ಉಪವರ್ಗಗಳು

ಹದೀಸ್‌ಗಳ ಪಟ್ಟಿ

1. ನಾನು ನಿಮ್ಮನ್ನು ಬಿಟ್ಟಂತೆಯೇ ನೀವು ನನ್ನನ್ನು ಬಿಡಿ. ನಿಮಗಿಂತ ಮೊದಲಿನವರು ನಾಶವಾಗಿದ್ದು ಅವರು ತಮ್ಮ ಪ್ರವಾದಿಗಳೊಂದಿಗೆ ಪ್ರಶ್ನೆ ಕೇಳಿ ನಂತರ ಅದಕ್ಕೆ ವಿರುದ್ಧವಾಗಿ ಸಾಗಿದ ಕಾರಣದಿಂದಾಗಿದೆ
عربي ಆಂಗ್ಲ ಉರ್ದು
2. ಸೌಮ್ಯತೆಯಿಂದ ವಂಚಿತನಾದವನು ಒಳಿತಿನಿಂದಲೂ ವಂಚಿತನಾಗಿದ್ದಾನೆ
عربي ಆಂಗ್ಲ ಉರ್ದು
3. ಸತ್ಯಕ್ಕೆ ನಿಷ್ಠರಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸತ್ಯವು ಒಳಿತಿಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ - 2 ملاحظة
عربي ಆಂಗ್ಲ ಉರ್ದು
4. ಅಲ್ಲಾಹನ ವಚನವು ಸರ್ವೋಚ್ಛವಾಗಬೇಕೆಂದು ಯಾರು ಹೋರಾಡುತ್ತಾರೋ ಅವರೇ ಅಲ್ಲಾಹನ ಮಾರ್ಗದಲ್ಲಿರುವವರು
عربي ಆಂಗ್ಲ ಉರ್ದು
5. ನೀವು ರೇಷ್ಮೆ ಅಥವಾ ಬ್ರೊಕೇಡು (ಜರತಾರಿ ರೇಷ್ಮೆ) ಗಳನ್ನು ಧರಿಸಬೇಡಿ. ಬಂಗಾರ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯಬೇಡಿ ಮತ್ತು ಅವುಗಳ ಬಟ್ಟಲುಗಳಲ್ಲಿ ಆಹಾರ ಸೇವಿಸಬೇಡಿ. ಏಕೆಂದರೆ, ಇವು ಇಹಲೋಕದಲ್ಲಿ ಅವರಿಗೆ ಮತ್ತು ಪರಲೋಕದಲ್ಲಿ ನಮಗೆ ಇರುವುದಾಗಿವೆ
عربي ಆಂಗ್ಲ ಉರ್ದು
6. ನಾನು ನಿಮ್ಮಿಂದ ಆಣೆ ಮಾಡಿಸಿದ್ದು ನಿಮ್ಮ ಮೇಲೆ ಅಪವಾದ ಹೊರಿಸುವುದಕ್ಕಲ್ಲ. ಬದಲಿಗೆ, ಸರ್ವಶಕ್ತನಾದ ಅಲ್ಲಾಹು ದೇವದೂತರ ಸಮ್ಮುಖದಲ್ಲಿ ನಿಮ್ಮ ಬಗ್ಗೆ ಹೇಳಿ ಹೆಮ್ಮೆಪಡುತ್ತಿದ್ದಾನೆಂದು ಜಿಬ್ರೀಲ್ ಬಂದು ನನಗೆ ತಿಳಿಸಿದರು
عربي ಆಂಗ್ಲ ಉರ್ದು
7. ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ಏಕೆಂದರೆ, ಸಾಲನ್ನು ನೇರಗೊಳಿಸುವುದು ನಮಾಝನ್ನು ಪೂರ್ಣಗೊಳಿಸುವುದರ ಭಾಗವಾಗಿದೆ - 2 ملاحظة
عربي ಆಂಗ್ಲ ಉರ್ದು
8. “ಸತ್ಯವಿಶ್ವಾಸಿ ಪುರುಷನು ಸತ್ಯವಿಶ್ವಾಸಿ ಸ್ತ್ರೀಯನ್ನು ದ್ವೇಷಿಸಬಾರದು. ಅವಳ ಒಂದು ಗುಣವನ್ನು ಅವನು ಇಷ್ಟಪಡದಿದ್ದರೆ, ಅವಳ ಇನ್ನೊಂದು ಗುಣವು ಅವನಿಗೆ ಇಷ್ಟವಾಗಬಹುದು
