ಉಪವರ್ಗಗಳು

ಹದೀಸ್‌ಗಳ ಪಟ್ಟಿ

1. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿನ ಒಂದು ಯುದ್ಧದಲ್ಲಿ ಒಬ್ಬ ಮಹಿಳೆ ಕೊಲೆಯಾಗಿ ಬಿದ್ದಿರುವುದು ಕಂಡುಬಂತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದನ್ನು ಖಂಡಿಸಿದರು
عربي ಆಂಗ್ಲ ಉರ್ದು
2. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹರಕೆಯನ್ನು ನಿಷೇಧಿಸಿದರು ಮತ್ತು ಹೇಳಿದರು: "ಅದು ಯಾವುದೇ ಒಳಿತನ್ನು ತರುವುದಿಲ್ಲ. ಅದರಿಂದ ಜಿಪುಣನಲ್ಲಿರುವ (ಹಣವನ್ನು) ಮಾತ್ರ ಹೊರತೆಗೆಯಲಾಗುತ್ತದೆ
عربي ಆಂಗ್ಲ ಉರ್ದು
3. ನಿಶ್ಚಯವಾಗಿಯೂ, ಅಲ್ಲಾಹನಾಣೆ! ಅಲ್ಲಾಹು ಇಚ್ಛಿಸಿದರೆ, ನಾನು ಒಂದು ಕಾರ್ಯವನ್ನು ಮಾಡುತ್ತೇನೆಂದು ಪ್ರತಿಜ್ಞೆ ಮಾಡಿ, ನಂತರ ನನಗೆ ಇನ್ನೊಂದು ಕಾರ್ಯವು ಅದಕ್ಕಿಂತ ಉತ್ತಮವೆಂದು ಕಂಡರೆ, ನಾನು ನನ್ನ ಪ್ರತಿಜ್ಞೆಗೆ ಪರಿಹಾರ ನೀಡಿ, ಆ ಉತ್ತಮವಾದ ಕಾರ್ಯವನ್ನು ಮಾಡುತ್ತೇನೆ - 2 ملاحظة
عربي ಆಂಗ್ಲ ಉರ್ದು
4. ಇಹಲೋಕದಲ್ಲಿ ರೇಷ್ಮೆ ಧರಿಸಿದವನು ಪರಲೋಕದಲ್ಲಿ ಅದನ್ನು ಧರಿಸುವುದಿಲ್ಲ
عربي ಆಂಗ್ಲ ಉರ್ದು
5. ದಬ್ಬಾಳಿಕೆ ಮಾಡುವ ಆಡಳಿತಗಾರನ ಮುಂದೆ ನ್ಯಾಯವಾದ ಮಾತನ್ನು ಹೇಳುವುದು ಅತಿಶ್ರೇಷ್ಠ ಜಿಹಾದ್ ಆಗಿದೆ
عربي ಆಂಗ್ಲ ಉರ್ದು
6. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು
عربي ಆಂಗ್ಲ ಉರ್ದು
7. ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತ್ಯಸಮಯದ ಬಗ್ಗೆ ವಿಚಾರಿಸುತ್ತಾ ಕೇಳಿದರು: "ಅಂತ್ಯಸಮಯ ಯಾವಾಗ?" ಅವರು ಕೇಳಿದರು: "ನೀನು ಅದಕ್ಕಾಗಿ ಏನನ್ನು ಸಿದ್ಧಪಡಿಸಿದ್ದೀಯಾ?
