ವರ್ಗ:
+ -

عَنْ أَبِي رُقَيَّةَ تَمِيمِ بْنِ أَوْسٍ الدَّارِيِّ رَضِيَ اللَّهُ عَنْهُ أَنَّ النَّبِيَّ صَلَّى اللَّهُ عَلَيْهِ وَسَلَّمَ قَالَ:
«الدِّينُ النَّصِيحَةُ» قُلْنَا: لِمَنْ؟ قَالَ: «لِلهِ وَلِكِتَابِهِ وَلِرَسُولِهِ وَلِأَئِمَّةِ الْمُسْلِمِينَ وَعَامَّتِهِمْ».

[صحيح] - [رواه مسلم] - [الأربعون النووية: 7]
المزيــد ...

ಅಬೂ ರುಖಯ್ಯಾ ತಮೀಮ್ ಇಬ್ನ್ ಔಸ್ ಅದ್ದಾರೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಧರ್ಮವು ಹಿತಚಿಂತನೆಯಾಗಿದೆ." ನಾವು ಕೇಳಿದೆವು: "ಯಾರ ಹಿತಚಿಂತನೆ?" ಅವರು ಉತ್ತರಿಸಿದರು: "ಅಲ್ಲಾಹನ, ಅವನ ಗ್ರಂಥದ, ಅವನ ಸಂದೇಶವಾಹಕರ, ಮುಸ್ಲಿಂ ಆಡಳಿತಗಾರರ ಮತ್ತು ಮುಸ್ಲಿಂ ಜನಸಾಮಾನ್ಯರ ಹಿತಚಿಂತನೆ."

