عن عثمان بن عفان رضي الله عنه قال: قال رسول الله صلى الله عليه وسلم:
«مَنْ تَوَضَّأَ فَأَحْسَنَ الْوُضُوءَ خَرَجَتْ خَطَايَاهُ مِنْ جَسَدِهِ حَتَّى تَخْرُجَ مِنْ تَحْتِ أَظْفَارِهِ».
[صحيح] - [رواه مسلم] - [صحيح مسلم: 245]
المزيــد ...
ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಟುಹೋಗುತ್ತವೆ; ಎಲ್ಲಿಯವರೆಗೆಂದರೆ, ಅವರ ಉಗುರುಗಳ ಅಡಿಭಾಗದಿಂದಲೂ ಸಹ."
[صحيح] - [رواه مسلم] - [صحيح مسلم - 245]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ವುದೂವಿನ ಐಚ್ಛಿಕ ಕಾರ್ಯಗಳು ಮತ್ತು ಶಿಷ್ಟಾಚಾರಗಳನ್ನು ಸರಿಯಾಗಿ ಪಾಲಿಸುತ್ತಾ ಯಾರು ವುದೂ ನಿರ್ವಹಿಸುತ್ತಾರೋ, ಅದು ಅವರ ಪಾಪಗಳು ಪರಿಹಾರವಾಗಲು ಮತ್ತು ದೋಷಗಳು ನಿವಾರಣೆಯಾಗಲು ಕಾರಣವಾಗುತ್ತದೆ. ಎಲ್ಲಿಯವರೆಗೆಂದರೆ, ಅವರ ಕೈಗಳ ಮತ್ತು ಪಾದಗಳ ಉಗುರುಗಳ ಅಡಿಭಾಗದಿಂದಲೂ ಪಾಪಗಳು ನಿವಾರಣೆಯಾಗುತ್ತವೆ.