾರಂಭಿಸಲಾದ ಎಲ್ಲವೂ ಬಿದ್‌ಅತ್ (ನೂತನ ಆವಿಷ್ಕಾರ) ಆಗಿವೆ. ಅವು ವಿಶ್ವಾಸ, ಮಾತು ಅಥವಾ ಕರ್ಮಗಳಿಗೆ ಸಂಬಂಧಿಸಿದ್ದಾದರೂ ಸಹ.
  5. ಈ ಹದೀಸ್ ಇಸ್ಲಾಂ ಧರ್ಮದ ಮೂಲತತ್ವಗಳಲ್ಲಿ ಒಂದಾಗಿದೆ. ಅದು ಕರ್ಮಗಳ ಮಾನದಂಡವಾಗಿದೆ. ಹೇಗೆ ಅಲ್ಲಾಹನ ಸಂಪ್ರೀತಿಯನ್ನು ಉದ್ದೇಶಿಸದೆ ಮಾಡುವ ಯಾವುದೇ ಕಾರ್ಯವು ಅದನ್ನು ಮಾಡುವವರಿಗೆ ಯಾವುದೇ ಪ್ರತಿಫಲವನ್ನು ನೀಡುವುದಿಲ್ಲವೋ, ಹಾಗೆಯೇ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದ ಧರ್ಮಕ್ಕೆ ಅನುಗುಣವಾಗಿಲ್ಲದ ಯಾವುದೇ ಕಾರ್ಯವೂ ಸ್ವೀಕಾರಯೋಗ್ಯವಲ್ಲ.
  6. ಈ ಹದೀಸ್ ಹೊಸದಾಗಿ ನಿರ್ಮಿಸಲಾದ 'ಬಿದ್'ಅತ್'ಗಳನ್ನು (ನವೀನ ಆಚರಣೆಗಳನ್ನು) ಮತ್ತು ಸಂಭವಿಸುವ 'ಮುನ್ಕರಾತ್' (ಕೆಟ್ಟ/ನಿಂದನೀಯ ಕಾರ್ಯಗಳು) ಗಳನ್ನು ತಿರಸ್ಕರಿಸುವ ಒಂದು ಮೂಲಭೂತ ತತ್ವವಾಗಿದೆ.
  7. ಹೊಸ ಆವಿಷ್ಕಾರಗಳನ್ನು ವಿರೋಧಿಸಲಾಗಿರುವುದು ಧರ್ಮಕ್ಕೆ ಸಂಬಂಧಿಸಿ ಮಾತ್ರ. ಲೌಕಿಕ ವಿಷಯಗಳಿಗೆ ಸಂಬಂಧಿಸಿ ವಿರೋಧಿಸಲಾಗಿಲ್ಲ.
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಬಂಗಾಳಿ ತುರ್ಕಿ ರಷ್ಯನ್ ಬೊಸ್ನಿಯನ್ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಜರ್ಮನ್ ಪಶ್ತೋ الأسامية الألبانية الأمهرية الغوجاراتية القيرقيزية النيبالية الدرية الصربية الطاجيكية الكينياروندا المجرية التشيكية الموري الولوف الأذربيجانية الأوزبكية الأوكرانية الجورجية المقدونية الخميرية
ಅನುವಾದಗಳನ್ನು ತೋರಿಸಿ
ವರ್ಗಗಳು
ಇನ್ನಷ್ಟು