[صحيح] - [رواه مسلم] - [الأربعون النووية - 7]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಧರ್ಮವು 'ಇಖ್ಲಾಸ್' (ನಿಷ್ಕಳಂಕತೆ) ಮತ್ತು 'ಸಿದ್ಖ್' (ಸತ್ಯಸಂಧತೆ) ಯ ಮೇಲೆ ನಿಂತಿದೆ. ಇದರಿಂದಾಗಿ ಅದನ್ನು ಅಲ್ಲಾಹು ಕಡ್ಡಾಯಗೊಳಿಸಿದಂತೆ, ಯಾವುದೇ ಕೊರತೆ ಅಥವಾ ವಂಚನೆಯಿಲ್ಲದೆ ಪರಿಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಆಗ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: 'ಹಿತಚಿಂತನೆ' ಯಾರಿಗಾಗಿ ಇರಬೇಕು? ಆಗ ಅವರು ಹೇಳಿದರು: ಮೊದಲನೆಯದಾಗಿ, ಹಿತಚಿಂತನೆಯು ಅಲ್ಲಾಹನಿಗಾಗಿ ಇರಬೇಕು: ಕರ್ಮಗಳನ್ನು ಅವನಿಗೆ ಮಾತ್ರ ನಿಷ್ಕಳಂಕಗೊಳಿಸುವುದು, ಅವನೊಂದಿಗೆ (ಯಾವುದನ್ನೂ) ಸಹಭಾಗಿಯಾಗಿ ಮಾಡದಿರುವುದು, ಅವನ ಪ್ರಭುತ್ವ, ದೈವಿಕತೆ ಮತ್ತು ಅವನ ಹೆಸರುಗಳು ಹಾಗೂ ಗುಣಲಕ್ಷಣಗಳಲ್ಲಿ ವಿಶ್ವಾಸವಿಡುವುದು, ಅವನ ಆದೇಶವನ್ನು ಗೌರವಿಸುವುದು, ಮತ್ತು ಅವನಲ್ಲಿ ವಿಶ್ವಾಸವಿಡಲು (ಜನರಿಗೆ) ಆಹ್ವಾನ ನೀಡುವುದು ಇದರಲ್ಲಿ ಒಳಪಡುತ್ತದೆ. ಎರಡನೆಯದಾಗಿ, ಹಿತಚಿಂತನೆಯು ಅವನ ಗ್ರಂಥವಾದ ಪವಿತ್ರ ಕುರ್‌ಆನ್‌ಗಾಗಿ ಇರಬೇಕು: ಅದು ಅವನ ವಚನಗಳೆಂದು, ಅವನ ಅಂತಿಮ ಗ್ರಂಥವೆಂದು, ಮತ್ತು ಅದು ಅದಕ್ಕಿಂತ ಹಿಂದಿನ ಎಲ್ಲಾ ಶರೀಅತ್‌ಗಳನ್ನು (ದೈವಿಕ ಶಾಸನಗಳನ್ನು) ರದ್ದುಗೊಳಿಸಿದೆ ಎಂದು ವಿಶ್ವಾಸವಿಡುವುದು, ಅದನ್ನು ಗೌರವಿಸುವುದು, ಅದನ್ನು ಸರಿಯಾದ ರೀತಿಯಲ್ಲಿ ಪಠಿಸುವುದು, ಅದರ ಸ್ಪಷ್ಟ ವಚನಗಳಂತೆ (ಮುಹ್ಕಮ್) ಕಾರ್ಯನಿರ್ವಹಿಸುವುದು, ಅದರ ಅಸ್ಪಷ್ಟ ವಚನಗಳಿಗೆ (ಮುತಶಾಬಿಹ್) ಶರಣಾಗುವುದು, ವಕ್ರಗೊಳಿಸುವವರ ವ್ಯಾಖ್ಯಾನಗಳಿಂದ ಅದನ್ನು ರಕ್ಷಿಸುವುದು, ಅದರ ಉಪದೇಶಗಳಿಂದ ಪಾಠ ಕಲಿಯುವುದು, ಅದರ ಜ್ಞಾನಗಳನ್ನು ಹರಡುವುದು, ಮತ್ತು ಅದರ ಕಡೆಗೆ (ಜನರಿಗೆ) ಆಹ್ವಾನ ನೀಡುವುದು ಇದರಲ್ಲಿ ಒಳಪಡುತ್ತದೆ. ಮೂರನೆಯದಾಗಿ, ಹಿತಚಿಂತನೆಯು ಅವನ ಸಂದೇಶವಾಹಕರಾದ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗಾಗಿ ಇರಬೇಕು: ಅವರು ಅಂತಿಮ ಸಂದೇಶವಾಹಕರೆಂದು ವಿಶ್ವಾಸವಿಡುವುದು, ಅವರು ತಂದಿರುವುದನ್ನು ಸತ್ಯವೆಂದು ಒಪ್ಪಿಕೊಳ್ಳುವುದು, ಅವರ ಆದೇಶವನ್ನು ಪಾಲಿಸುವುದು, ಅವರು ನಿಷೇಧಿಸಿದ ಕಾರ್ಯಗಳಿಂದ ದೂರವಿರುವುದು, ಅವರು ತಂದಿರುವುದರ ಮೂಲಕವಲ್ಲದೆ ಬೇರೆ ರೀತಿಯಲ್ಲಿ ಅಲ್ಲಾಹನನ್ನು ಆರಾಧಿಸದಿರುವುದು, ಅವರ ಹಕ್ಕನ್ನು ಗೌರವಿಸುವುದು, ಅವರನ್ನು ಆದರಿಸುವುದು, ಅವರ ಆಹ್ವಾನವನ್ನು ಪ್ರಚಾರ ಮಾಡುವುದು, ಅವರ ಶರೀಅತ್ ಅನ್ನು ಹಬ್ಬಿಸುವುದು, ಮತ್ತು ಅವರ ಮೇಲಿನ ಆರೋಪಗಳನ್ನು ನಿರಾಕರಿಸುವುದು ಇದರಲ್ಲಿ ಒಳಪಡುತ್ತದೆ. ನಾಲ್ಕನೆಯದಾಗಿ, ಹಿತಚಿಂತನೆಯು ಮುಸ್ಲಿಮ್ ನಾಯಕರಿಗಾಗಿ ಇರಬೇಕು: ಸತ್ಯದ ವಿಷಯದಲ್ಲಿ ಅವರೊಂದಿಗೆ ಸಹಕರಿಸುವುದು, ಅಧಿಕಾರದ ವಿಷಯದಲ್ಲಿ ಅವರೊಂದಿಗೆ ತರ್ಕಿಸದಿರುವುದು, ಮತ್ತು ಅಲ್ಲಾಹನ ವಿಧೇಯತೆಯ ವಿಷಯದಲ್ಲಿ ಅವರ ಮಾತನ್ನು ಕೇಳುವುದು ಮತ್ತು ಅನುಸರಿಸುವುದು ಇದರಲ್ಲಿ ಒಳಪಡುತ್ತದೆ. ಐದನೆಯದಾಗಿ, ಹಿತಚಿಂತನೆಯು ಮುಸ್ಲಿಮ್ ಜನಸಾಮಾನ್ಯರಿಗಾಗಿ ಇರಬೇಕು: ಅವರಿಗೆ ಉಪಕಾರ ಮಾಡುವುದು, ಅವರಿಗೆ (ಒಳಿತಿನ ಕಡೆಗೆ) ಆಹ್ವಾನ ನೀಡುವುದು, ಅವರಿಗೆ ತೊಂದರೆ ನೀಡದಿರುವುದು, ಅವರಿಗಾಗಿ ಒಳಿತನ್ನು ಪ್ರೀತಿಸುವುದು, ಮತ್ತು ಪುಣ್ಯ ಹಾಗೂ ದೇವಭಯದಲ್ಲಿ ಅವರೊಂದಿಗೆ ಸಹಕರಿಸುವುದು ಇದರಲ್ಲಿ ಒಳಪಡುತ್ತದೆ.