عربي ಆಂಗ್ಲ ಉರ್ದು
9. ನೀವು ಮಲ ವಿಸರ್ಜನೆ ಮಾಡುವ ಸ್ಥಳಕ್ಕೆ ಹೋದರೆ ಕಿಬ್ಲದ ದಿಕ್ಕಿಗೆ ಮುಖ ಮಾಡಬೇಡಿ ಮತ್ತು ಅದರ ಕಡೆಗೆ ಬೆನ್ನು ಹಾಕಬೇಡಿ. ಬದಲಿಗೆ, ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಿ
عربي ಆಂಗ್ಲ ಉರ್ದು
10. ನಿಮ್ಮಲ್ಲೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ತನ್ನ ಜನನಾಂಗವನ್ನು ಬಲಗೈಯಲ್ಲಿ ಹಿಡಿಯಬಾರದು, ಬಲಗೈಯಿಂದ ಶೌಚವನ್ನು ಒರೆಸಬಾರದು, ಮತ್ತು ಪಾತ್ರೆಯೊಳಗೆ ಶ್ವಾಸ ಬಿಡಬಾರದು
عربي ಆಂಗ್ಲ ಉರ್ದು
11. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಪ್ರಾರಂಭಿಸುವಾಗ ತಮ್ಮ ಎರಡು ಕೈಗಳನ್ನು ಹೆಗಲಿಗೆ ಸಮಾನಾಂತರವಾಗಿ ಎತ್ತುತ್ತಿದ್ದರು
عربي ಆಂಗ್ಲ ಉರ್ದು
12. ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮಗಳ ನಡುವೆ ಅಂತರವಿಟ್ಟಂತೆ ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವಿಡು
عربي ಆಂಗ್ಲ ಉರ್ದು
13. ದಜ್ಜಾಲ್‌ನ ಬಗ್ಗೆ ಯಾವುದೇ ಪ್ರವಾದಿಯೂ ಅವರ ಜನತೆಗೆ ತಿಳಿಸಿಕೊಡದ ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ? ನಿಶ್ಚಯವಾಗಿಯೂ ಅವನು ಒಕ್ಕಣ್ಣನಾಗಿದ್ದಾನೆ. ಅವನು ಸ್ವರ್ಗ ಮತ್ತು ನರಕದಂತಿರುವುದನ್ನು ತನ್ನ ಜೊತೆಗೆ ತರುತ್ತಾನೆ
عربي ಆಂಗ್ಲ ಉರ್ದು
14. ಒಳ್ಳೆಯ ಒಡನಾಡಿ ಮತ್ತು ಕೆಟ್ಟ ಒಡನಾಡಿಯ ಉದಾಹರಣೆಯು ಕಸ್ತೂರಿ ಮಾರುವವನ ಮತ್ತು ತಿದಿ ಊದುವವನಂತೆ - 2 ملاحظة
عربي ಆಂಗ್ಲ ಉರ್ದು
15. ಅಂಧಕಾರ ತುಂಬಿದ ರಾತ್ರಿಗಳ ತುಂಡುಗಳಂತಿರುವ ಪರೀಕ್ಷೆಗಳು ಬರುವುದಕ್ಕೆ ಮೊದಲು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ - 4 ملاحظة
عربي ಆಂಗ್ಲ ಉರ್ದು
16. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ನಿರ್ವಹಿಸುವಾಗ ತಮ್ಮ ಎರಡು ಕೈಗಳನ್ನು, ತಮ್ಮ ಕಂಕುಳದ ಬಿಳುಪು ಗೋಚರವಾಗುವ ತನಕ ಅಗಲಿಸುತ್ತಿದ್ದರು
عربي ಆಂಗ್ಲ ಉರ್ದು
17. ಪುರುಷನು ಖರ್ಚು ಮಾಡುವ ಅತಿಶ್ರೇಷ್ಠ ದೀನಾರ್ ಎಂದರೆ ಅವನು ತನ್ನ ಕುಟುಂಬಕ್ಕಾಗಿ ಖರ್ಚು ಮಾಡುವ ದೀನಾರ್, ಪುರುಷನು ಅಲ್ಲಾಹನ ಮಾರ್ಗದಲ್ಲಿ ತನ್ನ ಸವಾರಿಗಾಗಿ ಖರ್ಚು ಮಾಡುವ ದೀನಾರ್, ಮತ್ತು ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಸಹಚರರಿಗಾಗಿ ಖರ್ಚು ಮಾಡುವ ದೀನಾರ್
عربي ಆಂಗ್ಲ ಉರ್ದು
18. ಸತ್ಯವಿಶ್ವಾಸಿಯ ವಿಷಯವು ಅತ್ಯಂತ ವಿಸ್ಮಯಕಾರಿಯಾಗಿದೆ! ಅವನ ಎಲ್ಲಾ ವಿಷಯಗಳೂ ಅವನಿಗೆ ಒಳಿತಾಗಿವೆ. ಇದು ಒಬ್ಬ ಸತ್ಯವಿಶ್ವಾಸಿಗಲ್ಲದೆ ಇನ್ನಾರಿಗೂ ಇಲ್ಲ - 2 ملاحظة
عربي ಆಂಗ್ಲ ಉರ್ದು
19. ದೊಡ್ಡ ಅಶುದ್ಧಿಯಿಂದ (ಜನಾಬತ್) ಸ್ನಾನ ಮಾಡುವ ರೂಪ
عربي ಆಂಗ್ಲ ಉರ್ದು
20. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೀನುವಾಗ ತಮ್ಮ ಕೈಯನ್ನು—ಅಥವಾ ಬಟ್ಟೆಯನ್ನು—ಮುಖದ ಮೇಲಿಡುತ್ತಿದ್ದರು ಮತ್ತು ಶಬ್ದವನ್ನು ಕಡಿಮೆ ಮಾಡುತ್ತಿದ್ದರು—ಅಥವಾ ತಗ್ಗಿಸುತ್ತಿದ್ದರು
عربي ಆಂಗ್ಲ ಉರ್ದು
21. ನಿಶ್ಚಯವಾಗಿಯೂ ನೀವು ನಿಮಗಿಂತ ಮೊದಲಿನವರ ನಡವಳಿಕೆಗಳನ್ನು ಗೇಣು-ಗೇಣಾಗಿ ಮತ್ತು ಮೊಳ-ಮೊಳವಾಗಿ ಹಿಂಬಾಲಿಸಲಿದ್ದೀರಿ
عربي ಆಂಗ್ಲ ಉರ್ದು
22. ಅದ್ವಾ ಇಲ್ಲ, ತಿಯರ ಇಲ್ಲ, ಹಾಮ ಇಲ್ಲ, ಸಫರ್ ಇಲ್ಲ. ಆದರೆ, ಸಿಂಹವನ್ನು ಕಂಡು ಓಡುವಂತೆ ಕುಷ್ಠರೋಗಿಯಿಂದ ದೂರ ಓಡಿರಿ
عربي ಆಂಗ್ಲ ಉರ್ದು
23. ಏಕೆಂದರೆ, ಅಲ್ಲಾಹನಾಣೆ! ಅಲ್ಲಾಹು ನಿನ್ನ ಮೂಲಕ ಒಬ್ಬ ವ್ಯಕ್ತಿಗೆ ಸನ್ಮಾರ್ಗವನ್ನು ಕರುಣಿಸುವುದು ನಿನಗೆ ಕೆಂಪು ಒಂಟೆಗಳಿರುವುದಕ್ಕಿಂತಲೂ ಶ್ರೇಷ್ಠವಾಗಿದೆ - 4 ملاحظة
عربي ಆಂಗ್ಲ ಉರ್ದು
24. ಜನರು ದಬ್ಬಾಳಿಕೆ ಮಾಡುವವನನ್ನು ನೋಡಿಯೂ ಅವನನ್ನು ತಡೆಯದಿದ್ದರೆ, ಅಲ್ಲಾಹು ತನ್ನ ಕಡೆಯ ಶಿಕ್ಷೆಯಿಂದ ಅವರೆಲ್ಲರನ್ನೂ ಆವರಿಸಿಕೊಳ್ಳಬಹುದು
