+ -

عَنْ أَبِي العَبَّاسِ سَهْلِ بْنِ سَعِدٍ السَّاعِدِيِّ رَضِيَ اللَّهُ عَنْهُ قَالَ: جَاءَ رَجُلٌ إِلَى النَّبِيِّ صَلَّى اللَّهُ عَلَيْهِ وَسَلَّمَ، فَقَالَ: يَا رَسُولَ اللَّهِ، دُلَّنِي عَلَى عَمَلٍ إِذَا عَمِلْتُهُ أَحَبَّنِي اللَّهُ وَأَحَبَّنِي النَّاسُ، فَقَالَ:
«ازْهَدْ فِي الدُّنْيَا يُحِبُّكَ اللَّهُ، وَازْهَدْ فِيمَا عِنْدَ النَّاسِ يُحِبُّكَ النَّاسُ».

[قال النووي: حديث حسن] - [رواه ابن ماجه وغيره بأسانيد حسنة] - [الأربعون النووية: 31]
المزيــد ...

ಅಬುಲ್-ಅಬ್ಬಾಸ್ ಸಹ್ಲ್ ಇಬ್ನ್ ಸಅದ್ ಅಸ್ಸಾಇದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನಾನು ಒಂದು ಕಾರ್ಯವನ್ನು ಮಾಡಿದರೆ ಅಲ್ಲಾಹು ನನ್ನನ್ನು ಪ್ರೀತಿಸವಂತಹ ಮತ್ತು ಜನರೂ ನನ್ನನ್ನು ಪ್ರೀತಿಸುವಂತಹ ಒಂದು ಕಾರ್ಯದ ಬಗ್ಗೆ ನನಗೆ ತಿಳಿಸಿಕೊಡಿ". ಆಗ ಅವರು (ಪ್ರವಾದಿ) ಹೇಳಿದರು:
"ಇಹಲೋಕದ ಬಗ್ಗೆ ವಿರಕ್ತರಾಗಿರಿ. ಆಗ ಅಲ್ಲಾಹು ನಿಮ್ಮನ್ನು ಪ್ರೀತಿಸುತ್ತಾನೆ. ಮತ್ತು ಜನರ ಬಳಿ ಇರುವುದರ ಬಗ್ಗೆ ವಿರಕ್ತರಾಗಿರಿ. ಆಗ ಜನರು ನಿಮ್ಮನ್ನು ಪ್ರೀತಿಸುತ್ತಾರೆ".

[قال النووي: حديث حسن] - [رواه ابن ماجه وغيره بأسانيد حسنة] - [الأربعون النووية - 31]

ವಿವರಣೆ

ಒಬ್ಬ ವ್ಯಕ್ತಿಯು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹು ಮತ್ತು ಜನರು ತನ್ನನ್ನು ಪ್ರೀತಿಸುವಂತಹ ಒಂದು ಕಾರ್ಯದ ಬಗ್ಗೆ ತನಗೆ ತಿಳಿಸಿಕೊಡಬೇಕೆಂದು ವಿನಂತಿಸಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನಿಗೆ ಹೇಳಿದರು: ನೀನು ಇಹಲೋಕದ ವಿಷಯದಲ್ಲಿ ನಿನಗೆ (ಅಗತ್ಯವಿಲ್ಲದ) ಹೆಚ್ಚುವರಿ (ಅಂಶಗಳನ್ನು), ಪರಲೋಕದಲ್ಲಿ ನಿನಗೆ ಪ್ರಯೋಜನ ನೀಡದ ವಿಷಯಗಳನ್ನು, ಮತ್ತು ನಿನ್ನ ಧರ್ಮದಲ್ಲಿ ನಿನಗೆ ಹಾನಿಯುಂಟುಮಾಡಬಹುದಾದ ವಿಷಯಗಳನ್ನು ತ್ಯಜಿಸಿದರೆ ಅಲ್ಲಾಹು ನಿನ್ನನ್ನು ಪ್ರೀತಿಸುತ್ತಾನೆ. ಹಾಗೆಯೇ, ಜನರ ಕೈಯಲ್ಲಿರುವ ಲೌಕಿಕ ವಸ್ತುಗಳ ಬಗ್ಗೆ ನೀನು ವಿರಕ್ತನಾದರೆ (ಅವುಗಳನ್ನು ಆಸೆಪಡದಿದ್ದರೆ) ಜನರು ನಿನ್ನನ್ನು ಪ್ರೀತಿಸುತ್ತಾರೆ. ಏಕೆಂದರೆ ಅವರು ಸ್ವಾಭಾವಿಕವಾಗಿ ಅದನ್ನು (ಲೌಕಿಕ ವಸ್ತುಗಳನ್ನು) ಪ್ರೀತಿಸುತ್ತಾರೆ, ಮತ್ತು ಯಾರು ಅದರ ವಿಷಯದಲ್ಲಿ ಅವರೊಂದಿಗೆ ಸ್ಪರ್ಧಿಸುತ್ತಾರೋ, ಅವರನ್ನು ಅವರು ದ್ವೇಷಿಸುತ್ತಾರೆ. ಆದರೆ, ಯಾರು ಅದನ್ನು ಅವರಿಗೆ ಬಿಟ್ಟುಬಿಡುತ್ತಾನೋ (ಅದರಲ್ಲಿ ಅವರೊಂದಿಗೆ ಸ್ಪರ್ಧಿಸುವುದಿಲ್ಲವೋ), ಅವನನ್ನು ಅವರು ಪ್ರೀತಿಸುತ್ತಾರೆ.

