عَنِ النَّوَّاسِ بْنِ سِمْعَانَ رَضِيَ اللهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«البِرُّ: حُسْنُ الخُلُقِ، وَالإِثْمُ مَا حَاكَ فِي صَدْرِكَ، وَكَرِهْتَ أَنْ يَطَّلِعَ عَلَيْهِ النَّاسُ».
وَعَنْ وَابِصَةَ بْنِ مَعْبَدٍ رَضِيَ اللَّهُ عَنْهُ قَالَ: أَتَيْتُ رَسُولَ اللَّهِ صَلَّى اللهُ عَلَيْهِ وَسَلَّمَ فَقَالَ: «جِئْتَ تَسْأَلُ عَنِ البِرِّ وَالإِثْمِ»، قُلْتُ: نَعَمْ، قَالَ: «اسْتَفْتِ قَلْبَكَ، البِرُّ: مَا اطْمَأَنَّتْ إلَيْهِ النَّفْسُ، وَاطْمَأَنَّ إلَيْهِ القَلْبُ، وَالإِثْمُ: مَا حَاكَ فِي نَفْسِكَ وَتَرَدَّدَ فِي الصَّدْرِ، وَإِنْ أَفْتَاكَ النَّاسُ وَأَفْتَوْكَ».
[صحيح] - [الحديث الأول: رواه مسلم، والحديث الثاني: رواه أحمد والدارمي.] - [الأربعون النووية: 27]
المزيــد ...
ನವ್ವಾಸ್ ಇಬ್ನ್ ಸಿಮ್‌ಆನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"'ಬಿರ್' (ಒಳಿತು/ಪುಣ್ಯ) ಎಂದರೆ ಉತ್ತಮ ನಡತೆ. 'ಇಸ್ಮ್' (ಪಾಪ) ಎಂದರೆ ಯಾವುದು ನಿನ್ನ ಮನಸ್ಸಿನಲ್ಲಿ ಸಂಶಯವನ್ನುಂಟುಮಾಡುತ್ತದೆಯೋ (ಅಥವಾ ಚುಚ್ಚುತ್ತದೆಯೋ), ಮತ್ತು ಜನರು ಅದರ ಬಗ್ಗೆ ತಿಳಿದುಕೊಳ್ಳುವುದನ್ನು ನೀನು ಇಷ್ಟಪಡುವುದಿಲ್ಲವೋ ಅದು".
[صحيح] - [الحديث الأول: رواه مسلم، والحديث الثاني: رواه أحمد والدارمي] - [الأربعون النووية - 27]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಬಿರ್' (ಒಳಿತು) ಮತ್ತು 'ಇಸ್ಮ್' (ಪಾಪ) ದ ಬಗ್ಗೆ ವಿವರಿಸುತ್ತಿದ್ದಾರೆ. ಅವರು ಹೇಳಿದರು: 'ಬಿರ್' ನ ಅತ್ಯಂತ ಶ್ರೇಷ್ಠ ಗುಣಲಕ್ಷಣಗಳಲ್ಲಿ ಒಂದು ಉತ್ತಮ ನಡತೆ. ಅಲ್ಲಾಹನೊಂದಿಗೆ ಉತ್ತಮ ನಡತೆ ಎಂದರೆ, ಅಲ್ಲಾಹನನ್ನು ಭಯಪಟ್ಟು ಜೀವಿಸುವುದು, ಮತ್ತು ಸೃಷ್ಟಿಗಳೊಂದಿಗೆ ಉತ್ತಮ ನಡತೆ ಎಂದರೆ, ತೊಂದರೆಯನ್ನು ಸಹಿಸುವುದು, ಕೋಪವನ್ನು ಕಡಿಮೆ ಮಾಡುವುದು, ಮುಖದಲ್ಲಿ ಮುಗುಳ್ನಗೆ ಇರಿಸುವುದು, ಉತ್ತಮ ಮಾತುನಾಡುವುದು, ಸಂಬಂಧ ಬೆಸೆಯುವುದು, ವಿಧೇಯತೆ, ದಯೆ, ಉಪಕಾರ, ಉತ್ತಮ ಸಹವಾಸ ಮತ್ತು ಒಡನಾಟ. 'ಬಿರ್' ಎಂದರೆ ಯಾವುದು ಹೃದಯ ಮತ್ತು ಆತ್ಮಕ್ಕೆ ನೆಮ್ಮದಿ ನೀಡುತ್ತದೆಯೋ ಅದು. 'ಇಸ್ಮ್' (ಪಾಪ) ಎಂದರೆ, ಸಂಶಯಾಸ್ಪದ ವಿಷಯಗಳಲ್ಲಿ ಯಾವುದು ಆತ್ಮದಲ್ಲಿ ಚಲನೆಯನ್ನು ಉಂಟುಮಾಡುತ್ತದೆಯೋ ಮತ್ತು ಹಿಂಜರಿಕೆಯುಂಟಾಗುತ್ತದೆಯೋ ಅದು. ಅದಕ್ಕಾಗಿ ಎದೆಯು ತೆರೆದುಕೊಳ್ಳುವುದಿಲ್ಲ ಮತ್ತು ಹೃದಯದಲ್ಲಿ ಅದರ ಬಗ್ಗೆ ಸಂಶಯ ಹಾಗೂ ಅದು ಪಾಪವಾಗಿರಬಹುದೆಂಬ ಭಯ ಉಂಟಾಗುತ್ತದೆ. ಅದು ಅಸಹ್ಯಕರವಾಗಿರುವುದರಿಂದ ನೀನು ಅದನ್ನು ಜನರ ಮುಂದೆ, ವಿಶೇಷವಾಗಿ ಗಣ್ಯರು, ಶ್ರೇಷ್ಠರು ಮತ್ತು ಪರಿಪೂರ್ಣರಾದವರ ಮುಂದೆ ಪ್ರಕಟಪಡಿಸಲು ಇಷ್ಟಪಡುವುದಿಲ್ಲ. ಏಕೆಂದರೆ, ಆತ್ಮವು ತನ್ನ ಸ್ವಭಾವದಿಂದಲೇ ಜನರು ತನ್ನ ಒಳಿತನ್ನು ಮಾತ್ರ ತಿಳಿದುಕೊಳ್ಳಬೇಕೆಂದು ಆಸೆಪಡುತ್ತದೆ. ಆದ್ದರಿಂದ, ತನ್ನ ಕೆಲವು ಕಾರ್ಯಗಳ ಬಗ್ಗೆ ಜನರು ತಿಳಿದುಕೊಳ್ಳುವುದನ್ನು ನೀನು ಇಷ್ಟಪಡದಿದ್ದರೆ, ಅದು ಪಾಪವಾಗಿದೆ, ಮತ್ತು ಅದರಲ್ಲಿ ಯಾವುದೇ ಒಳಿತಿಲ್ಲ. ಜನರು ನಿನಗೆ (ಅದು ಒಳಿತೆಂದು) ಫತ್ವಾ ನೀಡಿದರೂ ಸಹ. ನಿನ್ನ ಆತ್ಮದಲ್ಲಿ ಸಂಶಯದ ಚಿಹ್ನೆಯು ಹಿಂಜರಿಕೆಯನ್ನುಂಟುಮಾಡುತ್ತಿರುವವರೆಗೆ ನೀನು ಅವರ ಫತ್ವಾವನ್ನು ತೆಗೆದುಕೊಳ್ಳಬೇಡ. ಏಕೆಂದರೆ, ಸಂಶಯವು ಸರಿಯಾಗಿದ್ದರೆ ಮತ್ತು ಫತ್ವಾ ನೀಡುವವನು ಜ್ಞಾನವಿಲ್ಲದೆ ಫತ್ವಾ ನೀಡುತ್ತಿದ್ದರೆ, ಫತ್ವಾವು ಸಂಶಯವನ್ನು ನಿವಾರಿಸುವುದಿಲ್ಲ. ಆದರೆ, ಒಂದು ವೇಳೆ ಫತ್ವಾವು ಶರೀಅತ್‌ನ ಪುರಾವೆಯ ಮೇಲೆ ಆಧಾರಿತವಾಗಿದ್ದರೆ, ಫತ್ವಾ ಕೇಳುವವನ ಎದೆಯು ಅದಕ್ಕೆ ತೆರೆದುಕೊಳ್ಳದಿದ್ದರೂ ಸಹ, ಅವನು ಅದಕ್ಕೆ ಮರಳುವುದು ಕಡ್ಡಾಯವಾಗಿದೆ.