عَنْ عُمَرَ بْنِ الخَطَّابِ رَضِيَ اللَّهُ عَنْهُ:
قَدِمَ عَلَى النَّبِيِّ صَلَّى اللهُ عَلَيْهِ وَسَلَّمَ سَبْيٌ، فَإِذَا امْرَأَةٌ مِنَ السَّبْيِ قَدْ تَحْلُبُ ثَدْيَهَا تَسْقِي، إِذَا وَجَدَتْ صَبِيًّا فِي السَّبْيِ أَخَذَتْهُ، فَأَلْصَقَتْهُ بِبَطْنِهَا وَأَرْضَعَتْهُ، فَقَالَ لَنَا النَّبِيُّ صَلَّى اللهُ عَلَيْهِ وَسَلَّمَ: «أَتُرَوْنَ هَذِهِ طَارِحَةً وَلَدَهَا فِي النَّارِ؟» قُلْنَا: لاَ، وَهِيَ تَقْدِرُ عَلَى أَلَّا تَطْرَحَهُ، فَقَالَ: «لَلَّهُ أَرْحَمُ بِعِبَادِهِ مِنْ هَذِهِ بِوَلَدِهَا».
[صحيح] - [متفق عليه] - [صحيح البخاري: 5999]
المزيــد ...
ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕೆಲವು ಯುದ್ಧ ಕೈದಿಗಳನ್ನು ತರಲಾಯಿತು. ಆ ಕೈದಿಗಳಲ್ಲಿ ಒಬ್ಬ ಮಹಿಳೆ ಇದ್ದಳು. ಅವಳ ಸ್ತನಗಳಿಂದ ಹಾಲು ಸುರಿಯುತ್ತಿತ್ತು. ಅವಳು (ಮಕ್ಕಳಿಗೆ) ಕುಡಿಸಲು (ಹುಡುಕುತ್ತಿದ್ದಳು). ಕೈದಿಗಳಲ್ಲಿ ಅವಳು ಯಾವುದೇ ಮಗುವನ್ನು ಕಂಡರೂ ಅದನ್ನು ತೆಗೆದುಕೊಂಡು, ತನ್ನ ಹೊಟ್ಟೆಗೆ ಅಪ್ಪಿಕೊಂಡು ಅದಕ್ಕೆ ಹಾಲುಣಿಸುತ್ತಿದ್ದಳು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈಕೆ ತನ್ನ ಮಗುವನ್ನು ಬೆಂಕಿಯಲ್ಲಿ ಎಸೆಯುತ್ತಾಳೆಂದು ನೀವು ಭಾವಿಸುತ್ತೀರಾ?". ನಾವು ಹೇಳಿದೆವು: "ಇಲ್ಲ, ಅದನ್ನು ಎಸೆಯದಿರಲು ಅವಳಿಗೆ ಶಕ್ತಿಯಿರುವವರೆಗೆ (ಅವಳು ಹಾಗೆ ಮಾಡಲಾರಳು)". ಆಗ ಅವರು (ಪ್ರವಾದಿ) ಹೇಳಿದರು: "ಈಕೆಗೆ ತನ್ನ ಮಗುವಿನ ಮೇಲಿರುವ ಕರುಣೆಗಿಂತಲೂ ಹೆಚ್ಚು ಅಲ್ಲಾಹನಿಗೆ ತನ್ನ ದಾಸರ ಮೇಲೆ ಕರುಣೆಯಿದೆ".
[صحيح] - [متفق عليه] - [صحيح البخاري - 5999]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹವಾಝಿನ್ ಗೋತ್ರದ ಕೈದಿಗಳನ್ನು ತರಲಾಯಿತು. ಅವರಲ್ಲಿ ಒಬ್ಬ ಮಹಿಳೆ ತನ್ನ ಮಗುವನ್ನು ಹುಡುಕುತ್ತಿದ್ದಳು. ಅವಳು ಯಾವುದೇ ಮಗುವನ್ನು ಕಂಡರೂ ಅದನ್ನು ತೆಗೆದುಕೊಂಡು ಹಾಲುಣಿಸುತ್ತಿದ್ದಳು. ಏಕೆಂದರೆ ಅವಳ ಸ್ತನಗಳಲ್ಲಿ ಹಾಲು ತುಂಬಿದ್ದರಿಂದ ಅವಳಿಗೆ ತೊಂದರೆಯಾಗುತ್ತಿತ್ತು. ಆಗ ಅವಳು ಕೈದಿಗಳಲ್ಲಿ ತನ್ನ ಮಗುವನ್ನು ಕಂಡಳು. ಅವನನ್ನು ತೆಗೆದುಕೊಂಡು, ತನ್ನ ಹೊಟ್ಟೆಗೆ ಅಪ್ಪಿಕೊಂಡು ಅವನಿಗೆ ಹಾಲುಣಿಸಿದಳು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳಿಗೆ ಹೇಳಿದರು: ಈಕೆ ತನ್ನ ಮಗುವನ್ನು ಬೆಂಕಿಯಲ್ಲಿ ಎಸೆಯುತ್ತಾಳೆಂದು ನೀವು ಭಾವಿಸುತ್ತೀರಾ? ನಾವು ಹೇಳಿದೆವು: ಅವಳು ಎಂದಿಗೂ ಸ್ವಇಚ್ಛೆಯಿಂದ ಅದನ್ನು ಎಸೆಯಲಾರಳು. ಆಗ ಅವರು ಹೇಳಿದರು: ಹಾಗಾದರೆ, ಈಕೆಗೆ ತನ್ನ ಮಗುವಿನ ಮೇಲಿರುವ ಕರುಣೆಗಿಂತಲೂ ಹೆಚ್ಚು ಅಲ್ಲಾಹನಿಗೆ ತನ್ನ ಮುಸ್ಲಿಂ ದಾಸರ ಮೇಲೆ ಕರುಣೆಯಿದೆ".