عن أبي هريرة رضي الله عنه أن رسول الله صلى الله عليه وسلم كان يقول:
«الصَّلَوَاتُ الْخَمْسُ، وَالْجُمُعَةُ إِلَى الْجُمُعَةِ، وَرَمَضَانُ إِلَى رَمَضَانَ، مُكَفِّرَاتٌ مَا بَيْنَهُنَّ إِذَا اجْتَنَبَ الْكَبَائِرَ».
[صحيح] - [رواه مسلم] - [صحيح مسلم: 233]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುತ್ತಿದ್ದರು:
“ಐದು ವೇಳೆಯ ನಮಾಝ್‌ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್‌ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”
[صحيح] - [رواه مسلم] - [صحيح مسلم - 233]
ಹಗಲು-ರಾತ್ರಿಯಲ್ಲಿ ಕಡ್ಡಾಯವಾಗಿರುವ ಐದು ವೇಳೆಯ ನಮಾಝ್‌ಗಳು, ಪ್ರತಿ ಶುಕ್ರವಾರ ನಿರ್ವಹಿಸುವ ಜುಮುಅ ನಮಾಝ್, ಪ್ರತಿ ವರ್ಷ ರಮದಾನ್ ತಿಂಗಳಲ್ಲಿ ಆಚರಿಸುವ ಉಪವಾಸಗಳು, ಅವುಗಳ ನಡುವೆ ಸಂಭವಿಸುವ ಕಿರುಪಾಪಗಳಿಗೆ ಪರಿಹಾರವಾಗಿದೆ. ಆದರೆ ಮಹಾಪಾಪಗಳಿಂದ ದೂರವಿರುವವರಿಗೆ ಮಾತ್ರ. ವ್ಯಭಿಚಾರ, ಮದ್ಯಪಾನ ಮುಂತಾದ ಮಹಾಪಾಪಗಳು ಪಶ್ಚಾತ್ತಾಪದಿಂದಲ್ಲದೆ ಪರಿಹಾರವಾಗುವುದಿಲ್ಲ.