ವರ್ಗ: Virtues and Manners .
+ -

عَنْ عَبْدِ اللهِ بْنِ مَسْعُودٍ رَضيَ اللهُ عنهُ قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«لاَ تَتَّخِذُوا الضَّيْعَةَ فَتَرْغَبُوا فِي الدُّنْيَا».

[حسن لغيره] - [رواه الترمذي وأحمد] - [سنن الترمذي: 2328]
المزيــد ...

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ಹೊಲಗದ್ದೆಗಳನ್ನು (ಅತಿಯಾಗಿ) ಇಟ್ಟುಕೊಳ್ಳಬೇಡಿ, (ಹಾಗೆ ಮಾಡಿದರೆ) ನೀವು ಈ ಪ್ರಪಂಚದಲ್ಲೇ ಆಸಕ್ತರಾಗುತ್ತೀರಿ".

[حسن لغيره] - [رواه الترمذي وأحمد] - [سنن الترمذي - 2328]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಮೀನು, ತೋಟ ಮತ್ತು ಹೊಲವನ್ನು (ಅತಿಯಾಗಿ) ಇಟ್ಟುಕೊಳ್ಳುವುದನ್ನು ನಿಷೇಧಿಸಿದರು. ಏಕೆಂದರೆ ಅದು ಇಹಲೋಕದಲ್ಲಿ ಆಸಕ್ತಿಯನ್ನುಂಟುಮಾಡುವ ಮತ್ತು ಅದರ ಕಡೆಗೆ ವಾಲಿಕೊಂಡು ಪರಲೋಕದಿಂದ ವಿಮುಖಗೊಳಿಸುವ ಕಾರಣಗಳಲ್ಲಿ ಒಂದಾಗಿದೆ.

ಹದೀಸಿನ ಪ್ರಯೋಜನಗಳು

  1. ಪರಲೋಕದಿಂದ ವಿಮುಖರಾಗಲು ಕಾರಣವಾಗುವ ರೀತಿಯಲ್ಲಿ ಇಹಲೋಕದ ವಸ್ತುಗಳನ್ನು ಅತಿಯಾಗಿ ಇಟ್ಟುಕೊಳ್ಳುವುದನ್ನು ನಿಷೇಧಿಸಲಾಗಿದೆ.
  2. ಜೀವನೋಪಾಯಕ್ಕೆ ಬೇಕಾದಷ್ಟು ವಸ್ತುಗಳನ್ನು ಇಟ್ಟುಕೊಳ್ಳುವುದಕ್ಕೆ ಈ ಹದೀಸ್‌ನಲ್ಲಿ ನಿಷೇಧವಿಲ್ಲ. ಬದಲಿಗೆ, ಇಹಲೋಕದ ವಿಷಯಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗುವುದನ್ನು ಮತ್ತು ಪರಲೋಕವನ್ನು ಮರೆಯುವುದನ್ನು ಇದರಲ್ಲಿ ನಿಷೇಧಿಸಲಾಗಿದೆ.
  3. ಅಸ್ಸಿಂದಿ ಹೇಳುತ್ತಾರೆ: ಇದರ ಅರ್ಥವೇನೆಂದರೆ, ಜಮೀನನ್ನು ಇಟ್ಟುಕೊಳ್ಳುವುದರಲ್ಲಿ ಅತಿಯಾಗಿ ಮುಳುಗಿಹೋಗಬೇಡಿ. ಹಾಗೆ ಮಾಡಿದರೆ ನೀವು ಅದರಿಂದಾಗಿ ಅಲ್ಲಾಹನ ಸ್ಮರಣೆಯಿಂದ ವಿಮುಖರಾಗುತ್ತೀರಿ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು