ಹದೀಸ್ಗಳ ಪಟ್ಟಿ
80
1. ನಿಶ್ಚಯವಾಗಿಯೂ ನಿಮ್ಮ ತಂದೆಯರ ಮೇಲೆ ಆಣೆ ಮಾಡುವುದನ್ನು ಸರ್ವಶಕ್ತನಾದ ಅಲ್ಲಾಹು ನಿಮಗೆ ವಿರೋಧಿಸುತ್ತಾನೆ
2. ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ
3. ಇವರಿಬ್ಬರಿಗೂ ಶಿಕ್ಷೆ ನೀಡಲಾಗುತ್ತಿದೆ. ಇವರಿಗೆ ಶಿಕ್ಷೆ ನೀಡಲಾಗುತ್ತಿರುವುದು ಯಾವುದೋ ದೊಡ್ಡ ತಪ್ಪಿಗಲ್ಲ. ಇವರಲ್ಲೊಬ್ಬನು ಮೂತ್ರದ ಮಾಲಿನ್ಯದಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಿರಲಿಲ್ಲ. ಇನ್ನೊಬ್ಬನು ಚಾಡಿ ಮಾತುಗಳೊಂದಿಗೆ ನಡೆದಾಡುತ್ತಿದ್ದ - 4 ملاحظة
4. ನೀವು ಅಝಾನ್ ಕೇಳಿದರೆ ಮುಅಝ್ಝಿನ್ ಹೇಳುವಂತೆಯೇ ಹೇಳಿರಿ
5. ಅವುಗಳನ್ನು ಬಿಟ್ಟುಬಿಡಿ. ನಾವು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ
6. ಅದು ರಕ್ತನಾಳವಾಗಿದೆ. ಆದರೆ ಸಾಮಾನ್ಯವಾಗಿ ನಿಮಗೆ ಮುಟ್ಟಾಗುವ ಅವಧಿಯಲ್ಲಿ ನಮಾಝ್ ತೊರೆಯಿರಿ, ನಂತರ ಗುಸ್ಲ್ (ಕಡ್ಡಾಯ ಸ್ನಾನ) ನಿರ್ವಹಿಸಿ ನಮಾಝ್ ಮುಂದುವರಿಸಿ
7. ನಿಮ್ಮಲ್ಲೊಬ್ಬರು ವುದೂ (ಅಂಗಸ್ನಾನ) ಮಾಡುವಾಗ, ಮೂಗಿಗೆ ನೀರನ್ನು ಎಳೆದು ಹೊರಬಿಡಲಿ. ನಿಮ್ಮಲ್ಲೊಬ್ಬನು ಇಸ್ತಿಜ್ಮಾರ್ (ಕಲ್ಲು ಮುಂತಾದ ವಸ್ತುಗಳಿಂದ ಶುಚಿ) ಮಾಡುವಾಗ ಬೆಸ ಸಂಖ್ಯೆಯಲ್ಲಿ ಮಾಡಲಿ
8. ಒಬ್ಬ ವ್ಯಕ್ತಿ ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ಹೇಳುತ್ತಾನೆ: ನಿಮಗೆ ಇಲ್ಲಿ ರಾತ್ರಿವಾಸವಿಲ್ಲ ಮತ್ತು ರಾತ್ರಿಭೋಜನವಿಲ್ಲ - 2 ملاحظة
9. ನಿಶ್ಚಯವಾಗಿಯೂ ಇಹಲೋಕವು ಮಧುರವಾಗಿದೆ ಮತ್ತು ಹಸಿರಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ಅದರಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿ, ನೀವು ಹೇಗೆ ವರ್ತಿಸುತ್ತೀರಿ ಎಂದು ನೋಡುತ್ತಾನೆ. ಆದ್ದರಿಂದ ನೀವು ಇಹಲೋಕವನ್ನು ಭಯಪಡಿರಿ ಮತ್ತು ಸ್ತ್ರೀಯರನ್ನು ಭಯಪಡಿರಿ - 2 ملاحظة
10. ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ರಕಅತ್ಗಳನ್ನು ಜ್ಞಾಪಕದಲ್ಲಿಟ್ಟಿದ್ದೇನೆ
11. ಇಮಾಮರು ತಲೆ ಎತ್ತುವುದಕ್ಕಿಂತ ಮೊದಲು ತಲೆ ಎತ್ತುವವರು, ಅಲ್ಲಾಹು ಅವರ ತಲೆಯನ್ನು ಕತ್ತೆಯ ತಲೆಯಾಗಿ, ಅಥವಾ ಅವರ ರೂಪವನ್ನು ಕತ್ತೆಯ ರೂಪವಾಗಿ ಮಾರ್ಪಡಿಸುವನು ಎಂದು ಭಯಪಡುವುದಿಲ್ಲವೇ?
12. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಅಂಗೈಯನ್ನು ಅವರ ಎರಡು ಅಂಗೈಗಳ ಮಧ್ಯದಲ್ಲಿಟ್ಟು, ಕುರ್ಆನಿನ ಒಂದು ಅಧ್ಯಾಯವನ್ನು ಕಲಿಸಿಕೊಡುವಂತೆ ನನಗೆ ತಶಹ್ಹುದ್ ಕಲಿಸಿಕೊಟ್ಟರು
13. ಓ ಅಲ್ಲಾಹ್! ನಾನು ನಿನ್ನಲ್ಲಿ ಸಮಾಧಿಯ ಶಿಕ್ಷೆಯಿಂದ, ನರಕ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ - 2 ملاحظة
14. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ,ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಖುಬುಸಿ ವಲ್ ಖಬಾಇಸ್ (ಓ ಅಲ್ಲಾಹ್, ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಿದ್ದರು
15. ಆದ್ಯತೆಗಳು ಮತ್ತು ನೀವು ಒಪ್ಪಿಕೊಳ್ಳದಂತಹ ವಿಷಯಗಳು ಇರುತ್ತವೆ." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಾವು ನಮಗೆ ಏನು ಆದೇಶಿಸುತ್ತೀರಿ?" ಅವರು ಉತ್ತರಿಸಿದರು: "ಅವರ ಹಕ್ಕುಗಳನ್ನು ನೆರವೇರಿಸಿರಿ ಮತ್ತು ನಿಮ್ಮ ಹಕ್ಕನ್ನು ಅಲ್ಲಾಹನಲ್ಲಿ ಬೇಡಿಕೊಳ್ಳಿ
16. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಾಗಿ (ಜನಾಬತ್) ಸ್ನಾನ ಮಾಡುವಾಗ, ಮೊದಲು ಕೈಗಳನ್ನು ತೊಳೆದು, ನಂತರ ನಮಾಝ್ಗಾಗಿ ವುದೂ (ಅಂಗಸ್ನಾನ) ಮಾಡುವಂತೆ ವುದೂ ಮಾಡುತ್ತಿದ್ದರು. ನಂತರ ಅವರು ಸ್ನಾನ ಮಾಡುತ್ತಿದ್ದರು
17. ಅಲ್ಲಾಹನ ಹದ್ದುಗಳನ್ನು ಪಾಲಿಸುವವರ ಮತ್ತು ಅವುಗಳನ್ನು ಉಲ್ಲಂಘಿಸುವವರ ಉದಾಹರಣೆಯು ಚೀಟಿ ಹಾಕಿ ಹಡಗಿನಲ್ಲಿ ಪ್ರಯಾಣಿಸಿದ ಕೆಲವು ಜನರಂತೆ. ಅವರಲ್ಲಿ ಕೆಲವರು ಹಡಗಿನ ಮೇಲ್ಭಾಗದಲ್ಲಿ ಮತ್ತು ಕೆಲವರು ಕೆಳಭಾಗದಲ್ಲಿ ಆಸನವನ್ನು ಪಡೆದರು - 8 ملاحظة
18. ನಾನು ಅತ್ಯಧಿಕ ಮದಿ (ಸ್ಖಲನಪೂರ್ವ ದ್ರವ) ಸ್ರವಿಸುವ ವ್ಯಕ್ತಿಯಾಗಿದ್ದೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಗಳಿಗಿರುವ ಸ್ಥಾನಮಾನದಿಂದ ನಾನು ಅವರಲ್ಲಿ ಅದರ ಬಗ್ಗೆ ಕೇಳಲು ಸಂಕೋಚಪಡುತ್ತಿದ್ದೆ. ಆದ್ದರಿಂದ, ನಾನು ಮಿಕ್ದಾದ್ ಬಿನ್ ಅಸ್ವದ್ ರಿಗೆ ಆಜ್ಞಾಪಿಸಿದೆ. ಅವರು (ಅದರ ಬಗ್ಗೆ) ಕೇಳಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: ಅವರು ತಮ್ಮ ಜನನಾಂಗವನ್ನು ತೊಳೆದು ವುದೂ (ಅಂಗಸ್ನಾನ) ನಿರ್ವಹಿಸಲಿ
19. ಅಲ್ಲಾಹು ಇಚ್ಛಿಸಿದ್ದು ಮತ್ತು ಇಂತಿಂತಹವನು ಇಚ್ಛಿಸಿದ್ದು ಎಂದು ಹೇಳಬೇಡಿ. ಬದಲಿಗೆ, ಅಲ್ಲಾಹು ಇಚ್ಛಿಸಿದ್ದು ನಂತರ ಇಂತಿಂತಹವನು ಇಚ್ಛಿಸಿದ್ದು ಎಂದು ಹೇಳಿರಿ
20. ನೀವು ಸತ್ಯವಿಶ್ವಾಸಿಗಳಾಗುವ ತನಕ ನೀವು ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಮತ್ತು ನೀವು ಪರಸ್ಪರ ಪ್ರೀತಿಸುವ ತನಕ ನೀವು ಸತ್ಯವಿಶ್ವಾಸಿಗಳಾಗುವುದಿಲ್ಲ. ನೀವು ಪರಸ್ಪರ ಪ್ರೀತಿಸುವಂತೆ ಮಾಡುವ ಒಂದು ವಿಷಯವನ್ನು ನಾನು ನಿಮಗೆ ತಿಳಿಸಲೇ? ನಿಮ್ಮ ಮಧ್ಯೆ ಸಲಾಮ್ ಹೇಳುವುದನ್ನು ವ್ಯಾಪಕಗೊಳಿಸಿ - 2 ملاحظة
21. ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು - 2 ملاحظة
22. ಒಮ್ಮೆ ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಎಡಗೈಯಿಂದ ಆಹಾರ ಸೇವಿಸಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಗೈಯಿಂದ ಸೇವಿಸಿರಿ." ಆ ವ್ಯಕ್ತಿ ಉತ್ತರಿಸಿದನು: "ನನಗೆ ಅದು ಸಾಧ್ಯವಿಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗೆ ಅದು ಸಾಧ್ಯವಾಗದಿರಲಿ
23. ಸನ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಅದು ಅವರ ಪ್ರತಿಫಲಗಳಲ್ಲಿ ಏನನ್ನೂ ಕಡಿಮೆಗೊಳಿಸುವುದಿಲ್ಲ
24. ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್." (ಅವರು ಇದನ್ನು ಮೂರು ಬಾರಿ ಹೇಳಿದರು). "ಆದರೆ ನಮ್ಮಲ್ಲಿ (ಶಕುನ ನಂಬದವರು) ಯಾರೂ ಇಲ್ಲ. ಆದರೆ ಅಲ್ಲಾಹು ಅದನ್ನು ತವಕ್ಕುಲ್ (ಭರವಸೆ) ನಿಂದ ನಿವಾರಿಸುತ್ತಾನೆ
25. ನಾವು ಹೇಳಿದೆವು: "ನೀವು ನಮ್ಮ ಯಜಮಾನರು." ಆಗ ಅವರು ಹೇಳಿದರು: "ಯಜಮಾನ ಅಲ್ಲಾಹನಾಗಿದ್ದಾನೆ." ನಾವು ಹೇಳಿದೆವು: "ನೀವು ಶ್ರೇಷ್ಠತೆಯಲ್ಲಿ ನಮ್ಮ ಪೈಕಿ ಅತ್ಯುತ್ತಮರು ಮತ್ತು ನೀಳದಲ್ಲಿ (ಗೌರವದಲ್ಲಿ) ನಮ್ಮ ಪೈಕಿ ಅತಿಶ್ರೇಷ್ಠರು." ಅವರು ಹೇಳಿದರು: "ನಿಮಗೆ ಹೇಳಲಿರುವುದನ್ನು ಅಥವಾ ನಿಮಗೆ ಹೇಳಲಿರುವ ಕೆಲವನ್ನು ಹೇಳಿರಿ. ಆದರೆ ಶೈತಾನನು ನಿಮ್ಮನ್ನು ಎಳೆದೊಯ್ಯಲು ಬಿಡಬೇಡಿ
26. ಓ ಜನರೇ! ಧರ್ಮದಲ್ಲಿ ಮಿತಿಮೀರುವುದರ ಬಗ್ಗೆ ಹುಷಾರಾಗಿರಿ! ಏಕೆಂದರೆ ನಿಮಗಿಂತ ಮೊದಲಿನವರನ್ನು ನಾಶ ಮಾಡಿದ್ದು ಧರ್ಮದಲ್ಲಿರುವ ಅತಿರೇಕವಾಗಿದೆ
27. ಓ ದೊಡ್ಡಪ್ಪಾ! ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿರಿ. ಅಲ್ಲಾಹನ ಬಳಿ ಅದರ ಮೂಲಕ ನಾನು ನಿಮಗಾಗಿ ವಾದಿಸುತ್ತೇನೆ
28. ಅದ್ವಾ (ಅಂಟುರೋಗ) ಇಲ್ಲ ಮತ್ತು ತಿಯರ (ಅಪಶಕುನ) ಇಲ್ಲ. ಆದರೆ ಫಅಲ್ (ಶುಭಶಕುನ) ನನಗಿಷ್ಟವಾಗಿದೆ." ಅವರೊಡನೆ ಕೇಳಲಾಯಿತು: "ಶುಭಶಕುನ ಎಂದರೇನು?" ಅವರು ಉತ್ತರಿಸಿದರು: "ಒಳ್ಳೆಯ ಮಾತು
29. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್ಗಳ ಬಗ್ಗೆ ಹೇಳಿದರು: "ಸತ್ಯವಿಶ್ವಾಸಿಯ ಹೊರತು ಇನ್ನಾರೂ ಅವರನ್ನು ಪ್ರೀತಿಸುವುದಿಲ್ಲ ಮತ್ತು ಕಪಟವಿಶ್ವಾಸಿಯ ಹೊರತು ಇನ್ನಾರೂ ಅವರನ್ನು ದ್ವೇಷಿಸುವುದಿಲ್ಲ. ಯಾರು ಅವರನ್ನು ಪ್ರೀತಿಸುತ್ತಾನೋ ಅವನನ್ನು ಅಲ್ಲಾಹು ಪ್ರೀತಿಸುತ್ತಾನೆ ಮತ್ತು ಯಾರು ಅವರನ್ನು ದ್ವೇಷಿಸುತ್ತಾನೋ ಅವನನ್ನು ಅಲ್ಲಾಹು ದ್ವೇಷಿಸುತ್ತಾನೆ
30. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ ತೋರಿಸಿದರು
