عَنْ أَبِي سَعِيدٍ سَعْدِ بْنِ مَالِكِ بْنِ سِنَانٍ الخُدْرِيّ رَضِيَ اللَّهُ عَنْهُ أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«لَا ضَرَرَ وَلَا ضِرَارَ».
[حسن] - [رواه ابن ماجه، والدارقطني، وغيرهما مسندًا] - [الأربعون النووية: 32]
المزيــد ...
ಅಬೂ ಸಈದ್ ಸಅದ್ ಇಬ್ನ್ ಮಾಲಿಕ್ ಇಬ್ನ್ ಸಿನಾನ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಹಾನಿ ಅಥವಾ ಪ್ರತೀಕಾರದ ಹಾನಿ ಇರಬಾರದು."
[حسن] - [رواه ابن ماجه والدارقطني وغيرهما مسندًا] - [الأربعون النووية - 32]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ತನ್ನಿಂದ ಮತ್ತು ಇತರರಿಂದ ವಿವಿಧ ತರಹ ಮತ್ತು ರೂಪಗಳಲ್ಲಿರುವ ಹಾನಿಯನ್ನು ತಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ, ತನಗಾಗಲಿ, ಇತರರಿಗಾಗಲಿ ಯಾರಿಗೂ ಹಾನಿ ಮಾಡಲು ಅನುಮತಿಯಿಲ್ಲ. ಹಾಗೆಯೇ, ಹಾನಿಯನ್ನು ಹಾನಿಯಿಂದ ಎದುರಿಸಲು ಕೂಡ ಅನುಮತಿಯಿಲ್ಲ. ಏಕೆಂದರೆ ಹಾನಿಯನ್ನು ಹಾನಿಯಿಂದ ನಿವಾರಿಸಲಾಗುವುದಿಲ್ಲ. ಆದರೆ ಮಿತಿಮೀರದ ರೂಪದಲ್ಲಿ 'ಖಿಸಾಸ್' (ಸಮನಾದುದಕ್ಕೆ ಸಮನಾದ ಪ್ರತೀಕಾರ) ನ ರೀತಿಯಲ್ಲಿ ಹೊರತು.