عَنْ عَبْدِ اللهِ بْنِ عُمَرَ رَضيَ اللهُ عنهُما قَالَ: مَرَرْنَا مَعَ رَسُولِ اللهِ صَلَّى اللهُ عَلَيْهِ وَسَلَّمَ عَلَى الْحِجْرِ، فَقَالَ لَنَا رَسُولُ اللهِ صَلَّى اللهُ عَلَيْهِ وَسَلَّمَ:
«لَا تَدْخُلُوا مَسَاكِنَ الَّذِينَ ظَلَمُوا أَنْفُسَهُمْ، إِلَّا أَنْ تَكُونُوا بَاكِينَ؛ حَذَرًا أَنْ يُصِيبَكُمْ مِثْلُ مَا أَصَابَهُمْ» ثُمَّ زَجَرَ فَأَسْرَعَ حَتَّى خَلَّفَهَا.
[صحيح] - [متفق عليه] - [صحيح مسلم: 2980]
المزيــد ...
ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗೆ 'ಹಿಜ್ರ್' ಪ್ರದೇಶದ ಮೂಲಕ ಹಾದುಹೋದೆವು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ಅಳುವವರಾಗಿರುತ್ತಲೇ ಹೊರತು ತಮ್ಮ ಮೇಲೆ ತಾವೇ ಅನ್ಯಾಯ ಮಾಡಿದವರ ವಾಸಸ್ಥಳಗಳನ್ನು ಪ್ರವೇಶಿಸಬೇಡಿ. ಅವರಿಗೆ ಸಂಭವಿಸಿದ್ದು ನಿಮಗೂ ಸಂಭವಿಸಬಾರದೆಂಬ ಭಯದಿಂದ (ಹೀಗೆ ಮಾಡಿರಿ)". ನಂತರ ಅವರು (ತಮ್ಮ ವಾಹನಮೃಗವನ್ನು) ಗದರಿಸಿ, ವೇಗವನ್ನು ಹೆಚ್ಚಿಸಿ ಅದನ್ನು (ಆ ಪ್ರದೇಶವನ್ನು) ದಾಟಿಹೋದರು.
[صحيح] - [متفق عليه] - [صحيح مسلم - 2980]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮೂದ್ ಜನಾಂಗದ ನಾಡಿನ ಮೂಲಕ ಹಾದುಹೋದುತ್ತಿದ್ದ ಸಂದರ್ಭದಲ್ಲಿ, ಶಿಕ್ಷೆಗೊಳಗಾದ ಮತ್ತು ತಮ್ಮ ಮೇಲೆ ತಾವೇ ಅನ್ಯಾಯ ಮಾಡಿದ ಜನರ ನಾಡನ್ನು ಪ್ರವೇಶಿಸಬೇಡಿ ಅಥವಾ ಅಲ್ಲಿಗೆ ಹೋಗಬೇಡಿ ಎಂದು ನಿಷೇಧಿಸಿದರು. ಆದರೆ ಅದಕ್ಕೆ ಪ್ರವೇಶಿಸುವವನು ಅಳುವವನಾಗಿದ್ದರೆ, ಅವರಿಂದ ಪಾಠ ಕಲಿಯುವವನಾಗಿದ್ದರೆ (ಅದರಲ್ಲಿ ತೊಂದರೆಯಿಲ್ಲ). ಅವರಿಗೆ ಸಂಭವಿಸಿದಂತಹ ಶಿಕ್ಷೆಯು ತನಗೂ ಸಂಭವಿಸಬಹುದೆಂಬ ಭಯದಿಂದ (ಹೀಗೆ ಮಾಡಬೇಕು). ನಂತರ ಅವರು ತಮ್ಮ ವಾಹನಮೃಗವನ್ನು ಗದರಿಸಿ ವೇಗವಾಗಿ ಸಾಗಿ ಅದನ್ನು ದಾಟಿಹೋದರು.