عَنْ عُمَرَ بْنِ الخَطَّابِ رَضِيَ اللَّهُ عَنْهُ:
أَنَّ رَجُلًا مِنَ اليَهُودِ قَالَ لَهُ: يَا أَمِيرَ المُؤْمِنِينَ، آيَةٌ فِي كِتَابِكُمْ تَقْرَؤُونَهَا، لَوْ عَلَيْنَا مَعْشَرَ اليَهُودِ نَزَلَتْ لاَتَّخَذْنَا ذَلِكَ اليَوْمَ عِيدًا، قَالَ: أَيُّ آيَةٍ؟ قَالَ: {اليَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الإِسْلاَمَ دِينًا} [المائدة: 3] قَالَ عُمَرُ: قَدْ عَرَفْنَا ذَلِكَ اليَوْمَ، وَالمَكَانَ الَّذِي نَزَلَتْ فِيهِ عَلَى النَّبِيِّ صَلَّى اللهُ عَلَيْهِ وَسَلَّمَ، وَهُوَ قَائِمٌ بِعَرَفَةَ يَوْمَ جُمُعَةٍ.
[صحيح] - [متفق عليه] - [صحيح البخاري: 45]
المزيــد ...
ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಯಹೂದಿಗಳ ಪೈಕಿ ಒಬ್ಬ ವ್ಯಕ್ತಿ ಅವರಿಗೆ (ಉಮರ್ ರಿಗೆ) ಹೇಳಿದರು: "ಓ ಅಮೀರುಲ್ ಮೂಮಿನೀನ್ (ವಿಶ್ವಾಸಿಗಳ ನಾಯಕರೇ), ನಿಮ್ಮ ಗ್ರಂಥದಲ್ಲಿ (ಕುರ್‌ಆನ್‌ನಲ್ಲಿ) ಒಂದು ವಚನವಿದೆ, ಅದನ್ನು ನೀವು ಪಠಿಸುತ್ತೀರಿ. ಒಂದು ವೇಳೆ ಅದು ನಮ್ಮ ಮೇಲೆ — ಅಂದರೆ ಯಹೂದಿಗಳ ಸಮುದಾಯದ ಮೇಲೆ — ಅವತೀರ್ಣವಾಗಿದ್ದರೆ, ನಾವು ಆ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಿದ್ದೆವು." ಅವರು (ಉಮರ್) ಕೇಳಿದರು: "ಯಾವ ವಚನ?" ಅವರು ಹೇಳಿದರು: "ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ, ನಿಮ್ಮ ಮೇಲೆ ನನ್ನ ಅನುಗ್ರಹವನ್ನು ಪೂರ್ತಿಗೊಳಿಸಿದ್ದೇನೆ ಮತ್ತು ಇಸ್ಲಾಂ ಅನ್ನು ನಿಮಗೆ ಧರ್ಮವನ್ನಾಗಿ ಮೆಚ್ಚಿಕೊಂಡಿದ್ದೇನೆ" [ಅಲ್-ಮಾಯಿದಃ: 3]. ಆಗ ಉಮರ್ ಹೇಳಿದರು: "ಆ ದಿನ ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಆ ವಚನ ಇಳಿದ ಜಾಗ ನಮಗೆ ತಿಳಿದಿದೆ; ಅವರು ಅರಫಾದಲ್ಲಿ ನಿಂತಿದ್ದರು ಮತ್ತು ಅದು ಶುಕ್ರವಾರವಾಗಿತ್ತು."
[صحيح] - [متفق عليه] - [صحيح البخاري - 45]
ಯಹೂದಿಗಳ ಪೈಕಿ ಒಬ್ಬ ವ್ಯಕ್ತಿ ಅಮೀರುಲ್ ಮೂಮಿನೀನ್ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿ ಬಂದು ಹೇಳಿದರು: "ನಿಮ್ಮ ಗ್ರಂಥವಾದ ಕುರ್‌ಆನ್‌ನಲ್ಲಿ ಒಂದು ವಚನವಿದೆ, ಅದನ್ನು ನೀವು ಪಠಿಸುತ್ತೀರಿ. ಒಂದು ವೇಳೆ ಅದು ನಮ್ಮ ಮೇಲೆ — ಅಂದರೆ ಯಹೂದಿಗಳ ಸಮುದಾಯದ ಮೇಲೆ — ನಮ್ಮ ಗ್ರಂಥವಾದ ತೌರಾತ್‌ನಲ್ಲಿ ಅವತೀರ್ಣವಾಗಿದ್ದರೆ, ನಾವು ಆ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಿದ್ದೆವು; ಈ ಮಹಾನ್ ವಚನ ಅವತೀರ್ಣವಾದ ಅನುಗ್ರಹಕ್ಕಾಗಿ ಕೃತಜ್ಞತೆ ಸಲ್ಲಿಸಲು (ಹೀಗೆ ಮಾಡುತ್ತಿದ್ದೆವು)." ಆಗ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) "ಯಾವ ವಚನ?" ಎಂದು ಕೇಳಿದರು. ಅವರು ಹೇಳಿದರು: "ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ, ನಿಮ್ಮ ಮೇಲೆ ನನ್ನ ಅನುಗ್ರಹವನ್ನು ಪೂರ್ತಿಗೊಳಿಸಿದ್ದೇನೆ ಮತ್ತು ಇಸ್ಲಾಂ ಅನ್ನು ನಿಮಗೆ ಧರ್ಮವನ್ನಾಗಿ ಮೆಚ್ಚಿಕೊಂಡಿದ್ದೇನೆ". ಆಗ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ನಮಗೆ ಆ ದಿನ ಮತ್ತು ಈ ಪವಿತ್ರ ವಚನ ಅವತೀರ್ಣವಾದ ಜಾಗದ ಅರಿವಿದೆ. ಇದು ಹಬ್ಬದ ದಿನದಂದೇ ಅವತೀರ್ಣವಾಗಿದೆ. ಅಂದು ಶುಕ್ರವಾರವಾಗಿತ್ತು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅರಫಾದಲ್ಲಿ ನಿಂತಿದ್ದರು. ಇವೆರಡೂ ಮುಸ್ಲಿಮರ ಪಾಲಿಗೆ ಮಹಾನ್ ದಿನಗಳಾಗಿವೆ."