عن أبي أيوب الأنصاري رضي الله عنه أن رسول الله صلى الله عليه وسلم قال:
«لَا يَحِلُّ لِرَجُلٍ أَنْ يَهْجُرَ أَخَاهُ فَوْقَ ثَلَاثِ لَيَالٍ، يَلْتَقِيَانِ، فَيُعْرِضُ هَذَا وَيُعْرِضُ هَذَا، وَخَيْرُهُمَا الَّذِي يَبْدَأُ بِالسَّلَامِ».
[صحيح] - [متفق عليه] - [صحيح البخاري: 6077]
المزيــد ...
ಅಬೂ ಅಯ್ಯೂಬ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ತನ್ನ (ಮುಸಲ್ಮಾನ) ಸಹೋದರನೊಂದಿಗೆ ಮೂರು ರಾತ್ರಿಗಳಿಗಿಂತ ಹೆಚ್ಚು ಮಾತನಾಡದೆ ಇರಲು ಯಾರಿಗೂ ಅನುಮತಿಯಿಲ್ಲ. ಅವರಿಬ್ಬರು ಎದುರಾಗುವಾಗ ಒಬ್ಬ ಆ ಕಡೆ ಮತ್ತು ಇನ್ನೊಬ್ಬ ಈ ಕಡೆ ಮುಖ ತಿರುಗಿಸುತ್ತಾನೆ. ಅವರಲ್ಲಿ ಮೊದಲು ಸಲಾಮ್ ಹೇಳುವವನೇ ಅತ್ಯುತ್ತಮನು.”
[صحيح] - [متفق عليه] - [صحيح البخاري - 6077]
ಮೂರು ರಾತ್ರಿಗಿಂತ ಹೆಚ್ಚು ತನ್ನ ಮುಸ್ಲಿಂ ಸಹೋದರನೊಂದಿಗೆ ಸಿಟ್ಟು ಮಾಡಿಕೊಳ್ಳುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿರೋಧಿಸಿದ್ದಾರೆ. ಅವರಿಬ್ಬರು ಭೇಟಿಯಾಗುವಾಗ ಯಾರೂ ಸಲಾಂ ಹೇಳುವುದಿಲ್ಲ ಮತ್ತು ಮಾತನಾಡುವುದಿಲ್ಲ.
ಸಿಟ್ಟು ಮಾಡಿಕೊಂಡಿರುವ ಇವರಿಬ್ಬರಲ್ಲಿ ಸಿಟ್ಟನ್ನು ಕೊನೆಗೊಳಿಸಿ ಮೊದಲು ಸಲಾಂ ಹೇಳುವವನೇ ಅತಿಶ್ರೇಷ್ಠನು. ಸಿಟ್ಟು ಎಂಬುದರ ಮೂಲಕ ಇಲ್ಲಿ ಉದ್ದೇಶಿಸಿರುವುದು ವೈಯಕ್ತಿಕ ಉದ್ದೇಶಕ್ಕಾಗಿರುವ ಸಿಟ್ಟನ್ನಾಗಿದೆ. ಆದರೆ ಅಲ್ಲಾಹನಿಗಾಗಿ ಸಿಟ್ಟು ಮಾಡಿಕೊಳ್ಳುವುದು, ಅಂದರೆ ಪಾಪಿಗಳು, ನೂತನವಾದಿಗಳು, ದುಷ್ಕರ್ಮಿಗಳು ಮುಂತಾದವರೊಡನೆ ಸಿಟ್ಟು ಮಾಡಿಕೊಳ್ಳುವುದಕ್ಕೆ ಸಮಯದ ಮಿತಿಯಿಲ್ಲ. ಇದು ಒಳಿತಿನ ದೃಷ್ಟಿಯಿಂದ ಮಾಡಿಕೊಳ್ಳುವ ಸಿಟ್ಟಾಗಿದ್ದು, ಸಿಟ್ಟಿನ ಕಾರಣವು ನಿವಾರಣೆಯಾದರೆ ಸಿಟ್ಟು ನಿವಾರಣೆಯಾಗುತ್ತದೆ.