عَنْ قَتَادَةَ قَالَ:
سُئِلَ أَنَسٌ كَيْفَ كَانَتْ قِرَاءَةُ النَّبِيِّ صَلَّى اللهُ عَلَيْهِ وَسَلَّمَ؟ فَقَالَ: «كَانَتْ مَدًّا»، ثُمَّ قَرَأَ: {بِسْمِ اللَّهِ الرَّحْمَنِ الرَّحِيمِ} [الفاتحة: 1] يَمُدُّ بِبِسْمِ اللَّهِ، وَيَمُدُّ بِالرَّحْمَنِ، وَيَمُدُّ بِالرَّحِيمِ.
[صحيح] - [رواه البخاري] - [صحيح البخاري: 5046]
المزيــد ...
ಕತಾದ ರಿಂದ ವರದಿ: ಅವರು ಹೇಳಿದರು:
"ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಠಣ (ಓದುವ ರೀತಿ) ಹೇಗಿತ್ತು?" ಎಂದು ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಕೇಳಲಾಯಿತು. ಅವರು ಹೇಳಿದರು: "ಅದು ದೀರ್ಘವಾಗಿ (ಎಳೆದು ಓದುವಂತಹುದು) ಆಗಿತ್ತು". ನಂತರ ಅವರು: “ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್” ಎಂದು ಪಠಿಸಿದರು. ಅವರು 'ಬಿಸ್ಮಿಲ್ಲಾಹ್' ಎಂಬುದನ್ನು ದೀರ್ಘಗೊಳಿಸಿದರು (ಎಳೆದರು), 'ಅರ್ರಹ್ಮಾನ್' ಎಂಬುದನ್ನು ದೀರ್ಘಗೊಳಿಸಿದರು ಮತ್ತು 'ಅರ್ರಹೀಮ್' ಎಂಬುದನ್ನು ದೀರ್ಘಗೊಳಿಸಿದರು.
[صحيح] - [رواه البخاري] - [صحيح البخاري - 5046]
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರ್‌ಆನ್ ಪಠಣ ಹೇಗಿತ್ತು ಎಂದು ಕೇಳಲಾಯಿತು. ಆಗ ಅವರು: "ಅವರು ತಮ್ಮ ಪಠಣದಲ್ಲಿ ಸ್ವರವನ್ನು ದೀರ್ಘಗೊಳಿಸುತ್ತಿದ್ದರು" ಎಂದು ಹೇಳಿದರು. ಅಂದರೆ, ಅವರು 'ಅಲ್ಲಾಹ್' ಪದದಲ್ಲಿರುವ 'ಲಾಮ್' ಅಕ್ಷರವನ್ನು, 'ಅರ್ರಹ್ಮಾನ್' ಪದದಲ್ಲಿರುವ 'ಮೀಮ್' ಅಕ್ಷರವನ್ನು ಮತ್ತು 'ಅರ್ರಹೀಮ್' ಪದದಲ್ಲಿರುವ 'ಹಾ'ಅಕ್ಷರವನ್ನು ಎಳೆದು ಓದುತ್ತಿದ್ದರು.