عربي ಆಂಗ್ಲ ಉರ್ದು
25. ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವ ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದು ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ? - 6 ملاحظة
عربي ಆಂಗ್ಲ ಉರ್ದು
26. ನಿಮ್ಮ ಕರ್ಮಗಳಲ್ಲಿ ಶ್ರೇಷ್ಠವಾದ, ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಪರಿಶುದ್ಧವಾದ, ನಿಮ್ಮ ಪದವಿಗಳಲ್ಲಿ ಅತಿ ಎತ್ತರವಾದ, ಚಿನ್ನ ಮತ್ತು ಬೆಳ್ಳಿಯನ್ನು ವ್ಯಯಿಸುವುದಕ್ಕಿಂತಲೂ ಉತ್ತಮವಾದ, ನೀವು ನಿಮ್ಮ ಶತ್ರುವಿನೊಂದಿಗೆ ಹೋರಾಡಿ ನೀವು ಅವರನ್ನು ಮತ್ತು ಅವರು ನಿಮ್ಮನ್ನು ಕೊಲ್ಲುವುದಕ್ಕಿಂತಲೂ ಉತ್ತಮವಾದ ಒಂದು ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ?
عربي ಆಂಗ್ಲ ಉರ್ದು
27. ಅವನು ಹೇಳಿದ್ದು ಸತ್ಯವಾಗಿದ್ದರೆ ಅವನು ಯಶಸ್ವಿಯಾದನು
عربي ಆಂಗ್ಲ ಉರ್ದು
28. ಸೂರ್ಯ ಉದಯವಾಗುವ ದಿನಗಳಲ್ಲಿ ಅತಿಶ್ರೇಷ್ಠವಾದ ದಿನ ಜುಮಾ (ಶುಕ್ರವಾರ،) ದಿನ
عربي ಆಂಗ್ಲ ಉರ್ದು
29. ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ." ಅವರೊಡನೆ ಕೇಳಲಾಯಿತು: “ಓ ಅಲ್ಲಾಹನ ಸಂದೇಶವಾಹಕರೇ! ಯಾರು?" ಅವರು ಉತ್ತರಿಸಿದರು: "ಯಾರು ಬದುಕಿರುವಾಗ ಅವನ ತಂದೆ-ತಾಯಿಗಳಲ್ಲಿ ಒಬ್ಬರು ಅಥವಾ ಇಬ್ಬರು ವೃದ್ಧಾಪ್ಯವನ್ನು ತಲುಪಿಯೂ ಸ್ವರ್ಗವನ್ನು ಪ್ರವೇಶಿಸಲಾಗದವನು
عربي ಆಂಗ್ಲ ಉರ್ದು
30. ಮುಫರ್‍ರಿದ್‌ಗಳು (ಅನನ್ಯರು) ಮುಂಚೂಣಿಯಲ್ಲಿದ್ದಾರೆ
عربي ಆಂಗ್ಲ ಉರ್ದು
31. ಅಲ್ಲಾಹನಿಗೆ ಅತ್ಯಧಿಕವಾಗಿ ಸುಜೂದ್ ಮಾಡಿರಿ. ಏಕೆಂದರೆ ನೀವು ಅಲ್ಲಾಹನಿಗಾಗಿ ಒಂದು ಸುಜೂದ್ ಮಾಡಿದರೆ, ಅಲ್ಲಾಹು ಅದರಿಂದ ನಿಮಗೆ ಒಂದುಸ್ಥಾನಯನ್ನು ಏರಿಸುವನು ಮತ್ತು ನಿಮ್ಮಿಂದ ಒಂದು ಪಾಪವನ್ನು ಅಳಿಸುವನು
