عَنْ أَبِي سَعِيدٍ الْخُدْرِيِّ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ أَنَّهُ قَالَ:
«لَا يَمْنَعَنَّ رَجُلًا مِنْكُمْ مَخَافَةُ النَّاسِ أَنْ يَتَكَلَّمَ بِالْحَقِّ إِذَا رَآهُ أَوْ عَلِمَهُ».
[صحيح] - [رواه الترمذي وابن ماجه وأحمد] - [مسند أحمد: 11403]
المزيــد ...
ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಜನರ ಭಯವು ನಿಮ್ಮಲ್ಲಿ ಯಾರನ್ನೂ, ಸತ್ಯವನ್ನು ಕಂಡಾಗ ಅಥವಾ ತಿಳಿದಾಗ ಅದನ್ನು ಮಾತನಾಡದಂತೆ ತಡೆಯಬಾರದು".
[صحيح] - [رواه الترمذي وابن ماجه وأحمد] - [مسند أحمد - 11403]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳಿಗೆ ನೀಡಿದ ಪ್ರವಚನ ಮತ್ತು ಉಪದೇಶಗಳಲ್ಲಿ ಒಂದು ಏನೆಂದರೆ, ಜನರ ಭಯವಾಗಲಿ, ಜನರ ಬಗ್ಗೆ ಇರುವ ಭೀತಿ ಅಥವಾ ಅವರ ಶಕ್ತಿಯಾಗಲಿ, ಸತ್ಯವನ್ನು ಕಂಡಾಗ ಅಥವಾ ತಿಳಿದಾಗ ಅದನ್ನು ಹೇಳದಂತೆ ಅಥವಾ ಅದನ್ನು ಆದೇಶಿಸದಂತೆ ಮುಸ್ಲಿಮನನ್ನು ಎಂದೂ ತಡೆಯಬಾರದು.