31. ನೀನು ನಿನ್ನ ಕೈಗಳಿಂದ ಹೀಗೆ ಮಾಡಿದರೆ ನಿನಗೆ ಸಾಕಾಗುತ್ತಿತ್ತು." ನಂತರ ಅವರು ತಮ್ಮ ಕೈಗಳಿಂದ ಒಂದು ಬಾರಿ ನೆಲಕ್ಕೆ ಬಡಿದರು. ನಂತರ ಎಡಗೈಯಿಂದ ಬಲಗೈಯನ್ನು, ಎರಡು ಅಂಗೈಗಳ ಹೊರಭಾಗವನ್ನು ಮತ್ತು ಮುಖವನ್ನು ಸವರಿದರು
32. ನಾನು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದೇ ಪಾತ್ರೆಯಿಂದ ಸ್ನಾನ ಮಾಡುತ್ತಿದ್ದೆವು. ಆಗ ನಾವಿಬ್ಬರೂ ದೊಡ್ಡ ಅಶುದ್ಧಿಯಲ್ಲಿದ್ದೆವು. ನಾನು ಮುಟ್ಟಿನಲ್ಲಿರುವ ಸಂದರ್ಭದಲ್ಲಿ ಅವರು ನನಗೆ ಸೊಂಟದ ಕೆಳಗಿನ ಬಟ್ಟೆ ಧರಿಸಲು ಆದೇಶಿಸುತ್ತಿದ್ದರು ಮತ್ತು ನನ್ನನ್ನು ಮುದ್ದಾಡುತ್ತಿದ್ದರು
33. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುತ್ತೇನೆ, ನಮಾಝ್ ಸಂಸ್ಥಾಪಿಸುತ್ತೇನೆ, ಝಕಾತ್ ನೀಡುತ್ತೇನೆ, ಕೇಳುತ್ತೇನೆ ಮತ್ತು ಅನುಸರಿಸುತ್ತೇನೆ ಹಾಗೂ ಎಲ್ಲಾ ಮುಸ್ಲಿಮರ ಹಿತಚಿಂತಕನಾಗಿರುತ್ತೇನೆ ಎಂದು ನಾನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರತಿಜ್ಞೆ ಮಾಡಿದೆ
34. ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಭಯಪಡಿರಿ, ನಿಮ್ಮ ಐದು ವೇಳೆಯ ನಮಾಝ್ಗಳನ್ನು ನಿರ್ವಹಿಸಿರಿ, ನಿಮ್ಮ (ರಮದಾನ್) ತಿಂಗಳಲ್ಲಿ ಉಪವಾಸ ಆಚರಿಸಿರಿ, ನಿಮ್ಮ ಸಂಪತ್ತಿನ ಝಕಾತನ್ನು ನೀಡಿರಿ ಮತ್ತು ನಿಮ್ಮ ಆಡಳಿತಗಾರರನ್ನು ಅನುಸರಿಸಿರಿ. ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಸ್ವರ್ಗವನ್ನು ಪ್ರವೇಶಿಸುವಿರಿ
35. ನಾನು ಆ ಕಾರ್ಯವನ್ನು ಮಾಡಿದರೆ ಸ್ವರ್ಗವನ್ನು ಪ್ರವೇಶಿಸುವಂತಹ ಒಂದು ಕಾರ್ಯದ ಬಗ್ಗೆ ನನಗೆ ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನನ್ನು ಆರಾಧಿಸು, ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡಬೇಡ, ಕಡ್ಡಾಯ ನಮಾಝನ್ನು ಸಂಸ್ಥಾಪಿಸು, ಕಡ್ಡಾಯ ಝಕಾತನ್ನು ನೀಡು, ರಮದಾನ್ ತಿಂಗಳಲ್ಲಿ ಉಪವಾಸವನ್ನು ಆಚರಿಸು - 2 ملاحظة
36. ನನ್ನ ಸಮುದಾಯದ ಎಲ್ಲರನ್ನೂ ಕ್ಷಮಿಸಲಾಗುವುದು, ಬಹಿರಂಗವಾಗಿ ಪಾಪ ಮಾಡುವವರ ಹೊರತು - 2 ملاحظة
37. ಯಾವುದರ ಬಗ್ಗೆ ನಾವು ನಿಮಗೆ ನಿಷ್ಠೆಯ ಪ್ರತಿಜ್ಞೆ ಮಾಡಬೇಕು?" ಅವರು ಉತ್ತರಿಸಿದರು: "ನೀವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೀರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡುವುದಿಲ್ಲ, ನೀವು ಐದು ವೇಳೆಯ ನಮಾಝ್ಗಳನ್ನು ನಿರ್ವಹಿಸುತ್ತೀರಿ, ನೀವು ಅನುಸರಿಸುತ್ತೀರಿ, — ಮತ್ತು ಅವರು ರಹಸ್ಯವಾಗಿ ಹೇಳಿದರು — ಜನರಲ್ಲಿ ಏನನ್ನೂ ಬೇಡುವುದಿಲ್ಲ ಎಂದು ನಿಷ್ಠೆಯ ಪ್ರತಿಜ್ಞೆ ಮಾಡಬೇಕು
38. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವ, ನಮಾಝ್ ಸಂಸ್ಥಾಪಿಸುವ ಮತ್ತು ಝಕಾತ್ ನೀಡುವ ತನಕ ಜನರೊಂದಿಗೆ ಹೋರಾಡಲು ನನಗೆ ಆಜ್ಞಾಪಿಸಲಾಗಿದೆ
39. ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು ಮತ್ತು ಸಣ್ಣ ಗುಂಪಿನ ಜನರು ದೊಡ್ಡ ಗುಂಪಿನ ಜನರಿಗೆ ಸಲಾಂ ಹೇಳಬೇಕು
40. ಒಬ್ಬ ವ್ಯಕ್ತಿ ಸಾಮೂಹಿಕವಾಗಿ (ಜಮಾಅತ್ನೊಂದಿಗೆ) ನಮಾಝ್ ನಿರ್ವಹಿಸುವುದು, ಆತ ತನ್ನ ಮನೆಯಲ್ಲಿ ಅಥವಾ ತನ್ನ ಮಾರುಕಟ್ಟೆಯಲ್ಲಿ ನಿರ್ವಹಿಸುವ ನಮಾಝ್ಗಿಂತ ಇಪ್ಪತ್ತಕ್ಕಿಂತಲೂ ಹೆಚ್ಚು ಪದವಿಗಳನ್ನು ಹೊಂದಿದೆ
41. ಪುನರುತ್ಥಾನ ದಿನದಂದು ದಾಸನೊಂದಿಗೆ, ಅವನ ಆಯುಷ್ಯದ ಬಗ್ಗೆ—ಅವನು ಅದನ್ನು ಹೇಗೆ ವ್ಯಯಿಸಿದನೆಂದು, ಅವನ ಜ್ಞಾನದ ಬಗ್ಗೆ—ಅವನು ಅದರ ಪ್ರಕಾರ ಏನು ಕಾರ್ಯವೆಸಗಿದನೆಂದು, ಅವನ ಸಂಪತ್ತಿನ ಬಗ್ಗೆ—ಅವನು ಅದನ್ನು ಎಲ್ಲಿಂದ ಸಂಪಾದಿಸಿದನು ಮತ್ತು ಯಾವುದಕ್ಕೆ ಖರ್ಚು ಮಾಡಿದನೆಂದು, ಮತ್ತು ಅವನ ದೇಹದ ಬಗ್ಗೆ—ಅವನು ಅದನ್ನು ಯಾವುದಕ್ಕಾಗಿ ವಿನಿಯೋಗಿಸಿದನೆಂದು ಕೇಳುವ ತನಕ ಅವನ ಎರಡು ಪಾದಗಳು ಅಲುಗಾಡುವುದಿಲ್ಲ
42. ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮಲ್ಲೊಬ್ಬನ ಮನೆಯ ಬಾಗಿಲಿನ ಬಳಿ ಒಂದು ನದಿ ಹರಿಯುತ್ತಿದ್ದು, ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುತ್ತಿದ್ದರೆ, ಅವನಲ್ಲಿ ಏನಾದರೂ ಕೊಳೆ ಉಳಿಯಬಹುದೇ? - 2 ملاحظة
43. ಪರಸ್ಪರ ಪ್ರೀತಿ, ಕರುಣೆ ಮತ್ತು ಸಹಾನುಭೂತಿ ತೋರುವುದರಲ್ಲಿ ಸತ್ಯವಿಶ್ವಾಸಿಗಳ ಉದಾಹರಣೆಯು ಒಂದು ದೇಹದಂತೆ. ಅದರ ಒಂದು ಅಂಗವು ನೋವಿನಿಂದ ಬಳಲುವಾಗ, ದೇಹದ ಉಳಿದೆಲ್ಲಾ ಭಾಗಗಳು ನಿದ್ರಾಹೀನತೆ ಮತ್ತು ಜ್ವರದ ಮೂಲಕ ಅದಕ್ಕೆ ಸ್ಪಂದಿಸುತ್ತವೆ - 8 ملاحظة
44. ಮಕ್ಕಳಿಗೆ ಏಳು ವರ್ಷ ಪ್ರಾಯವಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ, ಹತ್ತು ವರ್ಷ ಪ್ರಾಯವಾದಾಗ ಅದಕ್ಕಾಗಿ ಹೊಡೆಯಿರಿ ಮತ್ತು ಮಲಗುವ ಸ್ಥಳದಲ್ಲಿ ಅವರನ್ನು ಬೇರ್ಪಡಿಸಿರಿ - 2 ملاحظة
45. ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯ ತಕ್ಕಡಿಯಲ್ಲಿ ಉತ್ತಮ ಗುಣಕ್ಕಿಂತಲೂ ಹೆಚ್ಚು ಭಾರವಿರುವ ಯಾವುದೇ ವಸ್ತುವಿಲ್ಲ. ಅಶ್ಲೀಲ ಮತ್ತು ಅಸಭ್ಯವಾಗಿ ಮಾತನಾಡುವವರನ್ನು ಅಲ್ಲಾಹು ದ್ವೇಷಿಸುತ್ತಾನೆ - 2 ملاحظة
46. ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಬಳಿಗೆ ಬಂದಾಗ ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ನಿಮಗೆ ಹೇಗೆ ಸಲಾಂ ಹೇಳುವುದೆಂದು ನಮಗೆ ತಿಳಿದಿದೆ. ಆದರೆ ನಾವು ನಿಮ್ಮ ಮೇಲೆ ಸಲಾತ್ ಹೇಳುವುದು ಹೇಗೆ? - 2 ملاحظة
47. ಗ್ರಂಥದ ಆರಂಭವನ್ನು (ಸೂರ ಫಾತಿಹ) ಪಠಿಸದವನಿಗೆ ನಮಾಝ್ ಇಲ್ಲ - 6 ملاحظة
48. ಬಲಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮನು ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನಾಗಿದ್ದಾನೆ. ಎಲ್ಲರಲ್ಲೂ ಒಳಿತಿದೆ
49. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆ ಹೀಗಿತ್ತು: "ಓ ಅಲ್ಲಾಹ್! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು
50. ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆ - 4 ملاحظة
51. ದಬ್ಬಾಳಿಕೆಯ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ, ನಿಶ್ಚಯವಾಗಿಯೂ ದಬ್ಬಾಳಿಕೆಯು ಪುನರುತ್ಥಾನ ದಿನದಂದು ಅಂಧಕಾರಗಳಾಗಿರುತ್ತವೆ. ಜಿಪುಣತನದ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ, ನಿಶ್ಚಯವಾಗಿಯೂ ಜಿಪುಣತನವು ನಿಮಗಿಂತ ಮೊದಲಿನವರನ್ನು ನಾಶ ಮಾಡಿದೆ - 2 ملاحظة
52. ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:"ಇಸ್ಲಾಂ ಧರ್ಮದಲ್ಲಿ ಅತಿಶ್ರೇಷ್ಠವಾದುದು ಯಾವುದು?" ಅವರು ಉತ್ತರಿಸಿದರು: "ಜನರಿಗೆ ಆಹಾರ ನೀಡುವುದು ಮತ್ತು ಪರಿಚಯವಿರುವವರಿಗೂ, ಪರಿಚಯವಿಲ್ಲದವರಿಗೂ ಸಲಾಂ ಹೇಳುವುದು
53. “ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು
54. ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಿಶ್ಚಯವಾಗಿಯೂ ನೀವು ನಿಮಗಿಂತ ಮೊದಲಿನವರ ಚರ್ಯೆಗಳನ್ನು ಹಿಂಬಾಲಿಸುವಿರಿ
55. ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರೊಡನೆ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ಅವರು ಹೇಳಿದರು: "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಏನು ನೀವು ನನ್ನನ್ನು ಅಲ್ಲಾಹನಿಗೆ ಸಮಾನಗೊಳಿಸಿದ್ದೀರಾ? ಅಲ್ಲಾಹು ಮಾತ್ರ ಇಚ್ಛಿಸಿದ್ದು ಎಂದು ಹೇಳಿರಿ
56. ಅಲ್ಲಾಹನ ಸೃಷ್ಟಿಯನ್ನು ಅನುಕರಿಸುವವರು ಯಾರೋ ಅವರು ಪುನರುತ್ಥಾನ ದಿನದಂದು ಅಲ್ಲಾಹನಿಂದ ಕಠೋರವಾಗಿ ಶಿಕ್ಷಿಸಲ್ಪಡುವರು
57. ಸಂಜೆಯಾಗುವಾಗ ಮತ್ತು ಬೆಳಗಾಗುವಾಗ "ಕುಲ್ ಹುವಲ್ಲಾಹು ಅಹದ್" (ಸೂರ ಇಖ್ಲಾಸ್) ಮತ್ತು ರಕ್ಷೆ ಬೇಡುವ ಎರಡು ಸೂರಗಳನ್ನು (ಸೂರ ಫಲಕ್ ಮತ್ತು ಸೂರ ನಾಸ್) ಮೂರು ಬಾರಿ ಪಠಿಸು. ಅದು ನಿನಗೆ ಎಲ್ಲದ್ದಕ್ಕೂ ಸಾಕಾಗುತ್ತದೆ
58. “ಹೇಳು: ‘ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಅಲ್ಲಾಹು ಅತ್ಯಂತ ಮಹಾನನು ಮತ್ತು ಸರ್ವೋನ್ನತನು, ಸರ್ವಸ್ತುತಿಗಳು ಹೇರಳವಾಗಿ ಅಲ್ಲಾಹನಿಗೆ, ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಪರಿಶುದ್ಧನಾಗಿದ್ದಾನೆ. ಪ್ರಚಂಡ ಶಕ್ತಿಶಾಲಿ ಮತ್ತು ಪರಮ ಜ್ಞಾನಿಯಾದ ಅಲ್ಲಾಹನ ಹೊರತು ಬೇರೆ ಶಕ್ತಿ ಅಥವಾ ಸಾಮರ್ಥ್ಯವಿಲ್ಲ.’” - 6 ملاحظة
59. ಒಬ್ಬ ಮುಸಲ್ಮಾನನು ಕಡ್ಡಾಯ ನಮಾಝ್ನ ಸಮಯವಾದಾಗ ಸರಿಯಾಗಿ ವುದೂ ನಿರ್ವಹಿಸಿ, ಪೂರ್ಣ ಭಕ್ತಿಯಿಂದ ಮತ್ತು ರುಕೂ (ಬಾಗುವುದು) ಅನ್ನು ಸರಿಯಾಗಿ ಪೂರ್ಣಗೊಳಿಸುತ್ತಾ ನಮಾಝ್ ನಿರ್ವಹಿಸಿದರೆ, ಅದು ಅವನ ಗತ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ—ಅವು ಮಹಾಪಾಪಗಳಲ್ಲದಿದ್ದರೆ. ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ.";
