عَنْ عَائِشَةَ رَضِيَ اللَّهُ عَنْهَا عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«الرَّضَاعَةُ تُحَرِّمُ مَا تُحَرِّمُ الوِلَادَةُ».
[صحيح] - [متفق عليه] - [الأربعون النووية: 44]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಜನ್ಮದಿಂದಾಗುವ ಸಂಬಂಧಗಳು ನಿಷಿದ್ಧಗೊಳಿಸುವುದನ್ನು ಸ್ತನಪಾನದಿಂದಾಗುವ ಸಂಬಂಧವೂ ನಿಷಿದ್ಧಗೊಳಿಸುತ್ತದೆ".
[صحيح] - [متفق عليه] - [الأربعون النووية - 44]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಜನ್ಮ ಮತ್ತು ವಂಶಾವಳಿಯಿಂದ ನಿಷಿದ್ಧವಾಗುವ ಚಿಕ್ಕಮ್ಮ, ದೊಡ್ಡಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಸಹೋದರ... ಮುಂತಾದ ಸಂಬಂಧಗಳೆಲ್ಲವೂ ಸ್ತನಪಾನದಿಂದಲೂ ನಿಷಿದ್ಧವಾಗುತ್ತವೆ. ಜನ್ಮದಿಂದಾಗುವ ಸಂಬಂಧವು ಯಾವ ನಿಯಮಗಳನ್ನು ಅನುಮತಿಸುತ್ತದೆಯೋ, ಅವುಗಳನ್ನು ಸ್ತನಪಾನದಿಂದಾಗುವ ಸಂಬಂಧವೂ ಅನುಮತಿಸುತ್ತದೆ.