ವರ್ಗ:
+ -

عَن ابنِ عباسٍ رضي الله عنهما أنَّ رسولَ اللهِ صلي الله عليه وسلم قال:
«لَو يُعطَى النّاسُ بدَعواهُم لادَّعَى رِجالٌ أموالَ قَومٍ ودِماءَهُم، لَكِنَّ البَيِّنَةَ على المُدَّعِى، واليَمينَ على مَن أنكَرَ».

[حسن] - [رواه البيهقي، وغيره هكذا، وبعضه في الصحيحين] - [الأربعون النووية: 33]
المزيــد ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಂದು ವೇಳೆ ಜನರಿಗೆ ಅವರ ದಾವೆಗಳ (ಹೇಳಿಕೆಗಳ) ಆಧಾರದ ಮೇಲೆ (ಅವರು ಕೇಳಿದ್ದನ್ನು) ನೀಡಲಾಗುತ್ತಿದ್ದರೆ, ಖಂಡಿತವಾಗಿಯೂ ಕೆಲವರು ಇತರರ ಸಂಪತ್ತು ಮತ್ತು ರಕ್ತಕ್ಕಾಗಿ (ಅನ್ಯಾಯವಾಗಿ) ದಾವೆ ಮಾಡುತ್ತಿದ್ದರು. ಆದರೆ, ಪುರಾವೆಯು ದಾವೆ ಮಾಡುವವನ ಮೇಲಿದೆ, ಮತ್ತು ಪ್ರಮಾಣವು ನಿರಾಕರಿಸುವವನ ಮೇಲಿದೆ".

[حسن] - [رواه البيهقي وغيره هكذا وبعضه في الصحيحين] - [الأربعون النووية - 33]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾವುದೇ ಪುರಾವೆ ಅಥವಾ ಆಧಾರವಿಲ್ಲದೆ ಕೇವಲ ಜನರ ಹಕ್ಕೊತ್ತಾಯಗಳಿಗೆ ಅನುಗುಣವಾಗಿ ಅವರಿಗೆ ನೀಡಲಾಗುತ್ತಿದ್ದರೆ, ಜನರು ಇತರರ ಸಂಪತ್ತು ಮತ್ತು ಜೀವಗಳಿಗಾಗಿ ಹಕ್ಕೊತ್ತಾಯ ಮಾಡುತ್ತಿದ್ದರು. ಆದರೆ, ಫಿರ್ಯಾದಿ ತನ್ನ ವಾದಕ್ಕೆ ಆಧಾರವಾಗಿ ಪುರಾವೆ ಒದಗಿಸುವುದು ಕಡ್ಡಾಯವಾಗಿದೆ. ಅವನಲ್ಲಿ ಯಾವುದೇ ಪುರಾವೆ ಇಲ್ಲದಿದ್ದರೆ, ಹಕ್ಕೊತ್ತಾಯವನ್ನು ಪ್ರತಿವಾದಿಯ ಮುಂದೆ ಪ್ರದರ್ಶಿಸಲಾಗುತ್ತದೆ. ಅವನು ಅದನ್ನು ನಿರಾಕರಿಸುವುದಾದರೆ ಪ್ರಮಾಣ ಮಾಡಬೇಕಾಗುತ್ತದೆ. ಅದರ ನಂತರವೇ ಅವನನ್ನು ವಿಮುಕ್ತಗೊಳಿಸಲಾಗುತ್ತದೆ.

ಹದೀಸಿನ ಪ್ರಯೋಜನಗಳು

  1. ಇಬ್ನ್ ದಕೀಕುಲ್ ಈದ್ ಹೇಳಿದರು: "ಈ ಹದೀಸ್ ತೀರ್ಪು ನೀಡುವುದಕ್ಕಿರುವ ಮೂಲ ನಿಯಮಗಳಲ್ಲಿ ಒಂದಾಗಿದ್ದು, ವಿವಾದ ಮತ್ತು ತರ್ಕಗಳ ಸಂದರ್ಭದಲ್ಲಿ ಅವಲಂಬಿಸಬೇಕಾದ ಅತಿದೊಡ್ಡ ಉಲ್ಲೇಖವಾಗಿದೆ."
  2. ಜನರ ಸಂಪತ್ತು ಮತ್ತು ಜೀವಗಳಲ್ಲಿ ಇತರರು ಚೆಲ್ಲಾಟವಾಡದಂತೆ ರಕ್ಷಿಸುವುದು ಇಸ್ಲಾಮಿ ಧರ್ಮಶಾಸ್ತ್ರದ ಉದ್ದೇಶಗಳಲ್ಲಿ ಒಂದಾಗಿದೆ.
  3. ನ್ಯಾಯಾಧೀಶರು ತಮ್ಮ ಪಾಂಡಿತ್ಯಕ್ಕೆ ಅನುಗುಣವಾಗಿ ತೀರ್ಪು ನೀಡಬಾರದು. ಬದಲಿಗೆ, ಪುರಾವೆಗಳ ಆಧಾರದಲ್ಲಿ ತೀರ್ಪು ನೀಡಬೇಕು.
  4. ಸೂಕ್ತ ಆಧಾರವಿಲ್ಲದೆ ಮಾಡಲಾಗುವ ಹಕ್ಕೊತ್ತಾಯಗಳೆಲ್ಲವೂ ತಿರಸ್ಕೃತವಾಗಿವೆ. ಅದು ಹಕ್ಕುಗಳು, ವ್ಯವಹಾರಗಳು ಅಥವಾ ವಿಶ್ವಾಸ ಮತ್ತು ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಾದರೂ ಸಹ.
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಬಂಗಾಳಿ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಜರ್ಮನ್ ಪಶ್ತೋ الأسامية الألبانية الأمهرية الغوجاراتية القيرقيزية النيبالية الليتوانية الدرية الصربية الطاجيكية الكينياروندا المجرية التشيكية الموري الولوف الأذربيجانية الأوزبكية الأوكرانية الجورجية المقدونية الخميرية
ಅನುವಾದಗಳನ್ನು ತೋರಿಸಿ
ವರ್ಗಗಳು
ಇನ್ನಷ್ಟು