60. ಕುರ್ಆನ್ ಪಠಿಸುವ ಸತ್ಯವಿಶ್ವಾಸಿಯನ್ನು ಮಾದಳ ಹಣ್ಣಿಗೆ ಹೋಲಿಸಬಹುದು. ಅದರ ಸುವಾಸನೆ ಆಹ್ಲಾದಕರವಾಗಿದೆ ಮತ್ತು ರುಚಿ ಉತ್ತಮವಾಗಿದೆ. ಕುರ್ಆನ್ ಪಠಿಸದ ಸತ್ಯವಿಶ್ವಾಸಿಯನ್ನು ಖರ್ಜೂರಕ್ಕೆ ಹೋಲಿಸಬಹುದು. ಅದಕ್ಕೆ ಸುವಾಸನೆಯಿಲ್ಲ, ಆದರೆ ಅದರ ರುಚಿ ಸಿಹಿಯಾಗಿದೆ - 8 ملاحظة
61. ಕಡ್ಡಾಯ ನಮಾಝ್ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್ಗಳು, ಮೂವತ್ತಮೂರು ತಹ್ಮೀದ್ಗಳು ಮತ್ತು ಮೂವತ್ತನಾಲ್ಕು ತಕ್ಬೀರ್ಗಳು
62. ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲಿ, ಸಂದೇಶವಾಹಕರಾಗಿ ಮುಹಮ್ಮದ್ರಲ್ಲಿ ಮತ್ತು ಧರ್ಮವಾಗಿ ಇಸ್ಲಾಂನಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳುತ್ತಾನೋ, ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ
63. ಆದಮರ ಪುತ್ರ ನನ್ನನ್ನು ನಿಷೇಧಿಸಿದ್ದಾನೆ. ಅವನಿಗೆ ಹಾಗೆ ಮಾಡುವ ಯಾವುದೇ ಹಕ್ಕಿಲ್ಲ. ಅವನು ನನ್ನನ್ನು ನಿಂದಿಸಿದ್ದಾನೆ. ಅವನಿಗೆ ಹಾಗೆ ಮಾಡುವ ಯಾವುದೇ ಹಕ್ಕಿಲ್ಲ
64. ನನ್ನ ಮಿತ್ರರ ಮೇಲೆ ದ್ವೇಷ ತೋರುವವನು ಯಾರೋ ಅವನ ವಿರುದ್ಧ ನಾನು ಯುದ್ಧವನ್ನು ಘೋಷಿಸಿದ್ದೇನೆ. ನಾನು ನನ್ನ ದಾಸನಿಗೆ ಕಡ್ಡಾಯಗೊಳಿಸಿದ ಕರ್ಮಗಳ ಮೂಲಕವಲ್ಲದೆ ನಾನು ಇಷ್ಟಪಡುವ ಇತರ ಯಾವುದರ ಮೂಲಕವೂ ಅವನು ನನಗೆ ಹತ್ತಿರವಾಗುವುದಿಲ್ಲ - 2 ملاحظة
65. ತಾಯಿತ ಕಟ್ಟಿದವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು
66. ಒಬ್ಬ ವ್ಯಕ್ತಿ ವುದೂ ನಿರ್ವಹಿಸಿದರು ಮತ್ತು ತನ್ನ ಪಾದದಲ್ಲಿ ಉಗುರಿನ ಗಾತ್ರದ ಸ್ಥಳವನ್ನು ಬಿಟ್ಟುಬಿಟ್ಟರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ನೋಡಿ ಹೇಳಿದರು: "ಹಿಂದಿರುಗಿ ಹೋಗು ಮತ್ತು ಅತ್ಯುತ್ತಮವಾಗಿ ವುದೂ ನಿರ್ವಹಿಸು." ಆ ವ್ಯಕ್ತಿ ಹಿಂದಿರುಗಿ ಹೋಗಿ, ನಂತರ ನಮಾಝ್ ನಿರ್ವಹಿಸಿದರು
67. ಎರಡು ವಿಧಗಳ ಜನರು ನರಕವಾಸಿಗಳಾಗಿದ್ದಾರೆ. ಆದರೆ ನಾನು ಅವರನ್ನು ಕಂಡಿಲ್ಲ. ದನದ ಬಾಲದಂತಹ ಚಾಟಿಯನ್ನು ಹಿಡಿದುಕೊಂಡು, ಅದರಿಂದ ಜನರಿಗೆ ಥಳಿಸುವವರು. ಬಟ್ಟೆ ಧರಿಸಿದ್ದರೂ ನಗ್ನರಾಗಿರುವ ಮತ್ತು (ಜನರನ್ನು ಕೆಡುಕಿನ ಕಡೆಗೆ) ವಾಲಿಸುವ ಹಾಗೂ ಸ್ವಯಂ ಅದರೆಡೆಗೆ ವಾಲುವ ಸ್ತ್ರೀಯರು
68. ಒಬ್ಬ ಪುರುಷನು ಇನ್ನೊಬ್ಬ ಪುರುಷನ ಖಾಸಗಿ ಭಾಗಗಳನ್ನು ಮತ್ತು ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಖಾಸಗಿ ಭಾಗಗಳನ್ನು ನೋಡಬಾರದು
69. ದೇವದೂತರು ನಾಯಿ ಅಥವಾ ಗಂಟೆಯಿರುವ ಗುಂಪಿನ ಜೊತೆ ಸೇರುವುದಿಲ್ಲ
70. ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ
71. ನಿಮ್ಮ ಮುಟ್ಟಿನ ಅವಧಿಯು ಸಾಮಾನ್ಯವಾಗಿ ನಿಮ್ಮನ್ನು ತಡೆಹಿಡಿಯುವ ತನಕ ಕಾಯಿರಿ, ತದನಂತರ ಸ್ನಾನ ಮಾಡಿರಿ
72. ಹರೆಯ ತಲುಪಿದ ಎಲ್ಲರಿಗೂ ಶುಕ್ರವಾರ ಸ್ನಾನ ಮಾಡುವುದು, ಹಲ್ಲು ಸ್ವಚ್ಛ ಮಾಡುವುದು ಮತ್ತು ಲಭ್ಯವಿದ್ದರೆ ಸುಗಂಧ ದ್ರವ್ಯವನ್ನು ಹಚ್ಚುವುದು ಕಡ್ಡಾಯವಾಗಿದೆ - 4 ملاحظة
73. “ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ ಅವನೇ ಮುಹಾಜಿರ್
74. ಒಬ್ಬ ಮಹಿಳೆ ತನ್ನ ಜೊತೆಗೆ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು ಇಲ್ಲದೆ ಎರಡು ದಿನಗಳಷ್ಟು ದೂರದ ಪ್ರಯಾಣ ಮಾಡಬಾರದು
75. ಯಾರು ಎಲ್ಲಾ ನಮಾಝ್ಗಳ ನಂತರ ಮೂವತ್ತಮೂರು ಬಾರಿ ಸುಬ್ಹಾನಲ್ಲಾಹ್, ಮೂವತ್ತಮೂರು ಬಾರಿ ಅಲ್-ಹಮ್ದುಲಿಲ್ಲಾಹ್ ಮತ್ತು ಮೂವತ್ತಮೂರು ಬಾರಿ ಅಲ್ಲಾಹು ಅಕ್ಬರ್ ಹೇಳುತ್ತಾರೋ—ಇವು ಒಟ್ಟು ತೊಂಬತ್ತೊಂಬತ್ತು— ಮತ್ತು ನೂರನ್ನು ಪೂರ್ತಿ ಮಾಡಲು, ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್ ಎಂದು ಪಠಿಸುತ್ತಾರೋ, ಅವರ ಪಾಪಗಳೆಲ್ಲವನ್ನೂ ಕ್ಷಮಿಸಲಾಗುವುದು. ಅವು ಸಮುದ್ರದ ನೊರೆಗಳಷ್ಟಿದ್ದರೂ ಸಹ - 2 ملاحظة
76. ಯಾರು ಎಲ್ಲಾ ಕಡ್ಡಾಯ ನಮಾಝ್ಗಳ ನಂತರ ಆಯತುಲ್-ಕುರ್ಸಿ ಪಠಿಸುತ್ತಾರೋ, ಅವರನ್ನು ಸಾವಿನ ಹೊರತು ಬೇರೇನೂ ಸ್ವರ್ಗ ಪ್ರವೇಶಿಸದಂತೆ ತಡೆಯುವುದಿಲ್ಲ
77. ನಿಶ್ಚಯವಾಗಿಯೂ ರಾತ್ರಿ ಮತ್ತು ಹಗಲು ತಲುಪುವ ಎಲ್ಲಾ ಸ್ಥಳಗಳಿಗೂ ಈ ವಿಷಯವು ತಲುಪಲಿದೆ. ಅಲ್ಲಾಹು ಪಟ್ಟಣದಲ್ಲಿ ಅಥವಾ ಮರುಭೂಮಿಯಲ್ಲಿರುವ ಯಾವುದೇ ಮನೆಗೂ ಈ ಧರ್ಮವು ಪ್ರವೇಶವಾಗುವಂತೆ ಮಾಡದೆ ಬಿಡಲಾರ
78. ನಿಮ್ಮಲ್ಲೊಬ್ಬರಿಗೆ ನಮಾಝ್ನಲ್ಲಿ ಸಂಶಯವುಂಟಾಗಿ ತಾನು ಮೂರು ರಕಅತ್ ನಿರ್ವಹಿಸಿದ್ದೇನೋ ಅಥವಾ ನಾಲ್ಕು ರಕಅತ್ ನಿರ್ವಹಿಸಿದ್ದೇನೋ ಎಂದು ತಿಳಿಯಲಾಗದಿದ್ದರೆ, ಅವನು ಆ ಸಂಶಯವನ್ನು ಉಪೇಕ್ಷಿಸಿ ತನಗೆ ಖಾತ್ರಿಯಿರುವುದರ ಆಧಾರದಲ್ಲಿ ಮುಂದುವರಿಯಲಿ. ನಂತರ, ಸಲಾಂ ಹೇಳುವುದಕ್ಕೆ ಮೊದಲು ಎರಡು ಸುಜೂದ್ಗಳನ್ನು ನಿರ್ವಹಿಸಲಿ
79. ಎಲ್ಲಾ ಮಾದಕ ದ್ರವ್ಯಗಳು ಮದ್ಯವಾಗಿವೆ ಮತ್ತು ಎಲ್ಲಾ ಮಾದಕ ದ್ರವ್ಯಗಳು ನಿಷಿದ್ಧವಾಗಿವೆ. ಯಾರು ಇಹಲೋಕದಲ್ಲಿ ಮದ್ಯ ಸೇವಿಸುತ್ತಾರೋ, ಮತ್ತು ಅದರ ಚಟಕ್ಕೆ ಬಲಿಯಾಗಿ ಪಶ್ಚಾತ್ತಾಪಪಡದೆ ಸಾಯುತ್ತಾರೋ, ಅವರು ಪರಲೋಕದಲ್ಲಿ ಅದನ್ನು ಕುಡಿಯಲಾರರು - 6 ملاحظة
80. ನಾನು ಕೇಳಿದೆ: "ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಯಾರಿಗೆ ಹೆಚ್ಚು ಒಳಿತು ಮಾಡಬೇಕು?" ಅವರು ಉತ್ತರಿಸಿದರು: "ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಂದೆಗೆ, ನಂತರ ಹತ್ತಿರದ ಸಂಬಂಧಿಗಳಿಗೆ, ನಂತರ ಅವರ ನಂತರದ ಹತ್ತಿರದ ಸಂಬಂಧಿಗಳಿಗೆ
No hadiths match your search.