عن معاوية رضي الله عنه قال: سمعت النبي صلى الله عليه وسلم يقول:
«مَنْ يُرِدِ اللهُ بِهِ خَيْرًا يُفَقِّهْهُ فِي الدِّينِ، وَإِنَّمَا أَنَا قَاسِمٌ، وَاللهُ يُعْطِي، وَلَنْ تَزَالَ هَذِهِ الْأُمَّةُ قَائِمَةً عَلَى أَمْرِ اللهِ، لَا يَضُرُّهُمْ مَنْ خَالَفَهُمْ، حَتَّى يَأْتِيَ أَمْرُ اللهِ».
[صحيح] - [متفق عليه] - [صحيح البخاري: 71]
المزيــد ...
ಮುಆವಿಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಅಲ್ಲಾಹು ಯಾರಿಗೆ ಒಳಿತನ್ನು ಬಯಸುತ್ತಾನೋ ಅವನಿಗೆ ಧಾರ್ಮಿಕ ವಿಷಯಗಳಲ್ಲಿ ಪಾಂಡಿತ್ಯವನ್ನು ನೀಡುತ್ತಾನೆ. ನಾನು ಕೇವಲ ಹಂಚುವವನು ಮಾತ್ರ. ಕೊಡುವವನು ಅಲ್ಲಾಹು. ಈ ಸಮುದಾಯವು ಅಲ್ಲಾಹನ ನಿಯಮಗಳನ್ನು ಅನುಸರಿಸುತ್ತಲೇ ಇರುವುದು, ಅವರನ್ನು ವಿರೋಧಿಸುವವರು ಅವರಿಗೆ ಯಾವುದೇ ತೊಂದರೆ ಮಾಡಲಾರರು, ಅಲ್ಲಾಹನ ಆಜ್ಞೆ ಜಾರಿಗೆ ಬರುವ ತನಕ."
[صحيح] - [متفق عليه] - [صحيح البخاري - 71]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಯಾರಿಗಾದರೂ ಒಳಿತು ಮಾಡಲು ಬಯಸಿದರೆ, ಅವನು ತನ್ನ ಧರ್ಮದ ತಿಳುವಳಿಕೆಯನ್ನು ಅವನಿಗೆ ನೀಡುತ್ತಾನೆ. ಸರ್ವಶಕ್ತನಾದ ಅಲ್ಲಾಹನು ನನಗೆ ನೀಡಿದ ಜೀವನೋಪಾಯ, ಜ್ಞಾನ ಮತ್ತು ಇತರ ವಸ್ತುಗಳನ್ನು ವಿತರಿಸುವುದನ್ನು ಮಾತ್ರ ನಾನು ಮಾಡುತ್ತಿದ್ದೇನೆ. ವಾಸ್ತವವಾಗಿ ಇವೆಲ್ಲವೂ ಅಲ್ಲಾಹನ ಕೊಡುಗೆಗಳಾಗಿವೆ. ಅಲ್ಲಾಹನ ಹೊರತಾದವರೆಲ್ಲರೂ ಕೇವಲ ಕಾರಣಗಳಾಗಿದ್ದು ಅಲ್ಲಾಹನ ಅಪ್ಪಣೆಯಿಂದಲ್ಲದೆ ಯಾವುದೇ ಉಪಕಾರ ಮಾಡಲು ಅವರಿಗೆ ಸಾಧ್ಯವಿಲ್ಲ. ಈ ಸಮುದಾಯವು ಅಲ್ಲಾಹನ ಆಜ್ಞೆಗಳಲ್ಲಿ ಸದಾ ಅಚಲವಾಗಿ ನಿಲ್ಲುತ್ತದೆ. ಅವರನ್ನು ವಿರೋಧಿಸುವವರು ಅವರಿಗೆ ಯಾವುದೇ ತೊಂದರೆ ಮಾಡಲಾರರು, ಪ್ರಳಯವು ಸಂಭವಿಸುವ ತನಕ."