عَنْ عُمَرَ بْنِ الخَطَّابِ رَضِيَ اللَّهُ عَنْهُ عَنِ النَّبِيِّ صَلَّى اللَّهُ عَلَيْهِ وَسَلَّمَ قَالَ:
«لَوْ أَنَّكُمْ كُنْتُمْ تَوَكَّلُونَ عَلَى اللهِ حَقَّ تَوَكُّلِهِ لَرَزَقَكُمْ كَمَا يَرْزَقُ الطَّيْرَ تَغْدُو خِمَاصًا وَتَرُوحُ بِطَانًا».
[صحيح] - [رواه الإمام أحمد، والترمذي، والنسائي، وابن ماجه، وابن حبان في صحيحه، والحاكم] - [الأربعون النووية: 49]
المزيــد ...
ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಂದು ವೇಳೆ ನೀವು ಅಲ್ಲಾಹನಲ್ಲಿ ಭರವಸೆಯಿಡಬೇಕಾದ ರೀತಿಯಲ್ಲೇ ಭರವಸೆಯಿಟ್ಟಿದ್ದರೆ, ಅವನು ಹಕ್ಕಿಗಳಿಗೆ ಜೀವನೋಪಾಯವನ್ನು ನೀಡಿದಂತೆ, ನಿಮಗೂ ಜೀವನೋಪಾಯವನ್ನು ನೀಡುವನು. ಅವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೊರಡುತ್ತವೆ ಮತ್ತು ಸಂಜೆ ಹೊಟ್ಟೆ ತುಂಬಿಕೊಂಡು ಹಿಂತಿರುಗುತ್ತವೆ".
[صحيح] - [رواه الإمام أحمد والترمذي والنسائي وابن ماجه وابن حبان في صحيحه والحاكم] - [الأربعون النووية - 49]
ಪ್ರಾಪಂಚಿಕ ಮತ್ತು ಧಾರ್ಮಿಕವಾದ ಎಲ್ಲಾ ವಿಷಯಗಳಲ್ಲೂ ಲಾಭವನ್ನುಂಟು ಮಾಡಲು ಮತ್ತು ಹಾನಿಯನ್ನು ನಿವಾರಿಸಲು ಅಲ್ಲಾಹನ ಮೇಲೆ ಅವಲಂಬಿತರಾಗಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒತ್ತಾಯಿಸುತ್ತಿದ್ದಾರೆ. ಏಕೆಂದರೆ, ಸರ್ವಶಕ್ತನಾದ ಅಲ್ಲಾಹನಲ್ಲದೆ ಕೊಡುವವರಿಲ್ಲ, ತಡೆಯುವವರಿಲ್ಲ, ತೊಂದರೆ ಕೊಡುವವರಿಲ್ಲ ಮತ್ತು ಉಪಕಾರ ಮಾಡುವವರಿಲ್ಲ. ಅಲ್ಲಾಹನಲ್ಲಿ ಪ್ರಾಮಾಣಿಕವಾಗಿ ಅವಲಂಬಿತರಾಗಿ ನಾವು ಲಾಭಗಳನ್ನು ತರುವ ಮತ್ತು ಹಾನಿಗಳನ್ನು ದೂರೀಕರಿಸುವ ಮಾರ್ಗಗಳನ್ನು ಹುಡುಕಬೇಕಾಗಿದೆ. ನಾವು ಹೀಗೆ ಮಾಡಿದರೆ ಹಕ್ಕಿಗಳಿಗೆ ಆಹಾರ ನೀಡುವಂತೆ ಅಲ್ಲಾಹು ನಮಗೂ ಆಹಾರ ನೀಡುತ್ತಾನೆ. ಅವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹೊರಟು ಸಂಜೆ ತುಂಬಿದ ಹೊಟ್ಟೆಯೊಂದಿಗೆ ಮರಳುತ್ತವೆ. ಹಕ್ಕಿಗಳ ಈ ವರ್ತನೆಯು ಆಹಾರವನ್ನು ಹುಡುಕುವ ಸರಿಯಾದ ಮಾರ್ಗವಾಗಿದೆ. ಅವು ಅಲ್ಲಾಹನ ಮೇಲೆ ಭರವಸೆಯಿಟ್ಟು ಗೂಡಿನಲ್ಲಿ ಕೂರುವುದಾಗಲಿ ಸೋಮಾರಿತನ ಪ್ರದರ್ಶಿಸುವುದಾಗಲಿ ಮಾಡುವುದಿಲ್ಲ.