عن ابن عباس رضي الله عنهما قال: قال رسول الله صلى الله عليه وسلم:
«ما مِنْ أيَّامٍ العمَلُ الصَّالِحُ فيها أحبُّ إلى اللهِ مِن هذه الأيام» يعني أيامَ العشر، قالوا: يا رسُولَ الله، ولا الجهادُ في سبيلِ الله؟ قال: «ولا الجهادُ في سبيلِ الله، إلا رجلٌ خَرَجَ بنفسِه ومالِه فلم يَرْجِعْ من ذلك بشيءٍ».
[صحيح] - [رواه البخاري وأبو داود، واللفظ له] - [سنن أبي داود: 2438]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಈ ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅಂದರೆ, ದುಲ್‌ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು. ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ ಕೂಡ (ಅವನಿಗೆ ಇಷ್ಟವಿಲ್ಲವೇ)?" ಅವರು ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ ಕೂಡ (ಅವನಿಗೆ ಇಷ್ಟವಿಲ್ಲ). ಆದರೆ ಒಬ್ಬ ವ್ಯಕ್ತಿ ತನ್ನ ದೇಹ ಮತ್ತು ಆಸ್ತಿಯೊಂದಿಗೆ ರಣರಂಗಕ್ಕೆ ಹೊರಟು ಎರಡನ್ನೂ ಅಲ್ಲೇ ತ್ಯಜಿಸಿ ಬರುವ ಹೊರತು."
[صحيح] - [رواه البخاري وأبو داود، واللفظ له] - [سنن أبي داود - 2438]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಾಡುವ ಸತ್ಕರ್ಮಗಳು ವರ್ಷದ ಇತರ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗಿಂತಲೂ ಶ್ರೇಷ್ಠವಾಗಿದೆ.
ಆಗ ಸಹಾಬಿಗಳು (ಸಂಗಡಿಗರು) (ಅವರೆಲ್ಲರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಇತರ ದಿನಗಳಲ್ಲಿ ಮಾಡುವ ಜಿಹಾದ್‌ನ ಬಗ್ಗೆ, ಅದು ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗಿಂತಲೂ ಶ್ರೇಷ್ಠವಲ್ಲವೇ? ಎಂದು ಕೇಳಿದರು. ಏಕೆಂದರೆ ಅವರ ದೃಷ್ಟಿಕೋನದಲ್ಲಿ ಜಿಹಾದ್ ಅತಿ ಶ್ರೇಷ್ಠ ಸತ್ಕರ್ಮವಾಗಿತ್ತು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: ಇತರ ದಿನಗಳಲ್ಲಿ ಮಾಡುವ ಜಿಹಾದ್‌ಗಿಂತಲೂ ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳು ಶ್ರೇಷ್ಠವಾಗಿವೆ. ಆದರೆ ಒಬ್ಬ ವ್ಯಕ್ತಿ ತನ್ನ ದೇಹ ಮತ್ತು ಆಸ್ತಿಯನ್ನು ಪಣವಾಗಿಟ್ಟು ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡಲು ಹೊರಟು, ನಂತರ ಅಲ್ಲಾಹನ ಮಾರ್ಗದಲ್ಲಿ ತನ್ನ ಆಸ್ತಿಯನ್ನು ಹಾಗೂ ಆತ್ಮವನ್ನು ಕಳಕೊಳ್ಳುವುದರ ಹೊರತು. ಇದು ಈ ಶ್ರೇಷ್ಠ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗಿಂತಲೂ ಹೆಚ್ಚು ಶ್ರೇಷ್ಠವಾಗಿದೆ.