عن أبي هريرة رضي الله عنه:
أَنَّ رَجُلًا قَالَ لِلنَّبِيِّ صَلَّى اللهُ عَلَيْهِ وَسَلَّمَ: أَوْصِنِي، قَالَ: «لَا تَغْضَبْ» فَرَدَّدَ مِرَارًا قَالَ: «لَا تَغْضَبْ».
[صحيح] - [رواه البخاري] - [صحيح البخاري: 6116]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಒಬ್ಬ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗೆ ಹಿತವಚನ ನೀಡಿರಿ." ಅವರು ಹೇಳಿದರು: "ಕೋಪಗೊಳ್ಳಬೇಡಿ." ಆ ವ್ಯಕ್ತಿ ಹಲವು ಬಾರಿ ಅದೇ ಪ್ರಶ್ನೆ ಕೇಳಿದಾಗಲೂ ಪ್ರವಾದಿಯವರು ಹೇಳಿದರು: "ಕೋಪಗೊಳ್ಳಬೇಡಿ."
[صحيح] - [رواه البخاري] - [صحيح البخاري - 6116]
ಸಹಾಬಿಗಳಲ್ಲಿ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಒಬ್ಬರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಉಪಕಾರವಾಗುವ ಏನಾದರೊಂದು ವಿಷಯವನ್ನು ತಿಳಿಸಬೇಕೆಂದು ವಿನಂತಿಸಿದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ "ಕೋಪಗೊಳ್ಳಬೇಡಿ" ಎಂದು ಹೇಳಿದರು. ಇದರ ಅರ್ಥ: ಕೋಪಕ್ಕೆ ಕಾರಣವಾಗುವ ಎಲ್ಲಾ ವಿಷಯಗಳಿಂದಲೂ ದೂರವಿರುವುದು, ಕೋಪ ಬಂದರೆ ಮನಸ್ಸನ್ನು ನಿಯಂತ್ರಿಸುವುದು, ಮತ್ತು ಕೋಪದಿಂದ ಕೊಲ್ಲುವುದು, ಥಳಿಸುವುದು, ನಿಂದಿಸುವುದು ಮುಂತಾದವುಗಳಿಗೆ ಮುಂದಾಗದಿರುವುದು.
ಆ ವ್ಯಕ್ತಿ ಪುನಃ ಪುನಃ ಹಿತವಚನ ನೀಡಬೇಕೆಂದು ಹೇಳಿದಾಗಲೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಕೋಪಗೊಳ್ಳಬೇಡಿ." ಎಂದು ಹೇಳುವುದರ ಹೊರತು ಬೇರೇನೂ ಹೇಳಲಿಲ್ಲ.