عَنْ عَبْدِ اللَّهِ بْنِ بُسْرٍ رَضِيَ اللَّهِ عَنْهُ قَالَ: أَتَى النَّبِيَّ رَجُلٌ، فَقَالَ: يَا رَسُولَ اللَّهِ! إِنَّ شَرَائِعَ الإِسْلَامِ قَدْ كَثُرَتْ عَلَيْنَا، فَبَابٌ نَتَمَسَّكُ بِهِ جَامِعٌ؟ قَالَ:
«لاَ يَزَالُ لِسَانُكَ رَطْبًا مِنْ ذِكْرِ اللَّهِ».
وفي رواية: مِنْ حَدِيثِ مُعَاذِ بْنِ جَبَلٍ رَضِيَ اللَّهُ عَنْهُ: آخِرُ مَا فَارَقْتُ عَلَيْهِ رَسُولَ اللَّهِ صَلَّى اللَّهُ عَلَيْهِ وَسَلَّمَ أَنْ قُلْتُ: أَيُّ الأَعْمَالِ خَيْرٌ وَأَقْرَبُ إِلَى اللَّهِ؟ قَالَ: «أَنْ تَمُوتَ وَلِسَانُكَ رَطْبٌ مِنْ ذِكْرِ اللَّهِ عَزَّ وَجَلَّ».
[صحيح] - [رواه أحمد والترمذي وابن ماجه وابن حبان] - [الأربعون النووية: 50]
المزيــد ...
ಅಬ್ದುಲ್ಲಾ ಇಬ್ನ್ ಬುಸ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಖಂಡಿತವಾಗಿಯೂ ಇಸ್ಲಾಂನ ಶರೀಅತ್‌ಗಳು (ಧಾರ್ಮಿಕ ಕಾರ್ಯಗಳು/ವಿಧಿಗಳು) ನಮಗೆ ಹೆಚ್ಚಾಗಿವೆ. ಆದ್ದರಿಂದ, ನಾವು ಬದ್ಧರಾಗಿರಲು ಒಂದು ಸಮಗ್ರವಾದ ದ್ವಾರವನ್ನು ತಿಳಿಸಿರಿ?" ಅವರು (ಪ್ರವಾದಿ) ಹೇಳಿದರು:
"ನಿನ್ನ ನಾಲಿಗೆಯು ಅಲ್ಲಾಹನ ಸ್ಮರಣೆಯಿಂದ ಸದಾ ಒದ್ದೆಯಾಗಿರಲಿ (ಹಸಿಯಾಗಿರಲಿ)".
[صحيح] - [رواه أحمد والترمذي وابن ماجه وابن حبان] - [الأربعون النووية - 50]
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಐಚ್ಛಿಕ ಆರಾಧನೆಗಳು ಹೆಚ್ಚಾದ ಕಾರಣ ಅವುಗಳನ್ನು ನಿರ್ವಹಿಸಲು ತನಗೆ ಸಾಧ್ಯವಾಗುವುದಿಲ್ಲವೆಂದು ದೂರಿಕೊಂಡರು. ನಂತರ ಅವರು, ಹೆಚ್ಚು ಪ್ರತಿಫಲವನ್ನು ಹೊಂದಿರುವ ಮತ್ತು ಸರಳವಾಗಿರುವ, ತನಗೆ ಮಾಡಲು ಸಾಧ್ಯವಾಗುವ ಮತ್ತು ಬಿಗಿಯಾಗಿ ಹಿಡಿದುಕೊಳ್ಳಬಹುದಾದ ಒಂದು ಕಾರ್ಯದ ಬಗ್ಗೆ ತಿಳಿಸಿಕೊಡಬೇಕೆಂದು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)ವಿನಂತಿಸಿದರು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ವ್ಯಕ್ತಿಯೊಂದಿಗೆ, ಅವರ ನಾಲಗೆಯು ಎಲ್ಲಾ ಸಮಯ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ತಸ್ಬೀಹ್, ತಹ್ಮೀದ್, ಇಸ್ತಿಗ್ಫಾರ್, ದುಆ ಮುಂತಾದ ಅಲ್ಲಾಹನ ಸ್ಮರಣೆಗಳ ಮೂಲಕ ಸದಾ ಹಸಿಯಾಗಿ, ಅಲುಗಾಡುತ್ತಾ ಇರಬೇಕೆಂದು ಸೂಚಿಸಿದರು.