عَنْ حُذَيْفَةَ بْنِ اليَمَانِ رَضيَ اللهُ عنه:
أَنَّ النَّبِيَّ صَلَّى اللَّهُ عَلَيْهِ وَسَلَّمَ كَانَ إِذَا أَرَادَ أَنْ يَنَامَ وَضَعَ يَدَهُ تَحْتَ رَأْسِهِ، ثُمَّ قَالَ: «اللَّهُمَّ قِنِي عَذَابَكَ يَوْمَ تَجْمَعُ أَوْ تَبْعَثُ عِبَادَكَ».
[صحيح] - [رواه الترمذي] - [سنن الترمذي: 3398]
المزيــد ...
ಹುದೈಫಾ ಇಬ್ನುಲ್-ಯಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿದ್ರಿಸಲು ಬಯಸಿದಾಗ, ತಮ್ಮ ಕೈಯನ್ನು ತಮ್ಮ ತಲೆಯ ಕೆಳಗೆ ಇಡುತ್ತಿದ್ದರು, ನಂತರ ಹೇಳುತ್ತಿದ್ದರು: "ಅಲ್ಲಾಹುಮ್ಮ ಖಿನೀ ಅಝಾಬಕ ಯೌಮ ತಜ್ಮಉ (ಅಥವಾ ತಬ್'ಅಸು) ಇಬಾದಕ್". (ಅರ್ಥ: ಓ ಅಲ್ಲಾಹನೇ, ನಿನ್ನ ದಾಸರನ್ನು ನೀನು ಒಟ್ಟುಗೂಡಿಸುವ - ಅಥವಾ ಎಬ್ಬಿಸುವ - ದಿನದಂದು ನಿನ್ನ ಶಿಕ್ಷೆಯಿಂದ ನನ್ನನ್ನು ಕಾಪಾಡು).
[صحيح] - [رواه الترمذي] - [سنن الترمذي - 3398]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿದ್ರಿಸಲು ತಮ್ಮ ಮಲಗುವ ಸ್ಥಳಕ್ಕೆ ಹೋದಾಗ, ಅವರು ತಮ್ಮ ಬಲಗೈಯನ್ನು ತಲೆದಿಂಬಾಗಿ ಬಳಸುತ್ತಿದ್ದರು ಮತ್ತು ಅದರ ಮೇಲೆ ತಮ್ಮ ಬಲ ಕೆನ್ನೆಯನ್ನು ಇಡುತ್ತಿದ್ದರು, ಮತ್ತು ಹೇಳುತ್ತಿದ್ದರು: «اللَّهُمَّ» ಓ ನನ್ನ ಪರಿಪಾಲಕನೇ, «قِنِي» ನನ್ನನ್ನು ಕಾಪಾಡು ಮತ್ತು ರಕ್ಷಿಸು «عَذَابَكَ» ನಿನ್ನ ಶಿಕ್ಷೆ ಮತ್ತು ದಂಡನೆಯಿಂದ «يَوْمَ تَجْمَعُ أَوْ تَبْعَثُ عِبَادَكَ» ವಿಚಾರಣೆಯ ದಿನಕ್ಕಾಗಿ, ಪುನರುತ್ಥಾನ ದಿನದಂದು ನಿನ್ನ ದಾಸರನ್ನು ನೀನು ಒಟ್ಟುಗೂಡಿಸುವ ಅಥವಾ ಎಬ್ಬಿಸುವ ದಿನದಂದು.