عن أبِي هُرَيرةَ رضي الله عنه أنَّ رسول الله صلى الله عليه وسلمَ قال:
«إذا قُلْتَ لِصَاحِبِكَ: أَنْصِتْ، يومَ الجمعةِ، والْإِمامُ يَخْطُبُ، فَقَدْ لَغَوْتَ».
[صحيح] - [متفق عليه] - [صحيح مسلم: 851]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಶುಕ್ರವಾರ ಇಮಾಮರು ಪ್ರವಚನ ನಿರ್ವಹಿಸುತ್ತಿರುವಾಗ, ನೀನು ನಿನ್ನ ಬಳಿಯಿರುವವನಿಗೆ "ಮೌನವಾಗಿರು" ಎಂದು ಹೇಳಿದರೆ ನೀನು ಅನಗತ್ಯವಾದುದನ್ನು ಮಾಡಿದೆ."
[صحيح] - [متفق عليه] - [صحيح مسلم - 851]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಇಮಾಮರು ಪ್ರವಚನ ನೀಡುತ್ತಿರುವಾಗ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮೌನವಾಗಿ ಕೂರುವುದು ಶುಕ್ರವಾರದ ಪ್ರವಚನಕ್ಕೆ ಹಾಜರಾಗುವವರು ಪಾಲಿಸಬೇಕಾದ ಶಿಷ್ಟಾಚಾರಗಳಲ್ಲಿ ಒಂದಾಗಿದೆ. ಇನ್ನು ಇಮಾಮರು ಪ್ರವಚನ ನೀಡುತ್ತಿರುವಾಗ ಯಾರಾದರೂ ಮಾತನಾಡಿದರೆ, ಅದು "ಮೌನವಾಗಿರು" ಅಥವಾ "ಕಿವಿಗೊಟ್ಟು ಕೇಳು" ಎಂಬಂತಹ ಒಂದೆರಡು ಶಬ್ದಗಳಾದರೂ ಸಹ, ಅವರಿಗೆ ಶುಕ್ರವಾರದ ನಮಾಝಿನ ಪುಣ್ಯವು ನಷ್ಟವಾಗುತ್ತದೆ.