ಹದೀಸಿನ ಪ್ರಯೋಜನಗಳು

  1. ಇಹಲೋಕದ ಬಗ್ಗೆ ವಿರಕ್ತಿ ಹೊಂದುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಅದೇನೆಂದರೆ, ಪರಲೋಕದಲ್ಲಿ ಪ್ರಯೋಜನ ನೀಡದ ವಿಷಯವನ್ನು ತ್ಯಜಿಸುವುದು.
  2. ವಿರಕ್ತಿಯು 'ವರಅ್' (ಧರ್ಮನಿಷ್ಠೆ/ಸೂಕ್ಷ್ಮತೆ) ಗಿಂತ ಉನ್ನತ ಪದವಿಯಾಗಿದೆ. ಏಕೆಂದರೆ 'ವರಅ್' ಎಂದರೆ (ಪರಲೋಕದಲ್ಲಿ) ಹಾನಿಯುಂಟುಮಾಡಬಹುದಾದ ವಿಷಯವನ್ನು ತ್ಯಜಿಸುವುದು, ಮತ್ತು 'ಝುಹ್ದ್' (ವಿರಕ್ತಿ) ಎಂದರೆ ಪರಲೋಕದಲ್ಲಿ ಪ್ರಯೋಜನ ನೀಡದ ವಿಷಯವನ್ನು ತ್ಯಜಿಸುವುದು.
  3. ಸಿಂದಿ ಹೇಳುತ್ತಾರೆ: ಖಂಡಿತವಾಗಿಯೂ ಇಹಲೋಕವು ಜನರ ದೃಷ್ಟಿಯಲ್ಲಿ ಅತ್ಯಂತ ಪ್ರಿಯವಾದುದು. ಆದ್ದರಿಂದ ಯಾರು ಅದರ ವಿಷಯದಲ್ಲಿ ಅವರೊಂದಿಗೆ ಸ್ಪರ್ಧಿಸುತ್ತಾನೋ, ಅವನು ಎಷ್ಟರ ಮಟ್ಟಿಗೆ ಸ್ಪರ್ಧಿಸುತ್ತಾನೋ ಅಷ್ಟರಮಟ್ಟಿಗೆ ಅವರ ದೃಷ್ಟಿಯಲ್ಲಿ ದ್ವೇಷಿಸಲ್ಪಡುತ್ತಾನೆ. ಹಾಗೆಯೇ, ಯಾರು ಅವರನ್ನು ಮತ್ತು ಅವರಿಗೆ ಪ್ರಿಯವಾದದ್ದನ್ನು (ಇಹಲೋಕವನ್ನು) (ಅವರಿಗೆ) ಬಿಟ್ಟುಬಿಡುತ್ತಾನೋ, ಅವನು ಎಷ್ಟರ ಮಟ್ಟಿಗೆ ಬಿಟ್ಟುಬಿಡುತ್ತಾನೋ ಅಷ್ಟರಮಟ್ಟಿಗೆ ಅವರ ಹೃದಯಗಳಲ್ಲಿ ಪ್ರಿಯನಾಗುತ್ತಾನೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಜರ್ಮನ್ ಪಶ್ತೋ الأسامية الألبانية الأمهرية الهولندية الغوجاراتية القيرقيزية النيبالية الليتوانية الدرية الصربية الطاجيكية الكينياروندا المجرية التشيكية الموري الولوف الأذربيجانية الأوزبكية الأوكرانية الجورجية المقدونية الخميرية
ಅನುವಾದಗಳನ್ನು ತೋರಿಸಿ
ಇನ್ನಷ್ಟು