عربي ಆಂಗ್ಲ ಉರ್ದು
32. ಯಾರು ಎರಡು ಬರದ್ (ತಂಪು) ನಮಾಝ್‌ಗಳನ್ನು ನಿರ್ವಹಿಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ - 2 ملاحظة
عربي ಆಂಗ್ಲ ಉರ್ದು
33. ಒಬ್ಬ ಮುಸ್ಲಿಮನೊಡನೆ ಸಮಾಧಿಯಲ್ಲಿ ಪ್ರಶ್ನೆ ಕೇಳುವಾಗ, ಅವನು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುತ್ತಾನೆ
عربي ಆಂಗ್ಲ ಉರ್ದು
34. ನಿಶ್ಚಯವಾಗಿಯೂ ಅಲ್ಲಾಹು ಹಗಲಿನಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ರಾತ್ರಿಯಲ್ಲಿ ಕೈ ಚಾಚುತ್ತಾನೆ. ರಾತ್ರಿಯಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ಹಗಲಿನಲ್ಲಿ ಕೈ ಚಾಚುತ್ತಾನೆ. ಎಲ್ಲಿಯವರೆಗೆಂದರೆ, ಸೂರ್ಯ ಪಶ್ಚಿಮದಿಂದ ಉದಯವಾಗುವವರೆಗೆ - 2 ملاحظة
عربي ಆಂಗ್ಲ ಉರ್ದು
35. ಸೂರ್ಯ ಉದಯವಾಗುವ ಎಲ್ಲಾ ದಿನಗಳಲ್ಲೂ ಮನುಷ್ಯನ ದೇಹದ ಎಲ್ಲಾ ಸಂಧಿಗಳಿಗೂ ದಾನ ನೀಡಬೇಕಾಗಿದೆ
عربي ಆಂಗ್ಲ ಉರ್ದು
36. ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ನಿಮ್ಮಲ್ಲಿ ಯಾರೂ (ನಿಜವಾದ) ಸತ್ಯವಿಶ್ವಾಸಿಯಾಗುವುದಿಲ್ಲ - 2 ملاحظة
عربي ಆಂಗ್ಲ ಉರ್ದು
37. ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ
عربي ಆಂಗ್ಲ ಉರ್ದು
38. ಯಾರು ಆಹಾರ ಸೇವಿಸಿದ ನಂತರ, “ಅಲ್-ಹಮ್ದುಲಿಲ್ಲಾಹಿಲ್ಲದೀ ಅತ್‌ಅಮನೀ ಹಾದಾ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ.” (ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಆಹಾರವನ್ನು ಉಣಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ) ಎಂದು ಹೇಳುತ್ತಾನೋ, ಅವನ ಗತ ಪಾಪಗಳನ್ನು ಕ್ಷಮಿಸಲಾಗುವುದು
عربي ಆಂಗ್ಲ ಉರ್ದು
39. ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಜುಮಾ ನಮಾಝಿಗೆ ಬಂದು, (ಪ್ರವಚನವನ್ನು) ಕಿವಿಗೊಟ್ಟು ಕೇಳಿ, ಮೌನವಾಗಿರುತ್ತಾನೋ, ಆ ಜುಮಾ ಮತ್ತು ಮುಂದಿನ ಜುಮಾದ ತನಕವಿರುವ ಮತ್ತು ಮೂರು ದಿನ ಹೆಚ್ಚುವರಿಯಾಗಿ, ಅವನ ಎಲ್ಲಾ ಪಾಪಗಳನ್ನು ಕ್ಷಮಿಸಲಾಗುವುದು
عربي ಆಂಗ್ಲ ಉರ್ದು
40. ಓ ಆದಮರ ಪುತ್ರನೇ! ನೀನು ಎಲ್ಲಿಯ ತನಕ ನನ್ನಲ್ಲಿ ಪ್ರಾರ್ಥಿಸುತ್ತೀಯೋ ಮತ್ತು ನನ್ನಲ್ಲಿ ನಿರೀಕ್ಷೆಯಿಡುತ್ತೀಯೋ ಅಲ್ಲಿಯ ತನಕ ನೀನು ಮಾಡಿದ್ದೆಲ್ಲವನ್ನೂ ನಾನು ನಿನಗೆ ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ - 2 ملاحظة
عربي ಆಂಗ್ಲ ಉರ್ದು
41. ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿರಿ, ಆಹಾರವನ್ನು ಉಣಿಸಿರಿ, ಕುಟುಂಬ ಸಂಬಂಧಗಳನ್ನು ಜೋಡಿಸಿರಿ, ಮತ್ತು ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವಾಗ ನಮಾಝ್ ಮಾಡಿರಿ. ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ
عربي ಆಂಗ್ಲ ಉರ್ದು
42. ನಿಶ್ಚಯವಾಗಿಯೂ ಧರ್ಮವು ಸರಳವಾಗಿದೆ. ಯಾರಾದರೂ ಧರ್ಮವನ್ನು ಕಠಿಣಗೊಳಿಸಲು ಪ್ರಯತ್ನಿಸಿದರೆ ಅದು ಅವನನ್ನು ಸೋಲಿಸದೆ ಬಿಡುವುದಿಲ್ಲ. ಆದ್ದರಿಂದ ಸರಿಯಾದುದನ್ನು ಅರಸಿರಿ, ಸಾಧ್ಯವಾದಷ್ಟು ಹತ್ತಿರವಾಗಿರಿ
عربي ಆಂಗ್ಲ ಉರ್ದು
43. ವಿವಾಹವಾಗುವ ಸಾಮರ್ಥ್ಯವಿರುವವರು ವಿವಾಹವಾಗಬೇಕು. ಏಕೆಂದರೆ, ದೃಷ್ಟಿಯನ್ನು ತಗ್ಗಿಸಲು ಮತ್ತು ಪರಿಶುದ್ಧತೆಯನ್ನು ಕಾಪಾಡಲು ಅದು ಹೆಚ್ಚು ಪರಿಣಾಮಕಾರಿಯಾಗಿದೆ. ವಿವಾಹವಾಗುವ ಸಾಮರ್ಥ್ಯವಿಲ್ಲದವರು ಉಪವಾಸ ಆಚರಿಸಬೇಕು. ಏಕೆಂದರೆ, ಅದು ಅವನಿಗೆ ಗುರಾಣಿಯಾಗಿದೆ
عربي ಆಂಗ್ಲ ಉರ್ದು
44. ನೀವಿಬ್ಬರು ಕೇಳಿದ್ದಕ್ಕಿಂತಲೂ ಉತ್ತಮವಾದ ಒಂದನ್ನು ನಾನು ನಿಮಗೆ ತಿಳಿಸಿಕೊಡಲೇ? ನೀವು ನಿದ್ದೆ ಮಾಡಲು ಹೋಗುವಾಗ ಮೂವತ್ತಮೂರು ಬಾರಿ ಸುಬ್‌ಹಾನಲ್ಲಾಹ್, ಮೂವತ್ತಮೂರು ಬಾರಿ ಅಲ್-ಹಮ್ದುಲಿಲ್ಲಾಹ್, ಮೂವತ್ತನಾಲ್ಕು ಬಾರಿ ಅಲ್ಲಾಹು ಅಕ್ಬರ್ ಹೇಳಿರಿ. ಇದು ನಿಮಗೆ ಒಬ್ಬ ಸೇವಕ ದೊರೆಯುವುದಕ್ಕಿಂತಲೂ ಉತ್ತಮವಾಗಿದೆ