عربي ಆಂಗ್ಲ ಉರ್ದು
8. ಮನುಷ್ಯನು ಅವನ ಆಪ್ತ ಸ್ನೇಹಿತನ ಧರ್ಮದಲ್ಲಿರುತ್ತಾನೆ. ಆದ್ದರಿಂದ ನಿಮ್ಮಲ್ಲೊಬ್ಬನು ತಾನು ಯಾರೊಡನೆ ಸ್ನೇಹ ಬೆಳೆಸುತ್ತಿದ್ದೇನೆಂದು ನೋಡಿಕೊಳ್ಳಲಿ
عربي ಆಂಗ್ಲ ಉರ್ದು
9. ಓ ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ದೃಢವಾಗಿ ನಿಲ್ಲಿಸು" ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪದೇ ಪದೇ ಪ್ರಾರ್ಥಿಸುತ್ತಿದ್ದರು
عربي ಆಂಗ್ಲ ಉರ್ದು
10. ನಾಯಿ ನಿಮ್ಮಲ್ಲೊಬ್ಬರ ಪಾತ್ರೆಯಲ್ಲಿ ಕುಡಿದರೆ, ಅವನು ಅದನ್ನು ಏಳು ಬಾರಿ ತೊಳೆಯಬೇಕಾಗಿದೆ
عربي ಆಂಗ್ಲ ಉರ್ದು
11. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಸನ್ನಿಹಿತವಾದ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ
عربي ಆಂಗ್ಲ ಉರ್ದು
12. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತಃಪುರದಲ್ಲಿರುವ ಕನ್ಯೆಗಿಂತಲೂ ತೀವ್ರ ನಾಚಿಕೆಯನ್ನು ಹೊಂದಿದ್ದರು. ಅವರು ಅವರಿಗೆ ಇಷ್ಟವಿಲ್ಲದ ಏನನ್ನಾದರೂ ನೋಡಿದರೆ, ಅದನ್ನು ಅವರ ಮುಖದಲ್ಲಿ ನಾವು ಗುರುತಿಸುತ್ತಿದ್ದೆವು
عربي ಆಂಗ್ಲ ಉರ್ದು
13. ಯಾರು ಅಲ್ಲಾಹನೊಡನೆ ಪ್ರಾಮಾಣಿಕವಾಗಿ ಹುತಾತ್ಮತೆಯನ್ನು ಬೇಡುತ್ತಾನೋ ಅವನನ್ನು ಅಲ್ಲಾಹು ಹುತಾತ್ಮರ ಸ್ಥಾನಗಳಿಗೆ ತಲುಪಿಸುತ್ತಾನೆ. ಅವನು ತನ್ನ ಹಾಸಿಗೆಯಲ್ಲಿ ಪ್ರಾಣ ಬಿಟ್ಟರೂ ಸಹ
عربي ಆಂಗ್ಲ ಉರ್ದು
14. ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು, ಅವರು ಅಲ್ಲಾಹನನ್ನು ಭೇಟಿಯಾಗುವವರೆಗೂ ಸ್ವತಃ ಅವರಲ್ಲಿ, ಅವರ ಮಕ್ಕಳಲ್ಲಿ ಮತ್ತು ಅವರ ಸಂಪತ್ತಿನಲ್ಲಿ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ; ಎಲ್ಲಿಯವರೆಗೆಂದರೆ, ಅವರು ಸಂಪೂರ್ಣ ಪಾಪರಹಿತರಾಗುವ ತನಕ
عربي ಆಂಗ್ಲ ಉರ್ದು
15. ಅಲ್ಲಾಹು ದಾಸನಿಗೆ ಅತಿನಿಕಟನಾಗುವುದು ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ
عربي ಆಂಗ್ಲ ಉರ್ದು
16. ಪುನರುತ್ಥಾನ ದಿನದಂದು ಒಬ್ಬ ವ್ಯಕ್ತಿಯನ್ನು ತರಲಾಗುವುದು ಮತ್ತು ಅವನನ್ನು ನರಕಕ್ಕೆ ಎಸೆಯಲಾಗುವುದು. ಆಗ ಅವನ ಕರುಳುಗಳು ಹೊಟ್ಟೆಯಿಂದ ಹೊರ ಚೆಲ್ಲುವುವು. ಕತ್ತೆಯು ಗಾಣಕ್ಕೆ ಸುತ್ತು ಬರುವಂತೆ ಅವನು ಅದರೊಂದಿಗೆ ಸುತ್ತು ಬರುವನು
عربي ಆಂಗ್ಲ ಉರ್ದು
17. ಅದು ಎಪ್ಪತ್ತು ವರ್ಷಗಳ ಹಿಂದೆ ನರಕಕ್ಕೆ ಎಸೆಯಲಾದ ಒಂದು ಕಲ್ಲು. ಅದು ನರಕದೊಳಗೆ ಬೀಳುತ್ತಾ ಇದೀಗ ಅದರ ತಳಭಾಗವನ್ನು ತಲುಪಿದೆ
عربي ಆಂಗ್ಲ ಉರ್ದು
18. ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಒಬ್ಬ ಯೋಧನನ್ನು ಸಿದ್ಧಗೊಳಿಸುತ್ತಾನೋ ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ. ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವವನು ಬಿಟ್ಟು ಹೋದ ಅವನ ಆಶ್ರಿತರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೋ ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ
عربي ಆಂಗ್ಲ ಉರ್ದು