عن ابنِ عُمَرَ رضي الله عنهما قال: قال رسولُ الله صلَّى الله عليه وسلم:
«مَن تَشَبَّهَ بِقَوْمٍ فَهُوَ مِنْهُمْ».
[حسن] - [رواه أبو داود وأحمد] - [سنن أبي داود: 4031]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಒಂದು ಜನಸಮೂಹವನ್ನು ಅನುಕರಿಸುತ್ತಾರೋ ಅವರು ಅವರಲ್ಲಿ ಸೇರುತ್ತಾರೆ."
[حسن] - [رواه أبو داود وأحمد] - [سنن أبي داود - 4031]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯನಿಷೇಧಿಗಳು, ದುಷ್ಕರ್ಮಿಗಳು ಅಥವಾ ಸಜ್ಜನರನ್ನು ಅನುಕರಿಸುವವರು—ಅಂದರೆ ವಿಶೇಷವಾಗಿ ಅವರಲ್ಲಿರುವ ಯಾವುದಾದರೂ ನಂಬಿಕೆ, ಆರಾಧನೆ ಅಥವಾ ಸಂಪ್ರದಾಯವನ್ನು ಅನುಕರಿಸುವವರು ಅವರಲ್ಲಿ ಸೇರುತ್ತಾರೆ. ಏಕೆಂದರೆ ಬಾಹ್ಯವಾಗಿ ಅವರನ್ನು ಅನುಕರಿಸುವುದು ಅಂತರಂಗದಲ್ಲೂ ಅವರನ್ನು ಅನುಕರಿಸಲು ಕಾರಣವಾಗುತ್ತದೆ. ನಿಸ್ಸಂದೇಹವಾಗಿಯೂ, ಒಂದು ಜನಸಮೂಹವನ್ನು ಅನುಕರಿಸಲು ಅವರ ಬಗ್ಗೆ ಮೆಚ್ಚುಗೆಯನ್ನು ಹೊಂದಿರುವುದೇ ಕಾರಣವಾಗಿದೆ. ಇದು ಅವರನ್ನು ಪ್ರೀತಿಸಲು, ಅತಿಯಾಗಿ ಗೌರವಿಸಲು ಮತ್ತು ಅವರ ಕಡೆಗೆ ಆಕರ್ಷಿತರಾಗಲು ಕಾರಣವಾಗಬಹುದು. ಇದು ಅವರನ್ನು ಆಂತರಿಕವಾಗಿಯೂ ಮತ್ತು ಅವರು ಮಾಡುವ ಆರಾಧನೆಗಳಲ್ಲಿಯೂ ಅವನ್ನು ಅನುಕರಿಸಲು ಕಾರಣವಾಗಬಹುದು.ಅಲ್ಲಾಹು ಕಾಪಾಡಲಿ.