عن عبد الله بن عمرو رضي الله عنهما قال: قال رسول الله صلى الله عليه وسلم:
«يقالُ لصاحبِ القرآن: اقرَأ وارتَقِ، ورتِّل كما كُنْتَ ترتِّل في الدُنيا، فإن منزِلَكَ عندَ آخرِ آية تقرؤها».
[حسن] - [رواه أبو داود والترمذي والنسائي في الكبرى وأحمد] - [سنن أبي داود: 1464]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕುರ್‌ಆನಿನ ವ್ಯಕ್ತಿಯೊಡನೆ ಹೇಳಲಾಗುವುದು: ಪಠಿಸು ಮತ್ತು ಏರುತ್ತಾ ಹೋಗು. ಇಹಲೋಕದಲ್ಲಿ ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ."
[حسن] - [رواه أبو داود والترمذي والنسائي في الكبرى وأحمد] - [سنن أبي داود - 1464]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಕುರ್‌ಆನ್ ಪಠಿಸುವವನು, ಅದರ ಪ್ರಕಾರ ಜೀವನ ನಡೆಸಿದವನು ಮತ್ತು ಸದಾ ಕುರ್‌ಆನ್ ಪಠಿಸುತ್ತಾ ಕಂಠಪಾಠ ಮಾಡುತ್ತಾ ಇದ್ದವನೊಂದಿಗೆ ಅವನು ಸ್ವರ್ಗವನ್ನು ಪ್ರವೇಶಿಸಿದಾಗ ಹೀಗೆ ಹೇಳಲಾಗುವುದು: "ನೀನು ಕುರ್‌ಆನ್ ಪಠಿಸು ಮತ್ತು ಅದರ ಮೂಲಕ ಸ್ವರ್ಗದ ಪದವಿಗಳಿಗೆ ಏರುತ್ತಾ ಹೋಗು. ಇಹಲೋಕದಲ್ಲಿ ಶಾಂತವಾಗಿ ಮತ್ತು ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ."