ವರ್ಗ:
+ -

عَنْ أَبِي عَبْدِ الرَّحْمَنِ عَبْدِ اللَّهِ بْنِ مَسْعُودٍ رَضِيَ اللَّهُ عَنْهُ قَالَ:
حَدَّثَنَا رَسُولُ اللَّهِ صَلَّى اللَّهُ عَلَيْهِ وَسَلَّمَ وَهُوَ الصَّادِقُ المَصْدُوقُ: «إِنَّ أَحَدَكُمْ يُجْمَعُ خَلْقُهُ فِي بَطْنِ أُمِّهِ أَرْبَعِينَ يَوْمًا، ثُمَّ يَكُونُ عَلَقَةً مِثْلَ ذَلِكَ، ثُمَّ يَكُونُ مُضْغَةً مِثْلَ ذَلِكَ، ثُمَّ يُرْسَلُ إلَيْهِ المَلَكُ فَيَنْفُخُ فِيهِ الرُّوحَ، وَيُؤْمَرُ بِأَرْبَعِ كَلِمَاتٍ: بِكَتْبِ رِزْقِهِ، وَأَجَلِهِ، وَعَمَلِهِ، وَشَقِيٍّ أَوْ سَعِيدٍ؛ فَوَالَّذِي لَا إلَهَ غَيْرُهُ إنَّ أَحَدَكُمْ لَيَعْمَلُ بِعَمَلِ أَهْلِ الجَنَّةِ حَتَّى مَا يَكُونُ بَيْنَهُ وَبَيْنَهَا إلَّا ذِرَاعٌ فَيَسْبِقُ عَلَيْهِ الكِتَابُ فَيَعْمَلُ بِعَمَلِ أَهْلِ النَّارِ فَيَدْخُلُهَا، وَإِنَّ أَحَدَكُمْ لَيَعْمَلُ بِعَمَلِ أَهْلِ النَّارِ حَتَّى مَا يَكُونُ بَيْنَهُ وَبَيْنَهَا إلَّا ذِرَاعٌ، فَيَسْبِقُ عَلَيْهِ الكِتَابُ فَيَعْمَلُ بِعَمَلِ أَهْلِ الجَنَّةِ فَيَدْخُلُهَا».

[صحيح] - [رواه البخاري ومسلم] - [الأربعون النووية: 4]
المزيــد ...

ಅಬೂ ಅಬ್ದುರ್ರಹ್ಮಾನ್ ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) - ಅವರು 'ಅಸ್ಸಾದಿಖುಲ್-ಮಸ್ದೂಖ್' (ಸತ್ಯವಂತರು ಮತ್ತು ಸತ್ಯವಂತರೆಂದು ಅಂಗೀಕರಿಸಲ್ಪಟ್ಟವರು) ಆಗಿದ್ದಾರೆ - ನಮಗೆ ತಿಳಿಸಿಕೊಟ್ಟರು: "ಖಂಡಿತವಾಗಿಯೂ ನಿಮ್ಮಲ್ಲೊಬ್ಬನ ಸೃಷ್ಟಿಯನ್ನು ಅವನ ತಾಯಿಯ ಗರ್ಭದಲ್ಲಿ ನಲವತ್ತು ದಿನಗಳ ಕಾಲ (ವೀರ್ಯದ ರೂಪದಲ್ಲಿ) ಒಟ್ಟುಗೂಡಿಸಲಾಗುತ್ತದೆ. ನಂತರ, ಅಷ್ಟೇ ಅವಧಿಗೆ ಅವನು 'ಅಲಖ' (ಹೆಪ್ಪುಗಟ್ಟಿದ ರಕ್ತ) ಆಗಿರುತ್ತಾನೆ. ನಂತರ, ಅಷ್ಟೇ ಅವಧಿಗೆ ಅವನು 'ಮುದ್ಗ' (ಮಾಂಸದ ಮುದ್ದೆ) ಆಗಿರುತ್ತಾನೆ. ನಂತರ ಅವನ ಬಳಿಗೆ ಒಬ್ಬ ದೇವದೂತರನ್ನು ಕಳುಹಿಸಲಾಗುತ್ತದೆ. ಅವರು ಅವನಿಗೆ ಆತ್ಮವನ್ನು ಊದುತ್ತಾರೆ. ನಾಲ್ಕು ವಿಷಯಗಳನ್ನು ಬರೆಯಲು ಅವರಿಗೆ (ದೇವದೂತರಿಗೆ) ಆದೇಶಿಸಲಾಗುತ್ತದೆ: ಅವನ ಜೀವನೋಪಾಯ (ರಿಝ್ಕ್), ಅವನ ಆಯುಷ್ಯ, ಅವನ ಕರ್ಮಗಳು, ಮತ್ತು ಅವನು ದೌರ್ಭಾಗ್ಯವಂತನೋ ಅಥವಾ ಸೌಭಾಗ್ಯವಂತನೋ ಎಂಬುದನ್ನು. ಯಾರ ಹೊರತು ಬೇರೆ ಆರಾಧ್ಯನಿಲ್ಲವೋ ಅವನ (ಅಲ್ಲಾಹನ) ಮೇಲೆ ಆಣೆ. ಖಂಡಿತವಾಗಿಯೂ ನಿಮ್ಮಲ್ಲೊಬ್ಬನು ಸ್ವರ್ಗವಾಸಿಗಳ ಕರ್ಮವನ್ನು ಮಾಡುತ್ತಲೇ ಇರುತ್ತಾನೆ. ಎಷ್ಟರಮಟ್ಟಿಗೆ ಎಂದರೆ ಅವನಿಗೂ ಅದಕ್ಕೂ (ಸ್ವರ್ಗಕ್ಕೂ) ಕೇವಲ ಒಂದು ಮೊಳದ ಅಂತರ ಮಾತ್ರ ಉಳಿದಿರುತ್ತದೆ. ಆಗ ಅವನ ಮೇಲೆ ವಿಧಿಯು ಮೇಲುಗೈ ಸಾಧಿಸುತ್ತದೆ. ಆಗ ಅವನು ನರಕವಾಸಿಗಳ ಕರ್ಮವನ್ನು ಮಾಡುತ್ತಾನೆ ಮತ್ತು ಅದನ್ನು (ನರಕವನ್ನು) ಪ್ರವೇಶಿಸುತ್ತಾನೆ. ಹಾಗೆಯೇ, ಖಂಡಿತವಾಗಿಯೂ ನಿಮ್ಮಲ್ಲೊಬ್ಬನು ನರಕವಾಸಿಗಳ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ, ಎಷ್ಟರಮಟ್ಟಿಗೆ ಎಂದರೆ ಅವನಿಗೂ ಅದಕ್ಕೂ (ನರಕಕ್ಕೂ) ನಡುವೆ ಕೇವಲ ಒಂದು ಮೊಳದ ಅಂತರ ಮಾತ್ರ ಉಳಿದಿರುತ್ತದೆ. ಆಗ ಅವನ ಮೇಲೆ ವಿಧಿಯು ಮೇಲುಗೈ ಸಾಧಿಸುತ್ತದೆ. ಆಗ ಅವನು ಸ್ವರ್ಗವಾಸಿಗಳ ಕರ್ಮಗಳನ್ನು ಮಾಡುತ್ತಾನೆ ಮತ್ತು ಅದನ್ನು (ಸ್ವರ್ಗವನ್ನು) ಪ್ರವೇಶಿಸುತ್ತಾನೆ."

[صحيح] - [رواه البخاري ومسلم] - [الأربعون النووية - 4]

ವಿವರಣೆ

ಇಬ್ನ್ ಮಸ್‌ಊದ್ ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ತಿಳಿಸಿದರು. ಅವರು ಮಾತಿನಲ್ಲಿ ಸತ್ಯವಂತರಾಗಿದ್ದಾರೆ ಮತ್ತು ಅಂಗೀಕರಿಸಲ್ಪಟ್ಟವರಾಗಿದ್ದಾರೆ—ಅಂದರೆ ಅಲ್ಲಾಹು ಅವರನ್ನು ಸತ್ಯವಂತರೆಂದು ಅಂಗೀಕರಿಸಿದ್ದಾನೆ. ಅವರು ಹೇಳಿದರು: ನಿಮ್ಮಲ್ಲಿ ಪ್ರತಿಯೊಬ್ಬರನ್ನು ಜೋಡಿಸಲಾಗುವುದು. ಅಂದರೆ ಒಬ್ಬ ವ್ಯಕ್ತಿ ತನ್ನ ಪತ್ನಿಯೊಡನೆ ಸಂಭೋಗಿಸಿದರೆ ಆತನ ವೀರ್ಯವು ಮಹಿಳೆಯ ಗರ್ಭಾಶಯದಲ್ಲಿ ನಲ್ವತ್ತು ದಿನಗಳ ಕಾಲ ನುತ್ಫದ (ಮಿಶ್ರಿತ ವೀರ್ಯದ) ರೂಪದಲ್ಲಿ ಜೋಡಣೆಯಾಗುತ್ತದೆ. ನಂತರ ಮುಂದಿನ ನಲ್ವತ್ತು ದಿನಗಳ ಕಾಲ ಅದು ಅಲಕದ ರೂಪದಲ್ಲಿ, ಅಂದರೆ ಹೆಪ್ಪುಗಟ್ಟಿದ ರಕ್ತದ ರೂಪದಲ್ಲಿರುತ್ತದೆ. ನಂತರ ಮುಂದಿನ ನಲ್ವತ್ತು ದಿನಗಳ ಕಾಲ ಅದು ಮುದ್ಗದ ರೂಪದಲ್ಲಿ, ಅಂದರೆ ಮಾಂಸದ ಮುದ್ದೆಯ ರೂಪದಲ್ಲಿರುತ್ತದೆ. ನಲ್ವತ್ತು ದಿನಗಳ ಮೂರನೆಯ ಅವಧಿಯು ಮುಗಿದಾಗ ಅಲ್ಲಿಗೆ ಒಬ್ಬ ದೇವದೂತರನ್ನು ಕಳುಹಿಸಲಾಗುತ್ತದೆ. ಅವರು ಅದಕ್ಕೆ ಆತ್ಮವನ್ನು ಊದುತ್ತಾರೆ. ನಾಲ್ಕು ವಿಷಯಗಳನ್ನು ಬರೆಯುವಂತೆ ಆ ದೇವದೂತರಿಗೆ ಆಜ್ಞಾಪಿಸಲಾಗುತ್ತದೆ: ಅವನ ಜೀವನೋಪಾಯ. ಅಂದರೆ ಅವನು ತನ್ನ ಆಯುಷ್ಯದಲ್ಲಿ ಪಡೆಯುವ ಅನುಗ್ರಹಗಳ ಪ್ರಮಾಣ. ಅವರ ಆಯುಷ್ಯ. ಅಂದರೆ ಅವನು ಇಹಲೋಕದಲ್ಲಿ ಎಷ್ಟು ವರ್ಷ ಬದುಕುತ್ತಾನೆ. ಅವನ ಕರ್ಮ. ಅಂದರೆ ಅವನು ಏನು ಕರ್ಮ ಮಾಡುತ್ತಾನೆ? ಅವನು ನತದೃಷ್ಟನೋ ಅಥವಾ ಅದೃಷ್ಟವಂತನೋ? ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಣೆ ಮಾಡಿ ಹೇಳುವುದೇನೆಂದರೆ, ಒಬ್ಬ ವ್ಯಕ್ತಿ ಸ್ವರ್ಗವಾಸಿಗಳು ಮಾಡುವ ಕರ್ಮಗಳನ್ನು ಮಾಡುತ್ತಾನೆ. ಅಂದರೆ ಜನರ ದೃಷ್ಟಿಯಲ್ಲಿ ಅವನ ಕರ್ಮಗಳು ಉತ್ತಮವಾಗಿರುತ್ತವೆ. ಹೀಗೆ ಅವನ ಮತ್ತು ಸ್ವರ್ಗದ ಮಧ್ಯೆ ಒಂದು ಮೊಳ ಅಂತರವಿರುವ ತನಕ ಅವನು ಹೀಗೆಯೇ ಇರುತ್ತಾನೆ. ಅಂದರೆ, ಅವನು ಸ್ವರ್ಗವನ್ನು ಪ್ರವೇಶ ಮಾಡಲು ಒಂದು ಮೊಳದಷ್ಟು ದೂರ ಮಾತ್ರ ಬಾಕಿ ಇರುತ್ತದೆ. ಆಗ ಅವನ ವಿಧಿಯು ಅವನ ಮುಂಭಾಗಕ್ಕೆ ಬಂದು ಅವನು ನರಕವಾಸಿಗಳ ಕರ್ಮಗಳನ್ನು ಮಾಡುತ್ತಾನೆ. ಹೀಗೆ ಅವನ ಕೊನೆಯ ಕರ್ಮವು ನರಕವಾಸಿಗಳ ಕರ್ಮವಾಗಿದ್ದು ಅವನು ನರಕವನ್ನು ಪ್ರವೇಶಿಸುತ್ತಾನೆ. ಏಕೆಂದರೆ ನಿರಂತರ ಸತ್ಕರ್ಮ ಮಾಡುವುದು ಮತ್ತು ನಿಲುವಿನಲ್ಲಿ ಬದಲಾವಣೆ ಮಾಡದಿರುವುದು ಕರ್ಮಗಳ ಸ್ವೀಕಾರಕ್ಕೆ ಷರತ್ತಾಗಿದೆ. ಇನ್ನೊಬ್ಬ ವ್ಯಕ್ತಿ ನರಕವಾಸಿಗಳ ಕರ್ಮಗಳನ್ನು ಮಾಡುತ್ತಾ ಇರುತ್ತಾನೆ. ಹೀಗೆ ಅವನು ನರಕವನ್ನು ಸಮೀಪಿಸುವಷ್ಟರಲ್ಲಿ, ಅಂದರೆ ಅವನ ಮತ್ತು ನರಕದ ನಡುವೆ ಒಂದು ಮೊಳ ಮಾತ್ರ ದೂರವಿರುವಾಗ, ಅವನ ವಿಧಿಯು ಅವನ ಮುಂಭಾಗಕ್ಕೆ ಬಂದು ಅವನು ಸ್ವರ್ಗವಾಸಿಗಳ ಕರ್ಮಗಳನ್ನು ಮಾಡುತ್ತಾನೆ. ಹೀಗೆ ಅವನ ಕೊನೆಯ ಕರ್ಮವು ಸ್ವರ್ಗವಾಸಿಗಳ ಕರ್ಮವಾಗಿದ್ದು ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ.

ಹದೀಸಿನ ಪ್ರಯೋಜನಗಳು

  1. ಮನುಷ್ಯ ಸೃಷ್ಟಿಯ ಹಂತಗಳನ್ನು ವಿವರಿಸಲಾಗಿದೆ.
  2. ಅಲ್ಲಾಹನ ತೀರ್ಮಾನ (ಕದಾ) ಮತ್ತು ನಿರ್ಧಾರ (ವಿಧಿ) ಯಲ್ಲಿ ವಿಶ್ವಾಸವಿಡಬೇಕೆಂದು ತಿಳಿಸಲಾಗಿದೆ.
  3. ಅಂತಿಮವಾಗಿ ವಿಧಿಯಲ್ಲಿ ಏನು ಬರೆದಿದೆಯೋ ಅದೇ ಸಂಭವಿಸುತ್ತದೆ ಎಂದು ಈ ಹದೀಸ್ ತಿಳಿಸುತ್ತದೆ.
  4. ಕರ್ಮಗಳನ್ನು ಕಂಡು ಪುಳಕಿತನಾಗಬಾರದೆಂದು ಈ ಹದೀಸ್ ಎಚ್ಚರಿಸುತ್ತದೆ. ಏಕೆಂದರೆ ಕರ್ಮಗಳಲ್ಲಿ ಪರಿಗಣಿಸಲ್ಪಡುವುದು ಕೊನೆಯ ಕರ್ಮಗಳನ್ನಾಗಿವೆ.
  5. ____
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಬಂಗಾಳಿ ತುರ್ಕಿ ರಷ್ಯನ್ ಬೊಸ್ನಿಯನ್ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಜರ್ಮನ್ ಪಶ್ತೋ الأسامية الألبانية الأمهرية الغوجاراتية القيرقيزية النيبالية الدرية الصربية الطاجيكية الكينياروندا المجرية التشيكية الموري الولوف الأذربيجانية الأوزبكية الأوكرانية الجورجية المقدونية الخميرية
ಅನುವಾದಗಳನ್ನು ತೋರಿಸಿ
ವರ್ಗಗಳು
ಇನ್ನಷ್ಟು