____
[] - []
المزيــد ...
ಅಬೂ ಹಂಝಾ ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) - ಇವರು ಅಲ್ಲಾಹನ ಸಂದೇಶವಾಹಕರ ಸೇವಕರಾಗಿದ್ದರು - ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ನಿಮ್ಮಲ್ಲಿ ಯಾರೂ (ನಿಜವಾದ) ಸತ್ಯವಿಶ್ವಾಸಿಯಾಗುವುದಿಲ್ಲ."
[صحيح] - [متفق عليه] - [الأربعون النووية - 13]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾವುದೇ ಒಬ್ಬ ಮುಸಲ್ಮಾನನು ಧಾರ್ಮಿಕ ಮತ್ತು ಲೌಕಿಕ ವಿಷಯಗಳಲ್ಲಿ ತನಗಾಗಿ ಇಷ್ಟಪಡುವ ಸತ್ಕಾರ್ಯಗಳು ಮತ್ತು ಇತರೆಲ್ಲಾ ಒಳಿತುಗಳನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ಮತ್ತು ತನ್ನ ವಿಷಯದಲ್ಲಿ ದ್ವೇಷಿಸುವುದೆಲ್ಲವನ್ನೂ ತನ್ನ ಸಹೋದರನಿಗಾಗಿಯೂ ದ್ವೇಷಿಸುವ ತನಕ ನಿಜವಾದ ಮತ್ತು ಪೂರ್ಣ ರೂಪದ ಸತ್ಯವಿಶ್ವಾಸಿಯಾಗುವುದಿಲ್ಲ. ತನ್ನ ಸಹೋದರನಲ್ಲಿ ಧಾರ್ಮಿಕವಾದ ಯಾವುದಾದರೂ ಕೊರತೆಯನ್ನು ಕಂಡರೆ ಅವನು ಅದನ್ನು ಸರಿಪಡಿಸಲು ಪರಿಶ್ರಮಿಸುತ್ತಾನೆ. ಅವನಲ್ಲಿ ಏನಾದರೂ ಒಳಿತನ್ನು ಕಂಡರೆ ಅವನನ್ನು ಬೆಂಬಲಿಸುತ್ತಾನೆ ಮತ್ತು ಸಹಾಯ ಮಾಡುತ್ತಾನೆ. ಅವನ ಧಾರ್ಮಿಕ ಅಥವಾ ಲೌಕಿಕ ವಿಷಯಗಳಲ್ಲಿ ಅವನಿಗೆ ಸಲಹೆಗಳನ್ನು ನೀಡುತ್ತಾನೆ.