ಉಪವರ್ಗಗಳು

ಹದೀಸ್‌ಗಳ ಪಟ್ಟಿ

1. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು
عربي ಆಂಗ್ಲ ಉರ್ದು
2. ನಾನು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಿರುನಾಲಗೆ ಕಾಣುವ ರೀತಿಯಲ್ಲಿ ಪೂರ್ಣವಾಗಿ ನಗುವುದನ್ನು ನೋಡಿಲ್ಲ, ಬದಲಿಗೆ, ಅವರು ಕೇವಲ ಮಂದಹಾಸ ಬೀರುತ್ತಿದ್ದರು
عربي ಆಂಗ್ಲ ಉರ್ದು
3. ನಿಮ್ಮಲ್ಲಿ ಯಾರಾದರೂ ಅವರು ಇಷ್ಟಪಡುವ ಕನಸನ್ನು ಕಂಡರೆ, ಅದು ಅಲ್ಲಾಹನಿಂದಾಗಿದೆ. ಆದ್ದರಿಂದ ಅವರು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ ಮತ್ತು ಅದರ ಬಗ್ಗೆ (ಇತರರಿಗೆ) ಹೇಳಲಿ. ಆದರೆ ಅವರು ಅದಲ್ಲದೆ ಅವರಿಗೆ ಇಷ್ಟವಿಲ್ಲದ ಬೇರೆ ಏನಾದರೂ ಕಂಡರೆ, ಅದು ಕೇವಲ ಶೈತಾನನಿಂದಾಗಿದೆ. ಆದ್ದರಿಂದ ಅವರು ಅದರ ಕೆಡುಕಿನಿಂದ ರಕ್ಷಣೆಯನ್ನು ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ
عربي ಆಂಗ್ಲ ಉರ್ದು
4. ಯಾರು ಇಬ್ಬರು ಹೆಣ್ಣು ಮಕ್ಕಳನ್ನು ಅವರು ಪ್ರಾಯಕ್ಕೆ ಬರುವವರೆಗೆ ಪೋಷಿಸುತ್ತಾರೋ, ಅವರು ಮತ್ತು ನಾನು ಪುನರುತ್ಥಾನ ದಿನದಂದು ಹೀಗೆ ಬರುವೆವು." (ಹೀಗೆ ಹೇಳುತ್ತಾ) ಅವರು ತಮ್ಮ ಬೆರಳುಗಳನ್ನು ಜೋಡಿಸಿದರು
عربي ಆಂಗ್ಲ ಉರ್ದು
5. ಸತ್ಯವಿಶ್ವಾಸಿಗಳಿಗೆ - ಅಥವಾ ನನ್ನ ಸಮುದಾಯಕ್ಕೆ - ನಾನು ಹೆಚ್ಚಿನ ಹೊರೆ ಹಾಕುವುದಿಲ್ಲ ಎಂದಾಗಿದ್ದರೆ, ನಾನು ಅವರಿಗೆ ಪ್ರತಿ ನಮಾಝ್‌ನ ಸಮಯದಲ್ಲಿ ಸಿವಾಕ್ (ದಂತ ಕಡ್ಡಿ) ಬಳಸಲು ಆಜ್ಞಾಪಿಸುತ್ತಿದ್ದೆ
عربي ಆಂಗ್ಲ ಉರ್ದು
6. ದಾಸರು ಬೆಳಗನ್ನು ಪ್ರವೇಶಿಸುವ ಪ್ರತಿ ದಿನವೂ ಎರಡು ದೇವದೂತರುಗಳು ಇಳಿದು ಬರುತ್ತಾರೆ. ಆಗ ಅವರಲ್ಲೊಬ್ಬರು ಹೇಳುವರು: ಓ ಅಲ್ಲಾಹ್! ಖರ್ಚು ಮಾಡುವವರಿಗೆ ಬದಲಿಯನ್ನು ನೀಡು. ಇನ್ನೊಬ್ಬರು ಹೇಳುವರು: ಓ ಅಲ್ಲಾಹ್! (ಖರ್ಚು ಮಾಡದೆ) ತಡೆಹಿಡಿಯುವವರಿಗೆ ಹಾನಿಯನ್ನು ನೀಡು
عربي ಆಂಗ್ಲ ಉರ್ದು
7. ಸರಿಯಾದ ಮಾರ್ಗವನ್ನು ಅನುಸರಿಸಿ ಮತ್ತು ಸಾಧ್ಯವಾದಷ್ಟು ಹತ್ತಿರವಾಗಿರಿ, ಮತ್ತು ನಿಮ್ಮಲ್ಲಿ ಯಾರೂ ತಮ್ಮ ಕರ್ಮಗಳಿಂದಾಗಿ ಮೋಕ್ಷ ಪಡೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ." ಅವರು (ಅನುಯಾಯಿಗಳು) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನೀವು ಕೂಡ ಪಡೆಯುವುದಿಲ್ಲವೇ?" ಅವರು ಉತ್ತರಿಸಿದರು: "ನಾನೂ ಕೂಡ ಪಡೆಯುವುದಿಲ್ಲ, ಅಲ್ಲಾಹು ತನ್ನ ಕರುಣೆ ಮತ್ತು ಅನುಗ್ರಹದಿಂದ ನನ್ನನ್ನು ಆವರಿಸಿಕೊಳ್ಳುವ ಹೊರತು