ಹದೀಸಿನ ಪ್ರಯೋಜನಗಳು

  1. ಎಲ್ಲರ ಬಗ್ಗೆಯೂ ಹಿತಚಿಂತನೆ ಮಾಡಬೇಕೆಂದು ಈ ಹದೀಸ್ ತಿಳಿಸುತ್ತದೆ.
  2. ಧರ್ಮದಲ್ಲಿ ಹಿತಚಿಂತನೆಗಿರುವ ಮಹಾ ಸ್ಥಾನಮಾನವನ್ನು ಈ ಹದೀಸ್ ತಿಳಿಸುತ್ತದೆ.
  3. ಧರ್ಮದಲ್ಲಿ ನಂಬಿಕೆಗಳು, ಮಾತುಗಳು ಮತ್ತು ಕರ್ಮಗಳು ಒಳಗೊಂಡಿವೆಯೆಂದು ಈ ಹದೀಸ್ ತಿಳಿಸುತ್ತದೆ.
  4. ಹಿತಚಿಂತನೆ ಮಾಡಲಾಗುವ ವ್ಯಕ್ತಿಯ ಬಗ್ಗೆ ಮನಸ್ಸಿನಲ್ಲಿರುವ ಕೆಟ್ಟ ವಿಚಾರಗಳನ್ನು ನಿವಾರಿಸಿ, ಅವರಿಗೆ ಒಳಿತನ್ನು ಮಾತ್ರ ಉದ್ದೇಶಿಸುವುದು ಹಿತಚಿಂತನೆಯ ಒಂದು ಭಾಗವಾಗಿದೆ.
  5. ಮೊದಲು ವಿಷಯವನ್ನು ಮೊತ್ತವಾಗಿ ಪ್ರಸ್ತಾಪಿಸಿ ನಂತರ ಅವುಗಳನ್ನು ಒಂದೊಂದಾಗಿ ವಿವರಿಸುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಬೋಧನಾ ಶೈಲಿಯಾಗಿದೆ.
  6. ವಿಷಯಗಳನ್ನು ವಿವರಿಸುವಾಗ ಅತಿಪ್ರಮುಖ ವಿಷಯಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ, ಇಲ್ಲಿ ಅಲ್ಲಾಹನಿಂದ ಪ್ರಾರಂಭಿಸಿ, ನಂತರ ಅವನ ಗ್ರಂಥ, ಪ್ರವಾದಿ, ಮುಸ್ಲಿಂ ಮುಖಂಡರು ಮತ್ತು ಮುಸ್ಲಿಂ ಜನಸಾಮಾನ್ಯರ ಬಗ್ಗೆ ತಿಳಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಪಶ್ತೋ الأسامية الألبانية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الطاجيكية الكينياروندا المجرية التشيكية الموري المالاجاشية الفولانية الإيطالية الأورومو الولوف الأذربيجانية الأوزبكية الأوكرانية الجورجية المقدونية الخميرية
ಅನುವಾದಗಳನ್ನು ತೋರಿಸಿ
ವರ್ಗಗಳು
ಇನ್ನಷ್ಟು