عربي ಆಂಗ್ಲ ಉರ್ದು
45. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯಂತ ಉದಾರಿಯಾಗಿದ್ದರು. ರಮದಾನ್ ತಿಂಗಳಲ್ಲಿ ಜಿಬ್ರೀಲ್ ಅವರನ್ನು ಭೇಟಿಯಾಗುವಾಗ ಅವರು ಹಿಂದೆಂದಿಗಿಂತಲೂ ಹೆಚ್ಚು ಉದಾರಿಯಾಗುತ್ತಿದ್ದರು
عربي ಆಂಗ್ಲ ಉರ್ದು
46. ಯಾರಾದರೂ ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾ ಆಣೆ ಮಾಡಿದರೆ, ಅವನು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಬೇಕು. ಯಾರಾದರೂ ತನ್ನ ಸಂಗಡಿಗನೊಡನೆ ಬಾ ಜೂಜಾಡೋಣ ಎಂದು ಹೇಳಿದರೆ, ಅವನು ದಾನ-ಧರ್ಮ ಮಾಡಬೇಕು
عربي ಆಂಗ್ಲ ಉರ್ದು
47. ದಿವಾಳಿ ಯಾರೆಂದು ನಿಮಗೆ ತಿಳಿದಿದೆಯೇ? - 2 ملاحظة
عربي ಆಂಗ್ಲ ಉರ್ದು
48. ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಅಲ್ಲಾಹು ನೇರವಾಗಿ ಮಾತನಾಡುವನು. ಅಲ್ಲಾಹು ಮತ್ತು ಅವನ ನಡುವೆ ಯಾವುದೇ ಅನುವಾದಕನು ಇರುವುದಿಲ್ಲ
عربي ಆಂಗ್ಲ ಉರ್ದು
49. ರಮದಾನ್ ತಿಂಗಳು ಬಂದರೆ ಉಮ್ರ ನಿರ್ವಹಿಸು. ಏಕೆಂದರೆ, ಅದರಲ್ಲಿ ನಿರ್ವಹಿಸುವ ಉಮ್ರ ಹಜ್ಜ್‌ಗೆ ಸಮಾನವಾಗಿದೆ - 2 ملاحظة
عربي ಆಂಗ್ಲ ಉರ್ದು
50. ಓ ಅಲ್ಲಾಹನ ಸಂದೇಶವಾಹಕರೇ! ನಾವು ಜಿಹಾದ್ ಅನ್ನು ಅತಿಶ್ರೇಷ್ಠ ಕರ್ಮವೆಂದು ಪರಿಗಣಿಸುತ್ತೇವೆ. ನಾವು ಕೂಡ ಜಿಹಾದ್ ಮಾಡಬಾರದೇ?" ಅವರು ಉತ್ತರಿಸಿದರು: "ಬೇಡ, ಬದಲಿಗೆ ಅತಿಶ್ರೇಷ್ಠ ಜಿಹಾದ್ ಎಂದರೆ ಹಜ್ಜ್ ಮಬ್ರೂರ್ (ಸ್ವೀಕೃತ ಹಜ್ಜ್) ಆಗಿದೆ
عربي ಆಂಗ್ಲ ಉರ್ದು
51. ಒಮ್ಮೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದಾಗ, ಅವರು ಅಲ್ಲಿನ ಜನಸಮೂಹದ ತಿಪ್ಪೆಯ ಬಳಿಗೆ ಸಾಗಿ, ಅಲ್ಲಿ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರು
عربي ಆಂಗ್ಲ ಉರ್ದು