عربي ಆಂಗ್ಲ ಉರ್ದು
8. ಓ ಅಲ್ಲಾಹ್! ನಿನ್ನ ಕೋಪದಿಂದ ನಿನ್ನ ತೃಪ್ತಿಯಲ್ಲಿ ಮತ್ತು ನಿನ್ನ ಶಿಕ್ಷೆಯಿಂದ ನಿನ್ನ ಕ್ಷೇಮದಲ್ಲಿ ನಾನು ರಕ್ಷಣೆಯನ್ನು ಬೇಡುತ್ತೇನೆ. ನಿನಗೆ ವಿರುದ್ಧವಾಗಿ ನಿನ್ನಲ್ಲೇ ನಾನು ಆಶ್ರಯವನ್ನು ಬೇಡುತ್ತೇನೆ. ನೀನು ನಿನ್ನನ್ನು ಪ್ರಶಂಸಿಸಿದಂತೆ ನನಗೆ ನಿನ್ನ ಪ್ರಶಂಸೆಯನ್ನು ಎಣಿಸಲು ಸಾಧ್ಯವಿಲ್ಲ
عربي ಆಂಗ್ಲ ಉರ್ದು
9. ನಾನು ನಿಮಗೆ ಸ್ವರ್ಗದ ಜನರ ಬಗ್ಗೆ ತಿಳಿಸಲೇ? ದುರ್ಬಲ ಎಂದು ಪರಿಗಣಿಸಲ್ಪಡುವ ಎಲ್ಲಾ ವಿನಮ್ರ ವ್ಯಕ್ತಿಗಳು. ಅವರು (ಏನಾದರೂ ಸಂಭವಿಸಬೇಕೆಂದು) ಅಲ್ಲಾಹನ ಮೇಲೆ ಆಣೆ ಮಾಡಿದರೆ, ಅಲ್ಲಾಹು ಅದನ್ನು ನೆರವೇರಿಸುತ್ತಾನೆ. ನಾನು ನಿಮಗೆ ನರಕದ ಜನರ ಬಗ್ಗೆ ತಿಳಿಸಲೇ? ಎಲ್ಲಾ ಕಠೋರ, ದುರಾಸೆ ಮತ್ತು ಅಹಂಕಾರಿಗಳಾದ ವ್ಯಕ್ತಿಗಳು
عربي ಆಂಗ್ಲ ಉರ್ದು
10. ನಾನು ಒಂದು ಮಾತನ್ನು ಬಲ್ಲೆ. ಅವನೇನಾದರೂ ಅದನ್ನು ಹೇಳಿದರೆ, ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ. ಅವನು ‘ಅಊದು ಬಿಲ್ಲಾಹಿ ಮಿನಶ್ಶೈತಾನ್’ ಎಂದು ಹೇಳಿದರೆ ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ
عربي ಆಂಗ್ಲ ಉರ್ದು
11. ಒಳ್ಳೆಯ ಕನಸುಗಳು ಅಲ್ಲಾಹನಿಂದ ಬರುತ್ತವೆ, ಮತ್ತು ಕೆಟ್ಟ ಕನಸುಗಳು ಶೈತಾನನಿಂದ ಬರುತ್ತವೆ. ನಿಮ್ಮಲ್ಲಿ ಯಾರಾದರೂ ತಾವು ಇಷ್ಟಪಡದ ಕೆಟ್ಟ ಕನಸನ್ನು ಕಂಡರೆ, ಅವರು ತಮ್ಮ ಎಡಕ್ಕೆ ಉಗುಳಲಿ ಮತ್ತು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ. ಏಕೆಂದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ
عربي ಆಂಗ್ಲ ಉರ್ದು
12. ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಮೋಕ್ಷ ಎಂದರೇನು?" ಅವರು ಉತ್ತರಿಸಿದರು: "ನಿಮ್ಮ ನಾಲಿಗೆಯನ್ನು ನಿಯಂತ್ರಿಸಿ, ನಿಮ್ಮ ಮನೆ ನಿಮಗೆ ವಿಶಾಲವಾಗಿರಲಿ, ಮತ್ತು ನಿಮ್ಮ ಪಾಪಗಳಿಗಾಗಿ ಅತ್ತಿರಿ
عربي ಆಂಗ್ಲ ಉರ್ದು